spot_img
spot_img

ಅಜ್ಞಾನವೇ ಪರಮಾನಂದ

Must Read

- Advertisement -

ಆಂಗ್ಲ ಭಾಷೆಯಲ್ಲಿ ಸುಂದರ ವಾಕ್ಯದಲ್ಲಿ ಹೇಳುವುದು ಹೀಗೆ “Ignorance is bliss” ಮನುಷ್ಯನಿಗೆ ತಿಳಿವಳಿಕೆ ಎಂಬುದು ಆತನ ಜೀವನ ರೂಪಿಸಲು ಸಹಕಾರಿ ಆಗುವ ಒಂದು ಮೌಲ್ಯ ಜೋಡಣೆ Value addition.

ಹುಟ್ಟುವಾಗ ಕೂಸಿಗೆ ತಿಳಿವಳಿಕೆ ಇದ್ದೇ ಇರುತ್ತದೆ.ಅಮ್ಮನ ಗರ್ಭದಲ್ಲಿ ಇರುವಾಗ ಅಮ್ಮ ಕೇಳಿದ,ಗ್ರಹಿಸಿದ ವಿಚಾರಗಳು ಮಗು ಹುಟ್ಟುವ ಮೊದಲೇ ಗ್ರಹಣ ಮಾಡಿರುತ್ತದೆ. ಮಹಾಭಾರತದಲ್ಲಿ, ಅಭಿಮನ್ಯು ಚಕ್ರವ್ಯೂಹ ಭೇಧಿಸುವ ವಿಧಾನ ಗರ್ಭದಲ್ಲಿರುವ ಸ0ದರ್ಭ ಕೇಳಿ ಅರಿತಿದ್ದನು ಎನ್ನಲಾಗಿದೆ. ಅರಿವೇ ಗುರು ಎಂಬ ಮಾತಿದೆ. ಎಲ್ಲಬಲ್ಲವರು ನೀವಾಗ ಬೇಕಿಲ್ಲ. ಏಕೆಂದರೆ ಎಲ್ಲ ಬಲ್ಲವ ಒಬ್ಬನೇ. ಆ ಪರಮಾತ್ಮ. ನಾವು ಜ್ಞಾನ ಗ್ರಹಿಸಲು ಹಲವಾರು ವಿಧಾನಗಳಿಗೆ ಮೊರೆ ಹೋಗುತ್ತೇವೆ. ಕೆಲವಂ ಬಲ್ಲವರಿಂದ ಕಲಿತು,ಕೆಲವಂ ಮಾಳ್ಪವರಿಂದ ನೋಡಿ… ಕೆಲವಂ ಸ್ವಯಂ ಓದಿ ಗ್ರಹಿಸಿ.ಅನುಭವವೇ ಗುರು ಅಂದರೆ ತಪ್ಪೇನು? ಒಂದಂತೂ ಮರೆಯದಿರಿ. ಎಲ್ಲ ಬಲ್ಲವರಿಲ್ಲ. ಅಲ್ಪಮತಿಗಳಲ್ಲಿ ಕೂಡ ಅನುಭವ ಜ್ಞಾನ ಇದೆ ಎಂಬುದು ಒಪ್ಪತಕ್ಕದ್ದು.

ಪಾಠವನ್ನು ಎಲ್ಲರಿಂದ ಕಲಿಯಲಾಗದು ನಿಜ,,ಆದರೆ ಎಲ್ಲರೂ ಪಾಠ ಕಲಿಯಲು ಸಾಧ್ಯವಿದೆ. ನಿಂತ ಗಡಿಯಾರ ಕೂಡ ದಿನಕ್ಕೆ ಎರಡು ಬಾರಿ ಸಮಯ ಹೇಳುತ್ತದೆ. ನಿಜ ಅಲ್ಲವೇ?

