ನಡೆ ನುಡಿಯಲ್ಲಿ ಸಂಸ್ಕಾರದ ಮೂಲಕ ಬದುಕು ಸಾರ್ಥಕಪಡಿಸಿಕೊಳ್ಳಿ- ವಿರುಪಾಕ್ಷ ಸ್ವಾಮೀಜಿ

Must Read

ಮುನವಳ್ಳಿಃ “ನಮ್ಮ ಬದುಕಿನಲ್ಲಿ ನಿತ್ಯವೂ ನಾವು ಒಳ್ಳೆಯ ಮಾತುಗಳನ್ನಾಡಬೇಕು.ಒಳ್ಳೆಯದನ್ನು ನೋಡಬೇಕು.ಒಳ್ಳೆಯ ವಿಚಾರ ಮಾಡುವು ಜೊತೆಗೆ ಉತ್ತಮ ಸಂಸ್ಕಾರದ ಮೂಲಕ ಬದುಕಿದರೆ ನಮ್ಮ ಬದುಕು ಸಾರ್ಥಕ.” ಎಂದು ಉಪ್ಪಿನಬೆಟಗೇರಿಯ ವಿರುಪಾಕ್ಷ ಮಹಾಸ್ವಾಮಿಗಳು ಹೇಳಿದರು ಅವರು ಹಿಟ್ಟಣಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ಹಾಗೂ ಲಿಂಗೈಕ್ಯ ಮ.ಘ.ಚ.ಸಂಗಮೇಶ್ವರ ಶಿವಾಚಾರ್ಯರ ೮೭ ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುನವಳ್ಳಿ ಸೋಮಶೇಖರಮಠದ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳು ಏಣಗಿಯ ಬಂಗಾರಜ್ಜನ ಮಠದ ಪರಮ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಹುಲ್ಲೂರಿನ ಶ್ರೀ ಸಿದ್ರಾಮಶಾಸ್ತ್ರಿಗಳು ಉಪಸ್ಥಿತರಿದ್ದರು.

ಪ್ರವಚನಕಾರರಾಗಿ ಬೈಲಹೊಂಗಲದ ವೇದಮೂರ್ತಿ ಶಿದ್ರಾಮಶಾಸ್ತ್ರಿಗಳು ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಹೊಳೆಹೊಸೂರಿನ ಕಲಾವಿದ ಗಂಗಾಧರ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ಬಸಪ್ಪ ರಾಮನಗೌಡ, ಸಂಗಪ್ಪ ಹುಲಿಗೊಪ್ಪನವರ,ಈರಯ್ಯ ಹಿರೇಮಠ, ಶೇಖರ ಕಬ್ಬೂರ, ಪತ್ರಪ್ಪ ಅಂಗಡಿ, ಶಿವನಗೌಡ ರಾಮನಗೌಡರ, ದುಂಡಯ್ಯ ಹಿರೇಮಠ,ಸಂಗಪ್ಪ ತಳವಾರ, ಈರಪ್ಪ ನಾವಲಗಟ್ಟಿ, ಬಸವರಾಜ ದೊಡಮನಿ,ಬಸವಣ್ಣೆಪ್ಪ ವಕ್ಕುಂದ ಮೊದಲಾದವರು ಉಪಸ್ಥಿತರಿದ್ದರು, ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು. ವೀರಪ್ಪ ಕಳಸನ್ನವರ,ವಿಜಯ ಕಳಸನ್ನವರ ಸಂಗೀತ ಸೇವೆ ನೀಡಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group