ಸಾಹಿತಿ ಡಾ.ಭೇರ್ಯ ರಾಮಕುಮಾರ್ ಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ

0
512

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಪ್ರತಿವರ್ಷವೂ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುತ್ತಿರುವ ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಸಾಹಿತ್ಯ ಸಂಘಟಕರಾದ ಡಾ.ಭೇರ್ಯ ರಾಮಕುಮಾರ್ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ರಾದ .ಹೆಚ್. ಎಲ್.ಯಮುನಾ ತಿಳಿಸಿದ್ದಾರೆ.

ಸಾಹಿತ್ಯ ಸಂಘಟನೆ, ಸಾಹಿತ್ಯ ರಚನೆ, ಸಾಮೂಹಿಕ ನೇತ್ರದಾನ, ಪರಿಸರ ಜಾಗೃತಿ ಕ್ಷೇತ್ರದಲ್ಲಿ ನ ಅಮೂಲ್ಯ ಸಾಧನೆಗಾಗಿ ಡಾ.ಭೇರ್ಯ ರಾಮಕುಮಾರ್ ಅವರನ್ನು ಕನ್ನಡ ವಿಕಾಸ ರತ್ನ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮುಂಬರುವ ಡಿಸೆಂಬರ್ 25 ರಂದು ಮೈಸೂರಿನ ಲ್ಲಿ ನಡೆಯಲಿರುವ ರಾಜ್ಯಮಟ್ಟದ ಕನ್ನಡ ಹಬ್ಬದಲ್ಲಿ ಗಣ್ಯರ ಸಮ್ಮುಖದಲ್ಲಿ ಕನ್ನಡ ವಿಕಾಸ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದವರು ವಿವರಿಸಿದ್ದಾರೆ.