- Advertisement -

ಒಮ್ಮೆ ಮಾಡಿದ ತಪ್ಪನ್ನು ಪುನರಾವರ್ತಿಸುವುದು ಮೂರ್ಖರ ಲಕ್ಷಣ. ಅಂದರೆ ನಾವು ಅನುಭವದಿಂದ ಯಾವ ಪಾಠ ಕಲಿಯುತ್ತೇವೆಯೋ ಅದು ಜೀವಮಾನ ಪರ್ಯಂತ ಮರೆಯಲಾಗದು. ಮಾಡಿದ ತಪ್ಪನ್ನು ಪದೇ ಪದೇ ಮಾಡಬಾರದು. ಅದನ್ನೇ ಅಜ್ಞಾನವೇ ಪರಮಾನಂದ ಎನ್ನುವುದು.

ಮರೆಗುಳಿತನ ವಾರ್ಧಕ್ಯದಲ್ಲಿ ಸಾಮಾನ್ಯ.ಉಳಿದಂತೆ ಸಾಮಾನ್ಯಜ್ಞಾನ ಅಂದರೆ common sense ಅಧಿಕಾಂಶ ಜನರಲ್ಲಿ ಇದ್ದೇ ಇರುತ್ತದೆ. ಆದರೆ Commonsense today is most uncommon ಎಂಬ ಮಾತೂ ಇದೆ. ಸಂದರ್ಭವನ್ನು ಪರಿಗಣಿಸಿ ನಮ್ಮ ಸಾಮಾನ್ಯ ಜ್ಞಾನದ ಬಳಕೆ ಮಾಡುವುದು ಅನಿವಾರ್ಯ. ಆಗ ಪರಿಣತರ ಬುದ್ಧಿಮತ್ತೆ ನಿಷ್ಪ್ರಯೋಜಕ.

ಹೇಳಿಕೇಳಿ ನಮ್ಮದು ಕಲಿಯುಗ. ಅಂದರೆ ದಿನವೂ ಕಲಿಯಬೇಕಾದ ಯುಗ. ಯಾವುದೇ ಮೂಲದಿಂದ ಇರಲಿ ಹೊಸ ವಿಚಾರಕ್ಕೆ ನಾವು ತೆರೆದುಕೊಳ್ಳಲು ಹಿಂಜರಿಯಬಾರದು. ಏಕೆಂದರೆ ಜ್ಞಾನ ಸಾಗರ ಎಂಬುದು ಅತಿ ವಿಶಾಲ, ಬಹಳ ಆಳಕ್ಕೆ ಹಬ್ಬಿದೆ. ನಮ್ಮ ಜೀವಮಾನದಲ್ಲಿ ,ನಮ್ಮ ಇತಿಮಿತಿಯಲ್ಲಿ ನಾವು ಅರಗಿಸಿದ್ದೆಷ್ಟು ಎಂಬುದು ಮುಖ್ಯವಾಗುತ್ತದೆ.

- Advertisement -

ಹಾಗಿದ್ದರೆ ನೂರುವರ್ಷ ಅಬ್ಬಬ್ಬಾ ಅಂತ ಬದುಕುವ ವ್ಯಕ್ತಿ ಅಷ್ಟೆಲ್ಲ ಜ್ಞಾನಗ್ರಹಣ ಮಾಡಿ ಏನಾಗಬೇಕಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಸಮಾಜದಲ್ಲಿ ಜ್ಞಾನ ಶ್ರೀಮಂತಿಕೆಯ ಮುಂದೆ ಯಾವುದೇ ಶ್ರೀಮಂತಿಕೆ ಇಲ್ಲ. ಗಳಿಸಿದ ಯಾವತ್ತೂ ಭೌತಿಕ ವಸ್ತುವನ್ನು ಕದಿಯಬಹುದು ಅಥವಾ ಅದು ಕ್ಷಯಿಸಿ ಇಲ್ಲದೇ ಹೋಗಬಹುದು. ಆದರೆ ಜ್ಞಾನವೆಂಬ ಸಂಪತ್ತನ್ನು ಯಾರೂ ಕದಿಯುವ ಹಾಗಿಲ್ಲ,ಅದು ವೃದ್ಧಿಸಿದಂತೆ ನಮ್ಮ ಮೌಲ್ಯ ಕೂಡ ಸಾರ್ವಜನಿಕರ ದೃಷ್ಟಿಯಲ್ಲಿ ಹೆಚ್ಚಬಹುದು, ನಮ್ಮ ಸಲಹೆ, ನಮ್ಮ ಮಾತಿಗೆ ಬೆಲೆ ಕೂಡಾ ಬರಬಹುದು.

