- Advertisement -
ಹಾಸನ – ತಾಲೂಕಿನ ಗೊರೂರಿನಲ್ಲಿ ದಿನಾಂಕ 07-07-2024ರಂದು ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 120 ಜನ್ಮಜಯಂತ್ಯುತ್ಸವ ಕಾರ್ಯಕ್ರಮವನ್ನು, ಗಾಂಧಿ ಭವನ ಬೆಂಗಳೂರು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ತಾಲ್ಲೂಕು ಘಟಕ ಮತ್ತು ಗೊರೂರು ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.
ರಾಜ್ಯಮಟ್ಟದ ಕಾರ್ಯಕ್ರಮವನ್ನು, ಹುಟ್ಟೂರಾದ ಗೊರೂರುನಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ರಾಜಬೀದಿಯಲ್ಲಿ ರಾಮಸ್ವಾಮಿ ಅಯ್ಯಂಗಾರ್ ರವರ ಭಾವಚಿತ್ರ ಮೆರವಣಿಗೆ ನಂತರ ವಿಚಾರಗೋಷ್ಠಿ, ಕವಿಗೋಷ್ಠಿ. ಸಂಗೀತ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ಕವಿಗೋಷ್ಠಿ ಮತ್ತು ಸಂಗೀತ ನೃತ್ಯ ದಲ್ಲಿ ಭಾಗವಹಿಸಲು ಇಚ್ಛಿಸುವವರು 9743222421ಪೋನ್ ನಂಬರ್ ಗೆ ಹೆಸರು ನೋಂದಾಯಿಸಿ ಕೊಳ್ಳಲು ಸುಂದರೇಶ್ ಡಿ ಉಡುವಾರೆ ಸಾಹಿತಿಗಳು ಹಾಗೂ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ ಅರಕಲಗೂಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ,