spot_img
spot_img

ಕೃಷ್ಣೆಯ ತೀರದುದ್ದಕ್ಕೂ ಮಲ್ಲಯ್ಯನ ಕಂಬಿ ಯಾತ್ರೆ

Must Read

spot_img
- Advertisement -

ಮಾಡಿರಿ ಮಲ್ಲಯ್ಯನ ಧ್ಯಾನ ಆಗೋದು ಜನ್ಮ ಪಾವನ

 

ಬ್ಯಾಸಕಿ ದಿವಸಾಕಾ ಬೇವಿನ ಮರತಂಪ!
ಬೇವಿನ ಮರದ ಕೆಳಗೆ ಕೂತುಂಡರ ಸ್ವರ್ಗ ನೋಡ ಚೆನ್ನಮಲ್ಲಿಕಾರ್ಜುನ !

- Advertisement -

ಎನ್ನುವಂತೆ ಈ ದೃಶ್ಯ ಕಾಣುವುದು ಉತ್ತರ ಕರ್ನಾಟಕದ ಕೃಷ್ಣೆ ತೀರದುದ್ದಕ್ಕೂ ಪಾದಯಾತ್ರೆ ಮಾಡುವ ಮಲ್ಲಯ್ಯನ ಭಕ್ತಿಯ ಶಕ್ತಿ ತುಂಬಿಕೊಂಡ ಭಕ್ತರ ಹೃದಯದಲ್ಲಿ ಬರುವ ಮಾತಿದು

ಹೋಳಿ ಹುಣ್ಣಿಮೆಯಿಂದ ಪ್ರಾರಂಭವಾಗುವ ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆಗೆ ಉತ್ತರ ಕರ್ನಾಟಕದ ಬೆಳಗಾವಿ ಬಾಗಲಕೋಟೆ ವಿಜಯಪುರ ರಾಯಚೂರು ಗದಗ ಯಾದಗಿರಿ ಕಲಬುರಗಿ ಜಿಲ್ಲೆ ಗಳು ಸೇರಿದಂತೆ ಮಹಾರಾಷ್ಟ್ರದ ಗಡಿ ಜಿಲ್ಲೆಗಳ ಭಕ್ತರು ಆಂಧ್ರದ ಶ್ರೀಶೈಲ ಮಲ್ಲಯ್ಯ ಗಿರಿಯ ದಾರಿ ಉದ್ದಕ್ಕೂ ಪಾದಯಾತ್ರೆ ಹೊರಡುವ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ಮರದ ನೆರಳಿಗೆ ಆಶ್ರಯ ಪಡೆಯದವರೆ ಇಲ್ಲ ಯುಗಾದಿ ಹಬ್ಬಕ್ಕೆ ತನ್ನ ಒಡಲನ್ನೆಲ್ಲ ತುಂಬಿಕೊಂಡು ನಿಂತಿರುವ ಬೇವಿನ ಗಿಡಗಳ ನೆರಳಿಗೆ ಅದೆಷ್ಟೋ ಪಾದಯಾತ್ರೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ಮಲ್ಲಯ್ಯನ ಸ್ಮರಿಸುತ್ತ ವಿಶ್ರಾಂತಿ ಪಡೆಯುವ ಭಕ್ತರೆಲ್ಲರೂ ಪ್ರಸಾದ ಹಣ್ಣು ಹಂಪಲಗಳು ತಂಪು ಪಾನೀಯಗಳನ್ನು ಬೇವಿನ ಗಿಡದ ಹಾಗೂ ಹಾಲದ ಮರಗಳಂತ ದೊಡ್ಡ ಮರಗಳ ಕೆಳಗೆ ಕುಂತು ಕುಡಿದರೆ ಆಗುವ ಆನಂದಕ್ಕೆ ಪಾರವೇ ಇರಲ್ಲ ಎನ್ನುತ್ತಾರೆ ಮಲ್ಲಯ್ಯನ ಭಕ್ತರು. ಮಹಾರಾಷ್ಟ್ರದ ಗಡಿಯಿಂದ ಹಿಡಿದು ಉತ್ತರ ಕರ್ನಾಟಕದ ಕೃಷ್ಣಾ ತೀರದ ಉದ್ದಕ್ಕೂ ಹಲವು ಜಿಲ್ಲೆಗಳಿಂದ ಹೊರಡುವ ಐದರಿಂದ ಆರು ಲಕ್ಷ ಪಾದಯಾತ್ರಿಗಳಿಗೆ ಮಲ್ಲಯ್ಯನ ಭಕ್ತಿಯ ಹಾಡು ಹಾಡುತ್ತಾ ಕಂಬಿಯ ಯಾತ್ರೆಯೊಂದಿಗೆ ದಾರಿಉದ್ದಕ್ಕೂ ಪ್ರಸಾದಕ್ಕೆ ನೀರು ಹಣ್ಣು ಹಂಪಲಗಳು ಮತ್ತು ಆರೋಗ್ಯ ತಪಾಸಣಾ ಕೇಂದ್ರಗಳಿಗೆನು ಕಡಿಮೆ ಇರಲ್ಲ