ನಮ್ಮ ಉಕ್ತಿಗಳನ್ನು ವೇದಿಕೆಯಲ್ಲಿ ನಿಂತು ಆಡುವಾಗ ಜನ ಸಾಮಾನ್ಯರಲ್ಲಿ ಆದರ ಉಂಟಾಗಲೂ ಬಹುದು.ಡಿ ವಿ ಜಿ ಅವರ ಜ್ಞಾನ ಭಂಡಾರ ಎಂದೂ ಆರದ ನೀರಿನ ಸೆಲೆಯಂತೆ ಜ್ಞಾನ ಪಿಪಾಸುಗಳ ನೀರಡಿಕೆ ತಣಿಸುತ್ತಾ ಇಂದಿಗೂ ಪ್ರಸ್ತುತ ಆಗಿರುವುದನ್ನು ಗಮನಿಸಿ.ಕೆಲವು ವಿಚಾರಗಳಿಗೆ ಕಾಲ ಮಿತಿ ಎನ್ನುವುದಿಲ್ಲ.ಅದು ನಿತ್ಯ ನೂತನ.

ಇದೇ ತತ್ವದ ವಿಸ್ತರಣೆಯಾಗಿ “Where ignorance is bliss, it is folly to be wise” ಎಂಬ ಮಾತಿದೆ. ಅಂದರೆ, ಕೆಲವೊಂದು ಬಾರಿ, ನಮಗೆ ವಿಷಯಗಳ ಅರಿವು ಇಲ್ಲದಿದ್ದರೆ ವಾಸಿ ಎಂದು. ತಟ್ಟನೆ ಹೊಳೆಯುವ ಉದಾಹರಣೆ – ಹೊಟೇಲಿನಲ್ಲಿ ತಿಂಡಿ ತಿನ್ನುವುದು. ನಾವು ಕುಳಿತಲ್ಲಿ ತಿಂಡಿ ತಿನಿಸು ಚೊಕ್ಕವಾಗಿ ತಂದು ಕೊಡುತ್ತಾರೆ.

ಆದರೆ, ಒಳಗೆ ಅಡುಗೆ ಮಾಡುವ ಸ್ಥಳ, ಪಾತ್ರೆ ತೊಳೆಯುವುದು, ಇತ್ಯಾದಿ ಅಷ್ಟೇ ಶುಚಿಯಾಗಿದೆ ಎಂದು ನಿಖರವಾಗಿ ಹೇಳಲಾಗದು. ಹಾಗಾಗಿ, ನಾವು ಆ ವಿಷಯ ಹೆಚ್ಚು ಯೋಚಿಸಬಾರದು; ಒಳಗೆ ಹೋಗಿ ನೋಡಬಾರದು. ಇತ್ತೀಚೆಗೆ ಹೊಟೇಲುಗಳಲ್ಲಿ ಶುಚಿತ್ವ ಕಾಪಾಡುವ ವಿಚಾರ ಎಚ್ಚರ ವಹಿಸುತ್ತಾರೆ ಎನ್ನಬಹುದು.

ಅದೇ ರೀತಿ ಕೆಲವು ಜನರ ವೈಯಕ್ತಿಕ ವಿಚಾರ ನಮಗೆ ತಿಳಿದಿರಲಾರದು; ಅದು ನಮಗೆ ಪರಿಚಿತವಾದ ಅವರ ಸ್ವಭಾವಕ್ಕೆ ತೀರ ವಿರುದ್ಧವಾಗಿರಬಹುದು. ಅಂತಹ ಸಂದರ್ಭದಲ್ಲಿ ಅತೀ ಮುಖ್ಯವಾದ ಪ್ರಸಂಗಗಳ ಹೊರತು, ಸಾಮಾನ್ಯವಾಗಿ ಅದು ನಮಗೆ ತಿಳಿಯದಿದ್ದರೇನೇ ಚೆನ್ನ.

