ಸರ್ಕಾರಿ ಶಾಲೆಯ ದುರಸ್ತಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ

0
303

ಮೈಸೂರು – ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಭೇರ್ಯ ಗ್ರಾಮದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯು ಅವಸಾನದ ಅಂಚಿನಲ್ಲಿದ್ದು ಅನೈತಿಕ ಚಟಯವಟಿಕೆಗಳ ತಾಣವಾಗಿದೆ ಇದನ್ನು ತಡೆಯಲು ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರಿಗೆ ಪತ್ರ ಬರೆಯಲಾಗಿದೆ.

ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಸಾಹಿತಿ ಭೇರ್ಯ ರಾಮಕುಮಾರ್ ಅವರು ಈ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ ಇಂತಿದೆ:

ಮಾನ್ಯರೆ,

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ನಾನು ವ್ಯಾಸಂಗ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು 1913 ರಲ್ಲಿ ಕಟ್ಟಲ್ಪಟ್ಟಿದೆ. ಇದೀಗ ಬೆಳಿಗ್ಗೆ ಶಾಲಾ ಚಟುವಟಿಕೆ ನಡೆದರೆ , ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ಬೀಡಾಗಿದೆ. ಶಾಲಾ ಕೊಠಡಿಗಳು ಕುಸಿದು ಬೀಳುವ ಹಂತ ತಲುಪಿವೆ. ಈ ಶಾಲೆಯ ಕೌಂಪೌಂಡನ್ನು ಎಲ್ಲ ಕಡೆಯೂ ಕೊರೆಯಲಾಗಿದೆ. ಶಾಲಾ ಸಮಯದ ನಂತರ ಈ ಕಿಂಡಿಗಳಲ್ಲಿ ನುಗ್ಗುವ ಚರಿತ್ರಹೀನ ವ್ಯಕ್ತಿಗಳು ಶಾಲಾ ಆವರಣದಲ್ಲಿ ಮದ್ಯಪಾನ ,ಇಸ್ಪೀಟ್ ಆಟ ಆಡುತ್ತಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಶಾಲೆ ಆರಕ್ಷಕ ಠಾಣೆಯ ಪಕ್ಕದಲ್ಲೇ ಇದೆ.ಇಂತಹ ಪುರಾತನ ಕನ್ನಡ ಶಾಲೆಗಳ ಉಳಿವಿನ ಬಗ್ಗೆಯೂ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸಬೇಕಿದೆ.

ಭೇರ್ಯ ರಾಮಕುಮಾರ್, ಸಾಹಿತಿಗಳು, ಪತ್ರಕರ್ತರು, ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು.


ಶತಮಾನ ಪೂರೈಸಿರುವ ಇಂಥ ಅನೇಕ ಶಾಲೆಗಳು ರಾಜ್ಯಾದ್ಯಂತ ಇದ್ದು ಅವುಗಳ ಪುನಶ್ಚೇತನ ಕಾರ್ಯ ಪ್ರಾಧಿಕಾರ ಕೈಗೆತ್ತಿಕೊಳ್ಳಬೇಕಾಗಿದೆ