ಮೈಸೂರು ಮಹಾನಗರ ಪಾಲಿಕೆ ವಲಯ-೨ ರ ವರ್ಕ್ಇನ್ಸ್ಸ್ಪೆಕ್ಟರ್ ಆಗಿ ೪೨ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವಸ್ವಾಮಿ ರವರನ್ನು ಅರ್ಜಿ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಮಹದೇವು, ಕಾರ್ಯದರ್ಶಿ ಶಾಂತರಾಜು ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷರಾದ ಮಹದೇವು, ಪಾಲಿಕೆ ಸಿಬ್ಬಂದಿ ಪ್ರಸಾದ್, ರಾಜು, ಮುಖಂಡರಾದ ಜಿತೇಂದ್ರ, ಈಶ್ವರ್.ಸಿ, ಮೋಹನ್, ಅಶೋಕ್, ರಕ್ಷಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.