Homeಸುದ್ದಿಗಳುಜಾತಿ ಪಂಥವಿಲ್ಲದ ಸಾಹಿತ್ಯ ತತ್ವಪದ

ಜಾತಿ ಪಂಥವಿಲ್ಲದ ಸಾಹಿತ್ಯ ತತ್ವಪದ

ಸಿಂದಗಿ: ಓಂಕಾರ ಗುರುವಿನ ಮೂಲಕ ಲೀನವಾಗಿ ಓಂಕಾರ ಬೀಜಮಂತ್ರವನ್ನು ಆಧಾರವಾಗಿಟ್ಟುಕೊಂಡು ತತ್ವ ಪದಗಳನ್ನು ರಚಿಸಿದ್ದಾರೆ. ಯಾವುದೇ ಜಾತಿ-ಪಂಥವಿಲ್ಲದೇ ನಡೆಯುವುದು ತತ್ವಪದ ಸಾಹಿತ್ಯವಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ|| ಎಂ.ಎಂ ಪಡಶೆಟ್ಟಿ ಹೇಳಿದರು.

ತಾಲೂಕಿನ ಪುರದಾಳ ಗ್ರಾಮದ ಬ್ರಹ್ಮಜ್ಞಾನಿ ಶ್ರೀ ಭೀಮಾಶಂಕರ ಮಹಾರಾಜರ 39ನೇ ಜಾತ್ರಾ ಮಹೋತ್ಸವ ತನ್ನಿಮಿತ್ತ ಸಾವಿರ ಹಾಡುಗಳ ಸಂತ, ತತ್ವಪದಕಾರ, ಶ್ರೀ ಯಮನೂರೇಶ ಶರಣರ ಹಾಗೂ ಶರಣೆ ಮಾತೋಶ್ರೀ ಲಿಂ. ಪಾರ್ವತಮ್ಮಗೌಡತಿ ಯ. ಬಿರಾದಾರ ರವರ ಮೂರನೆ ಪುಣ್ಯ ಸ್ಮರಣೋತ್ಸವ ಅಂಗವಾಗಿ ಅನುಭಾವ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ತತ್ವಪದ ಸಾಧನ ದಮಟಿ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ತತ್ವಪದಕಾರರು ಎಲ್ಲೆಲ್ಲೋ ಹೆಸರಿಸಿ ಕೈತೊಳೆದುಕೊಂಡಿದ್ದಾರೆ ಇನ್ನೂ ಹಲವಾರು ತತ್ವ ಪದಕಾರರು ಬಿಂಬಿತವಾಗದೇ ಅಲ್ಲಿಯೇ ಉಳಿದುಕೊಂಡಿದ್ದಾರೆ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಲ್ಲದೆ ಜಾತ್ರೆ ಎಂದರೆ ಬರೀ ತೇರು ಎಳೆದು ಹೋಗುವುದಲ್ಲ ಸಾಂಸ್ಕೃತಿಕವಾಗಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಿಂದ ಲೋಕ ಕಲ್ಯಾಣವಾಗುವುದಲ್ಲದೆ ತತ್ವಪದದ ಸಾರ ಇಡೀ ರಾಜ್ಯಾದ್ಯಂತ ಪಸರಿಸಲು ಅನುಕೂಲವಾಗುತ್ತದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ.ಗು. ಸಿದ್ದಾಪುರ ಮುಳವಾಡ ಮಾತನಾಡಿ, ತತ್ವಪದ ಗ್ರಾಮೀಣ ಸೊಗಡಿನಲ್ಲಿ ಉಳಿದುಕೊಂಡಿದೆ ಅದನ್ನು ಮೇಲೆತ್ತುವ ಕಾರ್ಯ ನಡೆಯಬೇಕಾದೆ ಎಂದು ತಿಳಿಸಿದರು.

ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಕೊರವಾರ ಹಾಗೂ ಹಂದಿಗನೂರ ರಂಗಭೂಮಿ, ತತ್ವಪದದ ಅನುಭಾವದ ತವರೂರು ಇದ್ದಹಾಗೆ ಇಲ್ಲಿ ರಂಗಭೂಮಿಗೆ ಕೊಟ್ಟ ಕೊಡುಗೆ ಬಹುದೊಡ್ಡದ್ದಾಗಿದೆ. ಭಾರತ ಬಹುಮುಖಿ ಸಂಸ್ಕೃತಿ ಹೊಂದಿ ಅನುಭಾವ ಪ್ರಜ್ಞೆ ಮೂಡಿಸಿದೆ. ಹೈದ್ರಾಬಾದ ಕರ್ನಾಟಕ ಏಕೀರಣವಾಗದೇ ರಾಜಕೀಯ ಏಕೀರಣವಾಗಿದೆ ಕಲ್ಯಾಣ ಕರ್ನಾಟಕವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು 17 ಜನ ಕವಿಗಳು ಕವನವಾಚನ ಮಾಡಿದ್ದರು.    

ದಿವ್ಯಸಾನ್ನಿಧ್ಯ ವಹಿಸಿದ ಬೋರಗಿ-ಪುರದಾಳ ಶ್ರೀ ವಿಶ್ವರಾಧ್ಯಮಠದ ಪ.ಪೂ.ತಪೋರತ್ನಂ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಸಮ್ಮುಖ ವಹಿಸಿದ ಕೋರವಾರ ಚೌಕಿಮಠದ ಶ್ರೀ ಮುರುಗೇಂದ್ರ ಮಹಾಸ್ವಾಮಿಗಳು, ಕಲಕೇರಿಯ ಸಾಂಸ್ಕೃತಿಕ ಚಿಂತಕ  ಮನು ಪತ್ತಾರ, ನೇತೃತ್ವ ವಹಿಸಿದ  ಬಸವರಾಜ ಬಡಿಗೇರ ಬೋರಗಿ, ಅಬ್ದುಲ್ ರಹಮಾನ್, ಶ್ರೀಮತಿ ದೀಪಾ ಲಗಳಿ, ತಿಳಗೂಳ ಹಿರಿಯ ತತ್ವಪದ ಗಾಯಕಿಯರಾದ ಭೀಮಬಾಯಿ ಗೌಡತಿ ಭೀಮನಗೌಡ ಬಿರಾದಾರ, ಇಮಾಂಬಿ ದೊಡಮನಿ,  ಸಾಹೇಬಗೌಡ ಯ. ಬಿರಾದಾರ, ಕಬೂಲ ಕೊಕಟನೂರ, ಎಸ್.ಎಸ್. ಸಾತಿಹಾಳ, ಮೌಲಾಲಿ ಆಲಗೂರ ಸಾಹಿತಿಗಳು, ಬೋರಗಿ, ಈರನಗೌಡ ಬಿರಾದಾರ ಸಾಹಿತಿಗಳು, ಹಂದಿಗನೂರ, ಅಮರೇಶ ದೇಸಾಯಿ ಸಾಹಿತಿಗಳು, ಬಿಂಜಲಭಾವಿ, ಅಪ್ಪು ಗಬಸಾವಳಗಿ ಕೆ.ಎಸ್.ಆರ್.ಟಿ.ಸಿ, ತಿಳಗೂಳ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಸಾಹಿತಿ ಸಾಹೇಬಗೌಡ ಯ. ಬಿರಾದಾರ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

RELATED ARTICLES

Most Popular

error: Content is protected !!
Join WhatsApp Group