ಸುಮಾರು ಎರಡು ಮೂರು ದಶಕಗಳ ಹಿಂದೆ ನಡೆದುಕೊಂಡು ಹೋಗುವಾಗ ಭಕ್ತರಿಗೆ ಹನಿ ನೀರಿಗೂ ಪಾದ ಯಾತ್ರೆ ಮಾಡುವವರು ಪಡಬಾರದ ಪಾಡು ಪಡುತ್ತಿದ್ದರು ಆದರೆ ಈಗ ಮಲ್ಲಯ್ಯನ ಅನುಗ್ರಹದಿಂದ ಸುಮಾರು 600 ರಿಂದ 650 ಕಿಲೋಮೀಟರ್ ವರೆಗೂ ಪ್ರಸಾದದ ವ್ಯವಸ್ಥೆಗಳು ನಿರಂತರವಾಗಿ ಇರುತ್ತದೆ ಆಧುನಿಕ ಕಾಲದ ಈಗಿನ ಭಕ್ತರು ಮಲ್ಲಯ್ಯನಿಗೆ ಭಿನ್ನ ವಿಭಿನ್ನ ರೀತಿಯಲ್ಲಿ ತಮ್ಮ ಭಕ್ತಿ ಪರಾಕಾಷ್ಟೆ ಮೆರೆಯುತ್ತಿದ್ದು. ಕ್ವಿಂಟಾಲ್ ಗಿಂತಲೂ ಅಧಿಕ ಜೋಳದ ಚೀಲ ಹೊತ್ತುಕೊಂಡು ಮರಗಾಲು ಕಟ್ಟಿಕೊಂಡು ಸುಡು ಬಿಸಿಲಿನಲ್ಲಿ ಬರಿಗಾಲಿನಿಂದ ನಡೆಯುವುದು ಮಕ್ಕಳಾಗದವರು ಮಕ್ಕಳಾಗಲಿ ಎಂದು ನಡೆದುಕೊಂಡು ಹೋದವರು ಮಕ್ಕಳಾದ ನಂತರ ಆ ಮಗುವನ್ನೇ ಹೊತ್ತುಕೊಂಡು ಶ್ರೀಶೈಲಕ್ಕೆ ನಡೆದುಕೊಂಡು ಹೋಗುವ ಹರಕೆ ಹೊತ್ತಿರುವ ಅದೆಷ್ಟೋ ಭಕ್ತರು ತಮ್ಮ ಹರಕೆ ಈಡೇರಿಕೆಗಾಗಿ ವಿಭಿನ್ನ ಶೈಲಿಯ ತಮ್ಮದೇ ಭಕ್ತಿಯಲ್ಲಿ ಮಲ್ಲಯ್ಯನನ್ನು ಕಾಣಬೇಕು ಎನ್ನುವ ಹಂಬಲದೊಂದಿಗೆ ಪಾದಯಾತ್ರೆಗೆ ತೆರಳುವ ಭಕ್ತರ ಭಕ್ತಿಯ ವಾಸವೇ ಶ್ರೀಶೈಲ ಮಲ್ಲಯ್ಯನಲ್ಲಿ ನೆಲೆ ಊರಿರುತ್ತದೆ ಎನ್ನುವ ನಂಬಿಕೆಯಿಂದ ಭಕ್ತರು ಯುಗಾದಿ ಪಾಡ್ಯದ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುವ ಸಂಭ್ರಮ ನೋಡುವುದೇ ಭಾಗ್ಯ ಎನ್ನುವಂತೆ ಕಂಗೊಳಿಸುತ್ತಿರುತ್ತದೆ.ಕಂಬಿಯ ಯಾತ್ರೆ ಸಂಭ್ರಮದೊಂದಿಗೆ ತೆರಳುವ ಭಕ್ತರು

