ಬೆಳಗಾವಿ – ಸಾಹಿತ್ಯ ಸಮಾಜದ ಆಗುಹೋಗುಗಳಿಗೆ ಸ್ಫಂದಿಸಬೇಕು, ಪೂರಕವಾಗಿರಬೇಕು. ಸಮಾಜದಲ್ಲಿಯ ಕೆಡಕುಗಳನ್ನು ಎತ್ತಿ ತೋರಿಸಿ, ಸಮಾಜ ಶುದ್ಧೀಕರಣಕ್ಕೆ ದಾರಿ ದೀಪವಾಗಬೇಕು‛ ಎಂದು ಸಾಹಿತಿ ಎ.ಎ. ಸನದಿ ಅವರು ಹೇಳಿದರು.
ಅವರು ಬಸವನ ಕುಡಚಿಯಲ್ಲಿ ನಡೆದ ವಿವೇಕ ದಿವಟೆ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ವಿ. ಎನ್. ಹೆಗಡೆ ಅವರು ಮಾತನಾಡಿ, ‘ದಿವಟೆ ಅವರ ಕೃತಿಗಳಲ್ಲಿ ಸಮಾಜದ ವಿವಿಧ ಮಜಲುಗಳ ಅಭಿವ್ಯಕ್ತಿ ಕಾಣಬಹುದು. ಅವರ ಸಾಹಿತ್ಯ ಸಮಾಜಕ್ಕೆ ತುಂಬಾ ಉಪಯುಕ್ತವಾಗಿದೆ’ ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪುಂಡಲೀಕ ಕಾಂಬಳೆ ಅವರು, ‘ಪುಸ್ತಕ ಸಂಸ್ಕೃತಿ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ನಾವು ಮುಂದಿನ ಪೀಳಿಗೆಗೆ ಉತ್ತಮ ಪುಸ್ತಕಗಳನ್ನು ನೀಡಿ ಸಂಸ್ಕಾರವಂತನ್ನಾಗಿಸಬೇಕು.’ ಎಂದು ನುಡಿದರು.
‘ಭಾವರ್ಪಣ’ ಹಿಂದಿ ಕವನ ಸಂಗ್ರಹವನ್ನು ಡಾ. ರಾಜೇಂದ್ರ ಪೋವಾರ, ‘ಪ್ರತಿಬಿಂಬ’ ಕಥಾ ಸಂಗ್ರಹವನ್ನು ಡಾ. ವಿ.ಎನ್. ಹೆಗಡೆ ಹಾಗೂ ‘ಹೊಂಗಿರಣ’ ಕನ್ನಡ ಕವನ ಸಂಕಲನವನ್ನು ಶ ಎಂ.ವಾಯ್. ಮೆಣಸಿನಕಾಯಿ ಯವರು ಪರಿಚಯಿಸಿದರು.
ನಗರ ಸೇವಕ ಬಸವರಾಜ ಮೋದಗೇಕರ ಸಮಾರಂಭ ಉದ್ಘಾಟಿಸಿದರು. ವಕೀಲರಾದ ಮಹಾವೀರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯಾದ ಬಳಿಕ ಡಿ ಎಸ್. ಪವಾರ ಸ್ವಾಗತಿಸಿದರು. ಶ್ರೀಮತಿ ಎಸ್.ಬಿ. ಚಿಂದಿ ಅತಿಥಿಗಳ ಪರಿಚಯ ಮಾಡಿದರು. ಎಂ. ಎಸ್. ಹಿರೇಮಠ ವಂದಿಸಿದರು. ಪಾಂಡುರಂಗ ಕಾಮತ ನಿರೂಪಿಸಿದರು.