ಇದೇ ರೀತಿ ಇನ್ನೊಬ್ಬರ ಕುರಿತು ಚಾಡಿ, ಹರಟೆ (gossip). ಅದನ್ನು ನಾವು ಕೇಳಬಾರದು, ಕೇಳಿದರೂ ನಂಬಬಾರದು – ಬಿಟ್ಟು ಬಿಡಬೇಕು.

ಋಷಿ ಮೂಲ ನದಿಮೂಲ ಕೂಡ ಹುಡುಕಬಾರದು ಎಂಬ ಮಾತಿದೆ. ಹುಡುಕಿದರೆ ಕೊಚ್ಚೆಯೇ ಸಿಗಬಹುದೇನೋ?

ಕೆಲವೊಂದು ಬಾರಿ ನಮ್ಮ ಕುತೂಹಲಕ್ಕೆ ಕೂಡ ಸಣ್ಣ ಪ್ರಮಾಣದ ಕಡಿವಾಣ ಹಾಕಿದರೆ ಚೆನ್ನ ಎನಿಸುತ್ತದೆ.

ಸಾಮಾನ್ಯವಾಗಿ ತುಂಬಿದ ಕೊಡ ತುಳುಕುವುದಿಲ್ಲ.ಈ ಮಾತು ಸಾರ್ವಕಾಲಿಕ ಸತ್ಯವೂ ಹೌದು. One who knows everything is not known to any one . However one who knows nothing is known to every one because of the noise he makes authoritatively.

ಅಂದರೆ ತುಂಬಾ ಅರಿವುಳ್ಳ ವ್ಯಕ್ತಿ ಸದ್ದು ಮಾಡುವುದಿಲ್ಲ ಎ0ಬ ಕಾರಣಕ್ಕೆ ಆತನನ್ನು ಅರಿತವರು ವಿರಳ.‌‌ ಅದೇ ಸಂದರ್ಭದಲ್ಲಿ ಏನೂ ಅರಿಯದ ಬಾಯಿ ಬಡಾಯಿ ಬಂಡವಾಳ ಮಾಡಿಕೊಂಡಾತ ಚಿರಪರಿಚಿತ, ಜನಪ್ರಿಯ.‌ರಮಣ ಮಹರ್ಷಿಗಳ ಬಗ್ಗೆ ಹಾಗೂ ಭಾರತೀಯ ಅಧ್ಯಾತ್ಮವಿಚಾರವನ್ನು ಪಾಶ್ಚಾತ್ಯ ಲೋಕಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ ಪೋಲ್ ಬೃಂಟನ್ ಎಂಬ ಆಂಗ್ಲ. ಈತ ಅದೊಮ್ಮೆ ತಿರುವನ್ನಾಮಲೈಯ ಸಂತ ಶ್ರೀ ರಮಣ ಮಹರ್ಷಿಗಳ ಭೇಟಿಗೆ ತೆರಳಿದ್ದ. ಎರಡು ದಿನ ಆಶ್ರಮದಲ್ಲಿ ಇದ್ದಾಗ ಮಹರ್ಷಿಗಳ ಜತೆ ಎರಡು ಶಬ್ದ ಬಿಟ್ಟರೆ ಸಂವಹನ ಇರಲಿಲ್ಲ. ನಿರಾಶೆಯಿಂದ ಆತ ಹೊರಟಾಗ ರಮಣ ಮಹರ್ಷಿಗಳು ಆತನನ್ನು ಕರೆಸಿಕೊಂಡು ಹೇಳಿದರು ” ನಿನ್ನ ಪತ್ನಿ ಮಕ್ಕಳು ಚನ್ನಾಗಿದ್ದಾರೆ ತಾನೇ?” ಬೃಂಟನ್ ಮರುತ್ತರ ನೀಡಿದ” ಹೌದು ಸ್ವಾಮೀಜಿ, ನನಗೆ ವಿಮಾನ ನಿಲ್ದಾಣದ ತನಕ ಅವರೇ ಬೀಳ್ಕೊಟ್ಟದ್ದು.

