ಸಿಂದಗಿ; ಸಂತರ-ಮಹಾಂತರ ಮಾತುಗಳಲ್ಲಿ ಬಹಳ ಶಕ್ತಿಯಿದೆ. ಮನುಷ್ಯನಾಗಿ ಹುಟ್ಟಿ ತತ್ವಜ್ಞಾನಿಯಾಗಿ ಇರಲಿಲ್ಲ ಅಂದರೆ ಪಶು-ಪಕ್ಷಿಗಳಿಗಿಂತ ಕರಕಷ್ಟ ಕಾಣ ರಾಮನಾಥ ಅನ್ನುವ ಹಾಗೆ ಪ್ರತಿನಿತ್ಯ ಶರಣರ ತತ್ಸಂಗದಂಥ ಕಾರ್ಯದಲ್ಲಿ ಶಿವಜ್ಞಾನ ಪಡೆದುಕೊಳುವದರಿಂದ ಮನುಷ್ಯ ಆರಾಮವಾಗಿ ಇರಲು ಸಾಧ್ಯ ಎಂದು ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಅವರ 130ನೇ ಜಯಂತ್ಯುತ್ಸವ ಹಾಗೂ ಶಿವಶರಣೆಯರ ಜೀವನ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ತೊಂಗಿನ ಮಹಾದೇವಮ್ಮನವರ ಜೀವನ ಚರಿತ್ರೆ ಕುರಿತು ಮಾತನಾಡಿ, ಸಂತರ-ಮಹಾಂತರ ಮಾತುಗಳನ್ನು ಕೇಳುವುದರಿಂದ ಜೀವನ ಸ್ವಾರ್ಥಕವಾಗುತ್ತದೆ. ಅಲ್ಲದೆ ಶರಣರ ಸಂಘವನ್ನು ಸಂಯೋಜನೆ ಮಾಡುವ ಸಲುವಾಗಿ ಬಸವಣ್ಣನವರು ಬಸವಕಲ್ಯಾಣದಲ್ಲಿ ಕಲ್ಯಾಣ ಮಂಟಪ ಅನುಭವ ಮಂಟಪವನ್ನು ರಚಿಸಿದ್ದರು ಅಲ್ಲಿ ತೊಂಗಿನ ಮಹಾದೇವಮ್ಮ ಮಹಾನ್ ಶಿವಶರಣೆ ತ್ರಿಪುರಾಂತಪುರ ದೇವಸ್ಥಾನದಲ್ಲಿ ನೆಲೆಸಿದ್ದಳು ಅಂಥವರ ಜೀವನ ಚರಿತ್ರೆಯನ್ನು ಆಲಿಸಿ ಅವರ ಆದರ್ಶಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ ಅವರು ಬೆಳಿಗ್ಗೆ 4 ಗಂಟೆಗೆ ಎದ್ದು ಮನೆ ಮನೆಗೆ ತೆರಳಿ ಶಿವನಾಮ ಸ್ಮರಣೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಸಂಜೆ ಶರಣರ-ಮಹಾಂತರ ಜೀವನ ದೃಷ್ಟಾಂತಗಳ ಬಗ್ಗೆ ಪ್ರವಚನದ ಮೂಲಕ ತತ್ಸಂಗದಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದಳು ಅವರಂತೆ ನಾವೆಲ್ಲರು ಪ್ರತಿನಿತ್ಯ ನಡೆಯುವ ಮಹಾ ಶಿವಶರಣೆಯರ ಜೀವನ ಚರಿತ್ರೆಯನ್ನು ಆಲಿಸಲು ಕರೆ ತನ್ನಿ ಎಂದು ಸದ್ಬಕ್ತರಲ್ಲಿ ವಿನಂತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನೊಳ್ಳಿ ಮರುಳಾರಾದ್ಯ ಮಠದ ಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಮನಸ್ಸು ಹತೋಟಿಯಲ್ಲಿರಬೇಕಾದರೆ ಗುರುವಿನ ಸಂಸ್ಕಾರ ಹಾಗೂ ಮಾರ್ಗದರ್ಶನದಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ಗುರುವಿಗೆ ಎಷ್ಟು ಕರುಣೆಯಿಂದ ಕಾಣುತ್ತಿರೋ ಅಷ್ಟು ಗುರುವು ಕಾಯುತ್ತಾನೆ ಎಂದರು.
ಸಾನ್ನಿಧ್ಯ ವಹಿಸಿದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಜಿ, ವಿರಕ್ತಮಠದ ಬಸವಪ್ರಭು ಸ್ವಾಮಿಜಿ, ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮಿಜಿಗಳು ಆಶಿರ್ವಚನ ನೀಡಿದರು.
ಮೃತುಂಜಯ ಚನ್ನಪ್ಪ ಕತ್ತಿ ಕುಟುಂಬ ಪ್ರಸಾದ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪವಿವ ಸಂಸ್ಥೆಯ ನಿರ್ದೇಶಕ ಅಶೋಕ ವಾರದ, ಪ್ರಥಮ ದರ್ಜೆ ಗುತ್ತಿಗೆದಾರ ಸೋಮನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ ಬ್ಯಾಕೋಡ, ಎಸ್.ಡಿ.ಜೋಗೂರ, ಬಸವರಾಜ ಜೋಗೂರ, ಶ್ರೀಶೈಲ ನಂದಿಕೋಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಶರಣಬಸವ ಜೋಗೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.