spot_img
spot_img

ಪ್ರಿಯತಮೆ ಮದುವೆ ದಿನವೇ ಮಸಣ ಸೇರಿದ ಪ್ರಿಯತಮ.

Must Read

spot_img
- Advertisement -

ಬೀದರ – ಪ್ರೀತಿಸಿದ್ದ ಹುಡುಗಿ ಬೇರೆ ಮದುವೆಯಾಗಿದ್ದರಿಂದ ನೊಂದ ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದ್ದು ಆತನ ಮನೆಯವರು ಮಾತ್ರ ಇದು ಕೊಲೆ ಎಂದು ಆರೋಪ ಮಾಡಿರುವ ಪ್ರಕರಣ ಜರುಗಿದೆ.

ಬೀದರ್‌ ನಗರದ ಹೊರವಲಯದ ನೌಬಾದ್ ಹೈವೇ ಬ್ರಿಡ್ಜ್ ಬಳಿ ರೈಲ್ವೆ ಹಳಿ ಮೇಲೆ ತುಂಡರಿಸಿದ್ದ ಬಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದ ವೆಂಕಟೇಶಕುಮಾರ್ (22) ಮೃತ ಯುವಕ.
ಖಾಸಗಿ ಕಂಪನಿಯೊಂದರಲ್ಲಿ‌ ಕೆಲಸ ಮಾಡುತ್ತಿದ್ದ ವೆಂಕಟೇಶ ಎರಡ್ಮೂರು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿಗೆ ಬೇರೆ ಕಡೆ ಮದುವೆ ನಿಗದಿಯಾಗಿದ್ದು ಯುವತಿಯ ಮದುವೆ ದಿನವೇ ಕೊಲೆ‌ ಮಾಡಿದ್ದಾರೆಂದು ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

- Advertisement -

ಘಟನೆ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿರೋ ಬೈಕ್ ಪತ್ತೆಯಾಗಿದೆ. ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಪೊಲೀಸರ ದೌಡು, ಸ್ಥಳ‌ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group