ಬೀದರ : ಬೀದರನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬೆಳಿಗ್ಗೆ ಬೆಳಿಗ್ಗೆಯೇ ಶಾಕ್ ತಲುಪಿಸಿದ್ದು ಪಶು ವೈದ್ಯಕೀಯ ಹಾಗೂ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾರೆ
ಒಟ್ಟು ೨೫ ಕಡೆ ದಾಳಿ ನಡೆಸಲಾಗಿದ್ದು ಪ್ರೊಫೆಸರ್ಸ್, ಇಂಜಿನಿಯರ್ಸ್ ಸೇರಿ ಅನೇಕ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ವಿಶ್ವ ವಿದ್ಯಾಲಯದಲ್ಲಿ ನಡೆದಿರುವ ಹಗರಣಗಳ ಕುರಿತು ಮಾಹಿರಿ ಕಲೆ ಹಾಕುತ್ತಿದ್ದಾರೆ.
ಬೀದರ, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಲೋಕಾಯುಕ್ತರು ೬೭ ಕಡೆ ೬೯ ತಂಡಗಳಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ಹಗರಣ :
೨೦೨೧ ರಲ್ಲಿ ಕುಲಪತಿಯಾಗಿದ್ದು ಈಗ ನಿವೃತ್ತರಾಗಿರುವ ಡಾ. ನಾರಾಯಣ ಸ್ವಾಮಿ ಮತ್ತು ನಿವೃತ್ತ ಲೆಕ್ಕ ಪರಿಶೋಧಕ ಕೆ ಎಲ್ ಸುರೇಶ ಎಂಬ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಸುಮಾರು ೩೨ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ೨೦೨೧ ರಲ್ಲಿ ಪ್ರಕರಣ ದಾಖಲಾಗಿತ್ತು. ಎಡಿಜಿಪಿ ಮನೀಶ ಖರ್ಬಿಕರ್ ಹಾಗೂ ಐಜಿಪಿ ಸುಬ್ರಮಣ್ಯರಾವ್ ನೇತೃತ್ವದಲ್ಲಿ ಈ ಲೋಕಾ ದಾಳಿ ನಡೆದಿದೆ.
ವರದಿ : ನಂದಕುಮಾರ ಕರಂಜೆ, ಬೀದರ

