ಗ್ರಂಥಾಲಯಗಳು ಅರಿವಿನ ಜ್ಞಾನ ದೀವಿಗೆಗಳು

Must Read

ಬೆಳಗಾವಿ: ಜ್ಞಾನಕ್ಕೆ ಸಮಾನವಾದುದು ಜಗತ್ತಿನಲ್ಲಿ ಯಾವುದು ಇಲ್ಲ,ಗ್ರಂಥಾಲಯಗಳು ಜ್ಞಾನ ದಾನದ ಕೇಂದ್ರಗಳಾಗಿವೆ ಹಾಗೂ ಅರಿವಿನ ಜ್ಞಾನ ದೀವಿಗೆಗಳಾಗಿವೆ ಎಂದು ಬೆಳಗಾವಿ ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ  ರಾಮಯ್ಯ ಅವರು ಹೇಳಿದರು.

ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ, (ಸರ್ದಾರ್ ಕಾಲೇಜ್ ಆವರಣ) ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ “ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಗ್ರಂಥಾಲಯಗಳ ಪಾತ್ರ ” ಹಾಗೂ ಶೈಕ್ಷಣಿಕ ವಿಕಸನದಲ್ಲಿ ಗ್ರಂಥಾಲಯಗಳು, ವಿಷಯದ  ಕುರಿತು ದಿ.11.1.24 ರಂದು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಮುಂದುವರೆದು,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿವಿಧ ಆಕರ ಗ್ರಂಥಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು, ಇದರ ಜತೆಗೆ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಶೈಕ್ಷಣಿಕ ಗ್ರಂಥಾಲಯಗಳ ಬಗ್ಗೆ ವಿಸ್ತೃತವಾಗಿ ಉಪನ್ಯಾಸ ನೀಡುತ್ತ ನಗರ ಕೇಂದ್ರ ಗ್ರಂಥಾಲಯದಲ್ಲಿ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಇನ್ನೋರ್ವ ಅತಿಥಿಗಳಾಗಿ ಪ್ರಕಾಶ ಇಚಲಕರಂಜಿ ಆಗಮಿಸಿ, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ ಮಾಂಗಳೇಕರ ಅವರು ವಹಿಸಿದ್ದರು. ವೇದಿಕೆ ಮೇಲೆ ಪ್ರೊ ಎಸ್.ಬಿ. ತಟಗಾರ, ಐ ಕ್ಯೂ ಎ ಸಿ ಸಂಚಾಲಕರಾದ ಡಾ. ಪ್ರವೀಣ ಕೊರ್ಬು, ಪ್ರೊ. ಶಂಶುದ್ದಿನ್ ನದಾಫ, ಪ್ರವೀಣ ಅಗಸಿಮನಿ ಉಪಸ್ಥಿತರಿದ್ದರು. ಡಾ. ವಿ.ಬಿ. ನಾಯಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group