ಪೋಲಿಯೊ ಹನಿ ಹಾಕಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಿ – ಎಚ್.ಆರ್.ಪೆಟ್ಲೂರ್

Must Read

ಸವದತ್ತಿ:”ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ೧೯೯೪ ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಹಳಷ್ಟು ಕಾಳಜಿ ವಹಿಸಿದ್ದು ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಬೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು” ಎಂದು ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್ ತಿಳಿಸಿದರು.

ಅವರು ಪಟ್ಟಣದ ಸವಳಬಾವಿ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ಶಾಲೆ ಯ ಪೋಲಿಯೋ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜಾಥಾ ಪ್ರಭಾತಫೇರಿ ಮೂಲಕ ಘೋಷಣೆ ಹೇಳುತ್ತಾ ಸವಳಬಾವಿ ಓಣಿ, ಜೋಶಿ ಓಣಿ, ಕಾಯಿಪಲ್ಲೆ ಮಾರ್ಕೆಟ್ ಹುಡೇದ ಓಣಿಗಳ ಮುಖಾಂತರ ಮಕ್ಕಳೊಂದಿಗೆ ಪ್ರಭಾತಪೇರಿ ಜರುಗಿತು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶ್ರೀಮತಿ. ಆರ್.ಹೆಚ್. ನಾಗನೂರ, ಶ್ರೀಮತಿ.ವಿ.ವಿ. ಸುಬೇದಾರ, ಶ್ರೀಮತಿ. ಎಸ್.ಎಮ್.ಮಲ್ಲೂರ, ಶ್ರೀಮತಿ. ವಿಜಯಲಕ್ಷ್ಮಿ. ಕಮ್ಮಾರ, ಶ್ರೀಮತಿ. ನೀಲಮ್ಮ. ಪಟ್ಟಣಶೆಟ್ಟಿ, ಹಾಗೂ ಶ್ರೀ. ಬಿ.ಎನ್.ಹೊಸೂರ, ಶ್ರೀ. ಎಸ್.ಎಮ್.ದೀಕ್ಷಿತ, ಜೆ.ಎಸ್. ಗೊರೋಬಾಳ, ಹಾಗೂ ಹೆಚ್.ಆರ್.ಪೆಟ್ಲೂರ ಹಾಜರಿದ್ದರು.

ಮುಖ್ಯೋಪಾಧ್ಯಾಯರಾದ ಶ್ರೀಮತಿ.ಎಲ್.ಎನ್ ಗಾಣಿಗೇರ ಮಾತನಾಡಿ “ದೇಶಾದ್ಯಂತ ರವಿವಾರ ದಿನಾಂಕ.27/02/2022 ರಂದು ನಡೆಯುವ ಪೋಲಿಯೋ ಅಭಿಯಾನಕ್ಕಾಗಿ ಸೂಕ್ತ ವಯಸ್ಸಿನ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಲು” ಸಾರ್ವಜನಿಕ ರಲ್ಲಿ ಮನವಿ ಮಾಡಿದರು. ಜಗದೀಶ ಗೋರಾಬಾಳ ಪೋಲಿಯೋ ಲಕ್ಷಣಗಳನ್ನು ಹಾಗೂ ಚಿಕಿತ್ಸೆ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group