2026 ಮಾರ್ಚ-6:ಯಡೂರ ವೀರಭದ್ರ ಕ್ಷೇತ್ರದಲ್ಲಿ ಮಹಾಕುಂಭಾಭಿಷೇಕ-ಕೃಷ್ಣಾರತಿ

Must Read
ವೀರಶೈವ ಧರ್ಮದ ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನುಡಿ
ಧಾರವಾಡ : ವೀರಭದ್ರ ದೇವರು ಲಿಂಗರೂಪದಲ್ಲಿ ನೆಲೆಸಿರುವ ಚಿಕ್ಕೋಡಿ ತಾಲೂಕು ಯಡೂರು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಜಗೋಪುರಗಳಿಗೆ 2026ರ ಮಾರ್ಚ-6 ರಂದು ಮಹಾಕುಂಭಾಭಿಷೇಕ ಹಾಗೂ ಕಾಶಿಯ ಗಂಗಾರತಿ ಮಾದರಿಯಲ್ಲಿಯೇ ಕೃಷ್ಣಾ ನದಿ ತೀರದಲ್ಲಿ ಕೃಷ್ಣಾರತಿ ನಡೆಯಲಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದರು.


ಅವರು ಸೋಮವಾರ(ಅ.27) ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಯಡೂರ ಕ್ಷೇತ್ರದ ಶ್ರೀವೀರಭದ್ರ ದೇವರ ಭಕ್ತಗಣದ ಧರ್ಮ ಜಾಗೃತಿ ಸಂವಹನ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
 
   ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸುಮಾರು ೫ ಸಾವಿರಕ್ಕೂ ಅಧಿಕ ಮಹಿಳೆಯರು ಕೃಷ್ಣಾ ನದಿಯಿಂದ ಕುಂಭಗಳಲ್ಲಿ ಹೊತ್ತು ತರುವ ಪವಿತ್ರ ಜಲದಿಂದ ಪಂಚಪೀಠಗಳ ಎಲ್ಲ ಜಗದ್ಗುರುಗಳ ಸನ್ನಿಧಾನದಲ್ಲಿ ಹಾಗೂ ಸಾವಿರಾರು ಮಠಾಧೀಶರ ಸಮ್ಮುಖದಲ್ಲಿ ಮಹಾಕುಂಭಾಭಿಷೇಕ ನಡೆಯುತ್ತಿದೆ. ಇದೇ ದಿನ ಭಕ್ತರಿಗಾಗಿ ನಿರ್ಮಿಸಿರುವ ನೂತನ ಯಾತ್ರಿ ನಿವಾಸ ಮತ್ತು ಥೀಮ್ ಪಾರ್ಕಗಳ ಲೋಕಾರ್ಪಣೆಯೂ ಜರುಗಲಿದ್ದು, ಮಾ.೬ರಂದೇ ಸಂಜೆ ಲಕ್ಷ ದೀಪೋತ್ಸವವೂ ನಡೆಯಲಿದೆ ಎಂದರು.

ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ರಾಜ್ಯಗಳಲ್ಲಿರುವ ಯಡೂರ ಕ್ಷೇತ್ರದ ಶ್ರೀವೀರಭದ್ರ ದೇವರ ಭಕ್ತ ಸಮೂಹದ ಜೊತೆಗೆ ಸಂವಹನ ನಡೆಸಿದ್ದು, ಅವರೆಲ್ಲರೂ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ನಮ್ಮ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿರುವ ಯಡೂರ ಕ್ಷೇತ್ರದ ಶ್ರೀವೀರಭದ್ರ ದೇವರ ಭಕ್ತ ಸಮೂಹವೂ ಪಾಲ್ಗೊಂಡು ಎಲ್ಲರಿಗೂ ಭಗವತ್ ಕೃಪೆ ಪ್ರಾಪ್ತವಾಗಲಿ ಎಂಬ ಮಹೋದ್ದೇಶದಿಂದ ಎಲ್ಲೆಡೆ ಭಕ್ತಗಣದ ಧರ್ಮ ಜಾಗೃತಿ ಸಂವಹನ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದೂ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿರಕೋಳದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷರಾದ ಸುಳ್ಳ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಗಳಾದ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಜಿಲ್ಲಾ ಘಟಕ್ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಯಡೂರು ಕ್ಷೇತ್ರದ ಕಟ್ಟಡ ನಿರ್ಮಾಣ ಪ್ರಭಾರಾಧಿಕಾರಿ ಸುನೀಲ ಬಿರದೆ ಮಾತನಾಡಿದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ದೊಡವಾಡ ಹಿರೇಮಠದ ಶ್ರೀಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಳ್ಯಾಳ-ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ಶ್ರೀರೇಣುಕಪ್ರಸಾದ ಸ್ವಾಮೀಜಿ, ಯಡೂರು ಕಾಡಸಿದ್ಧೇಶ್ವರಮಠದ ಉತ್ತರಾಧಿಕಾರಿ ಶ್ರೀರೇಣುಕ ದೇವರು, ಮುರುಘಾಮಠದ ಧರ್ಮದರ್ಶಿ ಮಂಜುನಾಥ ಸಾಲಿಮಠ, ಯಡೂರು ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಅಡವಯ್ಯ ಅರಳಿಕಟ್ಟಿಮಠ, ವಿಶ್ರಾಂತ ಬ್ಯಾಂಕ್ ಅಧಿಕಾರಿ ಈಶ್ವರ ತುರಮರಿ, ಬಸವರಾಜ ಕೌಜಲಗಿ, ಹುಬ್ಬಳ್ಳಿ-ಧಾರವಾಡ, ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ನವನಗರ, ನವಲೂರ ಗ್ರಾಮಗಳ ಭಕ್ತರು ಇದ್ದರು.


‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಸೋಮಲಿಂಗಶಾಸ್ತಿç ಗುಡ್ಡದಮಠ ವಂದಿಸಿದರು.

ವರದಿ : ಗುರುಮೂರ್ತಿ ಯರಗಂಬಳಿಮಠ (ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ಧಾರವಾಡದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ), ಅಮ್ಮಿನಬಾವಿ ೫೮೧೨೦೧ ಮೊ : ೯೯೪೫೮೦೧೪೨೨

LEAVE A REPLY

Please enter your comment!
Please enter your name here

Latest News

ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?

೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ...

More Articles Like This

error: Content is protected !!
Join WhatsApp Group