“ಹೀಗೆ ನುಡಿದ ಬೃಂಟನ್ ಆಶ್ರಮದ ಬಾಗಿಲು ದಾಟಿ ಹೊರಟಾಗ ಕಾವಲುಗಾರ ಒಂದು ಟೆಲಿಗ್ರಾಂ ಸಂದೇಶವನ್ನು ಅವರಿಗೆ ಕೊಡುತ್ತಾನೆ.‌ ಅದರಲ್ಲಿ ಇದ್ದ ವಿಷಯ ಇಷ್ಟೇ‌ “ಹೆಂಡತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಅದೇ ತಾನೇ ಸೌಖ್ಯವಾಗಿ ಮನೆಗೆ ಹಿಂದಿರುಗಿದ್ದಾಳೆ” ಬೃಂಟನ್ ಆಶ್ಚರ್ಯಗೊಂಡು ಹಿಂದಿರುಗಿ ಬಂದು ರಮಣ ಮಹರ್ಷಿಗಳ ಪಾದಸ್ಪರ್ಶ ಮಾಡಿ ಕೈಮುಗಿದು ನಿಂತಾಗ ಅವರು ಮುಗುಳ್ನಕ್ಕರು. ಅಷ್ಟೇ.

ವಿಶ್ವದಲ್ಲಿ ಇಂದು ಒಂದು ಕೋಮಿನ ವಿಧ್ವಂಸಕ ತೀವ್ರವಾದ ಹಾಗೂ ತಮ್ಮ ಧರ್ಮವನ್ನು ನಂಬದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದೆಸೆಯುವ ವ್ಯವಸ್ಥಿತ ಜಾಲ ಹರಡಿದೆ.‌ ಅಮಾಯಕರು ಅನಾಮತ್ತಾಗಿ ಬಲಿಯಾಗಿ ಅಸು ನೀಗುತ್ತಿದ್ದಾರೆ. ಇದಕ್ಕೆ ಕಾರಣ ಹಿಂಸಾತ್ಮಕ ಮತೀಯ ವಿಚಾರಗಳನ್ನು ಚಿಕ್ಕ ಮಕ್ಕಳಿರುವಾಗಲೇ ತಲೆಗೆ ತುರುಕುವ ಮನ ಪರಿವರ್ತನೆ ಅಥವಾ brain washing. ಇದು ಕೂಡ ಒಂದು ರೀತಿಯಲ್ಲಿ ಅಜ್ಞಾನದ ಚರಮ ಪಾಠ. ನನ್ನ ದೇವರು ಸರಿ ನಿನ್ನ ದೇವರು ಸರಿ ಅಲ್ಲ. ನೀನು ಕಾಫಿರ, ಆದ ಕಾರಣ ನೀನು ಸಾಯಲೇ ಲಾಯಕ್ಕು. ಈ ವಿಚಾರಧಾರೆ ಅತ್ಯಂತ ಮಾರಕ ಈ ದುರುಳ ಅಜ್ಞಾನಿಗಳ ವರಸೆಯಿಂದಾಗಿ ವಿಶ್ವದಲ್ಲಿ ರಕ್ತದ ಕೋಡಿ ಹರಿಯುತ್ತಿರುವುದಕ್ಕೆ ಮುಖ್ಯ ಕಾರಣ ಈ ಕೋಮಿನ ಶಾಂತಿಪ್ರಿಯತೆ ಎಂಬ ಸೋಗು. ಅಜ್ಞಾನದಿಂದ ಹಿಂಸಾಚಾರ.ಅದಕ್ಕೆ ಶಾಂತಿಯ ಲೇಪ…ಅಬ್ಬಬ್ಬ ಎಂತಹ ಸೋಗಲಾಡಿತನ!ಧರ್ಮಕ್ಕೆ ಅದೆಂತ ವಂಚನೆ !!

ಅಜ್ಞಾನವೇ ಪರಮಾನಂದವಲ್ಲ ಭೀಕರವಾದದ ಮೂಲ ಎಂದು ಬದಲಾಯಿಸಿ ಕೊಳ್ಳುವ ಸಮಯದಲ್ಲಿ ನಾವು ಬದುಕುತ್ತಿದ್ದೇವೆ..ದೇವರೇ ಕಾಪಾಡಬೇಕು ಈ ವಿಶ್ವವನ್ನು.


ಬಿ ನರಸಿಂಗ ರಾವ್,ಕಾಸರಗೋಡು

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group