ಜೀವ ಮತ್ತು ಜೀವನ ಅಮೂಲ್ಯ ಮಾಡಿದ್ದುಣ್ಣೋ ಮಾರಾಯ ಎಂಬಂತೆ: ಚಂದ್ರಶೇಖರ ಮ. ನಾಗರಬೆಟ್ಟ

Must Read

ಸಿಂದಗಿ: ನಾವು-ನೀವೆಲ್ಲ ಕಳೆದ ವರ್ಷ ಕೋರೋನಾ ಎರಡನೇ ಅಲೆಯಲ್ಲಿ ಅನುಭವಿಸಿದ ಕಷ್ಟ ನಷ್ಟ ಹಾಗೂ ನೋಡಿದ ಸಾವುನೋವುಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.‌ನಮ್ಮ ಆತ್ಮೀಯರನ್ನು ಸಂಬಂಧಿಕರನ್ನು ಕಳೆದುಕೊಂಡು ನರಕಯಾತನೆ ಅನುಭವಿಸಿದ್ದೇವೆ ಮರಳಿ ಮೂರನೇ ಆಲೆ ಒಮಿಕ್ರಾನ್ ನಮ್ಮ ಬೆನ್ನು ತಟ್ಟುತ್ತಿದೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅಂದು ನಾವೆಲ್ಲರೂ ಮೈಮರೆತು ತಿರುಗಾಡಿ ನಮ್ಮ ಬೇಜವಾಬ್ದಾರಿಯಿಂದ ಅನೇಕ ಸಾವು-ನೋವುಗಳಿಗೆ ಕಾರಣವಾದೆವು ಆದಕಾರಣ  ಸಾರ್ವಜನಿಕರೆಲ್ಲ ಜಾಗ್ರತೆ ವಹಿಸಬೇಕು ಸರಕಾರದ ನಿಯಮದಂತೆ ಅಂತರವಹಿಸಿ ಮಾಸ್ಕಗಳನ್ನು ಧರಿಸಿ ಶುಚಿತ್ವದ ಕಡೆಗೆ ಗಮನ ಕೊಟ್ಟರೆ ನಾವು ಮಹಾಮಾರಿಯನ್ನು ಗೆಲ್ಲಬಹುದಾಗಿದೆ  ಇಲ್ಲವಾದಲ್ಲಿ ಅದೇ ಲಾಕಡೌನ್ ಹಾಗೂ ಸಾವು-ನೋವುಗಳನ್ನು  ನೋಡಬೇಕಾದೀತು ಸಾರ್ವಜನಿಕರಲ್ಲಿ ವಿನಂತಿ ಏನೆಂದರೆ ಪ್ರತಿಯೊಬ್ಬರು ಜಾಗೃತೆ ವಹಿಸಿರಿ ಮತ್ತು ಸಾರ್ವಜನಿಕರಲ್ಲಿ ಜಾಗ್ರತೆಯನ್ನು ಮೂಡಿಸಿರಿ ತಪ್ಪದೆ ಕೋರೋನಾ ನಿಯಮಗಳನ್ನು ಪಾಲಿಸಿ ಜನೆವರಿ 5ನೇ ದಿನಾಂಕದಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಕೊಡಲು ಸರಕಾರ ಪ್ರಾರಂಭಿಸಿದೆ ತಾವೆಲ್ಲರೂ ತಪ್ಪದೆ ಮಕ್ಕಳಿಗೆ ಲಸಿಕೆ ಹಾಕಿಸಿ. ಜೀವ ಮತ್ತು ಜೀವನ ಅಮೂಲ್ಯ ಅವುಗಳ ರಕ್ಷಣೆ ನಮ್ಮ-ನಿಮ್ಮೆಲ್ಲರ ಕರ್ತವ್ಯ ದಯವಿಟ್ಟು ಎಲ್ಲರೂ ಧೈರ್ಯದಿಂದಿರಿ  ಜಾಗೃತವಾಗಿರಿ ಜವಾಬ್ದಾರಿಯಿಂದ ಇರಿ ಸುರಕ್ಷಿತವಾಗಿರಿ ಎಂದು ಸೆಲ್ಯೂಟ್ ತಿರಂಗಾ ರಾಷ್ಟ್ರವಾದಿ ಸಂಘಟನೆ(ಎನ್. ಕರ್ನಾಟಕ ರಾಜ್ಯಾಧ್ಯಕ್ಷ ಚಂದ್ರಶೇಖರ ಮ. ನಾಗರಬೆಟ್ಟ ಹೇಳಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group