ದಿಟ್ಟ ನಿಲುವಿನ ಸಾಹಿತಿ ಅಗಲಿಕೆ ; ಚಂಪಾ ನಿಧನಕ್ಕೆ ಗವಿಮಠ ಸಂತಾಪ

Must Read

ಬೆಳಗಾವಿ – ಖ್ಯಾತ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಗಟ್ಟಿಯಾದ ಹಾಗೂ ದಿಟ್ಟ ನಿಲುವಿನ ಸಾಹಿತಿ ಮತ್ತು ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ ಎಂದು ಬೆಳಗಾವಿಯ ಹಿರಿಯ ರಂಗಕರ್ಮಿ, ಸಾಹಿತಿ ಬಿ.ಎಸ್.ಗವಿಮಠ ಅವರು ಇಂದಿಲ್ಲಿ ಹೇಳಿದರು.

ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಚಂಪಾ ಮತ್ತು ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಚಂಪಾ ಅವರೊಂದಿಗೆ ನಾಡಿನ ಸಾಹಿತಿಗಳು ಅನೇಕ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಸಹಿತ ಚಂಪಾ ಅವರ ಕನ್ನಡ ನಾಡು,ನುಡಿ ಹಾಗೂ ಗಡಿಯ ಬಗ್ಗೆ ಹೊಂದಿದ್ದ ಬದ್ಧತೆಯನ್ನು ಮೆಚ್ಚಿದ್ದರು ಎಂದು ಗವಿಮಠ ಹೇಳಿದರು.

ನಾಡು ನುಡಿ ಗಡಿಯ ಪ್ರಶ್ನೆ ಬಂದಾಗ ಸಾಹಿತಿಗಳು ಹೋರಾಟಕ್ಕೆ ಮುಂದಾಗದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಗವಿಮಠ ವಿಷಾದಿಸಿದರು. ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಮಾತನಾಡಿ, ಚಂಪಾ ಅವರ ವಿಡಂಬಣೆ,ಮೊನಚು ಅವರ ಸಾಹಿತ್ಯ ಕೃತಿಗಳಲ್ಲಿ ಎದ್ದು ಕಾಣುತ್ತಿದ್ದವು ಎಂದರು.

ಅಶೋಕ ಚಂದರಗಿ ಅವರು ಮಾತನಾಡಿ, 1979 ರಲ್ಲಿ ಬಂಡಾಯ ಸಾಹಿತ್ಯ ಜನ್ಮತಾಳಿದ ದಿನದಿಂದಲೂ ತಮ್ಮ ಮತ್ತು ಚಂಪಾ ಒಡನಾಟದ ಬಗ್ಗೆ ವಿವರಿಸಿದರಲ್ಲದೇ ಕಳೆದ ವರ್ಷದ ಸಪ್ಟೆಂಬರ್ 3 ರಂದು ಬೆಂಗಳೂರಿನಲ್ಲಿ ಅವರು ಹಾಸಿಗೆ ಹಿಡಿದು ಮಲಗಿದ್ದನ್ನು ಕಂಡು ತಮಗೆ ಕರಳೇ ಕಿತ್ತು ಬಂದಂತಾಯಿತು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸಲು ತಮ್ಮ ಅಧ್ಯಕ್ಷತೆಯಲ್ಲಿ “ಚಂದರಗಿ ಸಮಿತಿ”ನೇಮಿಸಿ ವರದಿ ಪಡೆದು ಅದರ ಅನುಷ್ಠಾನದಲ್ಲಿ ಚಂಪಾ ಯಶಸ್ವಿಯಾದರು.ವರದಿ ಸಲ್ಲಿಸಿದಾಗ ಬೆಳಗಾವಿ ತಾಲೂಕಿನ 28 ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಆರಂಭಗೊಂಡವು ಎಂದು ಚಂದರಗಿ ಅವರು ಹೇಳಿದರು.

ರಮಾನಾಥ ಬನಶಂಕರಿ,ಸಿದ್ರಾಮ ತಳವಾರ, ಪಿ.ಜಿ.ಕೆಂಪನ್ನವರ, ಬಸವರಾಜ ಸುಣಗಾರ, ಡಾ.ಎಚ್.ಬಿ.ರಾಜಶೇಖರ, ಯ.ರು.ಪಾಟೀಲ, ಬಸವರಾಜ ಸುಣಗಾರ ಸಹ ಮಾತನಾಡಿದರು. ಜಾನಪದ ಗಾಯಕ ಬಸವಲಿಂಗಯ್ಯ ಅವರು ಜಾನಪದ ಲೋಕಕ್ಕೆ ನೀಡಿದ ಸೇವೆಯನ್ನು ಬಸವರಾಜ ಜಗಜಂಪಿ ಸ್ಮರಿಸಿಕೊಂಡರು. ಅಗಲಿದ ಇಬ್ಬರೂ ಗಣ್ಯರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group