- Advertisement -

ಮಾಡಿರಿ ಮಲ್ಲಯ್ಯನ ಧ್ಯಾನ ಆಗುವುದು ಜನ್ಮ ಪಾವನ

ನಡಿ ನಡಿ ಶ್ರೀಶೈಲಕ ಹೋಗೋಣ ನಡಿ ಮಲ್ಲಯ್ಯನ ಸೇವೆ ಮಾಡೋನ್ನಡಿ

ಮೂರು ಬಟ್ಟ ವಿಭೂತಿ ಒಳಗ ಮಲ್ಲಯ್ಯ ಇರುತ್ತಾನ

ಮಲ್ಲಯ್ಯ ಮಲ್ಲಯ್ಯ ಸಿರಿಗಿರಿ ಮಲ್ಲಯ್ಯನ ನೋಡೋಣ ಬನ್ನಿ

ಹೀಗೆ ಹಲವು ಕಂಬಿಯ ಹಾಡುಗಳೊಂದಿಗೆ ಕನಿಷ್ಠ ಒಂದು ಕಂಬಿಯ ತಂಡದಲ್ಲಿ ನೂರಕ್ಕಿಂತ ಹೆಚ್ಚು ಗರಿಷ್ಠ ಸಾವಿರಕ್ಕಿಂತ ಹೆಚ್ಚು ಭಕ್ತರು ಇರುವ ತಂಡೋಪ ತಂಡಗಳು ಹೋಳಿ ಹುಣ್ಣಿಮೆಯಿಂದ ಹಿಡಿದು ಯುಗಾದಿ ಪಾಡ್ಯದವರಿಗೂ ತಂಡೋಪ ತಂಡಗಳಾಗಿ ಶ್ರೀಶೈಲನ ಮಲ್ಲಯ್ಯನಗಿರಿಗೆ ತೆರಳುವ ಭಕ್ತರ ಸಂಖ್ಯೆ ಅಪಾರವಾಗಿರುತ್ತದೆ ಮಲ್ಲಯ್ಯನ ನೋಡಲೇಬೇಕು ಎನ್ನುವ ಹಂಬಲದೊಂದಿಗೆ ನಡೆದುಕೊಂಡು ಹೋಗುವ ಜನರಿಗೇನು ಕೊರತೆ ಇಲ್ಲ ದೇವರ ರೂಪದಲ್ಲಿರುವ ಚಿಕ್ಕ ಮಕ್ಕಳಿಂದ ಹಿಡಿದು 80 – 90 ವರ್ಷದ ವಯಸ್ಸಾದ ಅಜ್ಜ ಅಜ್ಜಿಯರು ಕೂಡ ಪಾದಯಾತ್ರೆ ಮೂಲಕ ತೆರಳಿ ಮಲ್ಲಯ್ಯನನ್ನು ಕಾಣಬೇಕು, ಮಲ್ಲಯ್ಯನ ದರ್ಶನ ಪಡೆಯಬೇಕು ಎನ್ನುವ ಹಂಬಲದೊಂದಿಗೆ ದಿನಂಪ್ರತಿ ಸುಡು ಸುಡುವ ಬಿಸಿಲಿನಲ್ಲೂ ಸರಿ ಸುಮಾರು 35 ರಿಂದ 50 ಕಿಲೋಮೀಟರ್ ವರೆಗೆ ಪಾದಯಾತ್ರೆ ಮಾಡುತ್ತಾ ಮಲ್ಲಯ್ಯನಗಿರಿ ತಲುಪುವುದೇ ದೊಡ್ಡ ಸಂಭ್ರಮ ಉತ್ತರ ಕರ್ನಾಟಕದ ಪ್ರತಿ ಮೂಲೆ ಮೂಲೆಯಿಂದ ತೆರಳುವ ಭಕ್ತರ ಸಂಖ್ಯೆ ಅಪಾರವಾಗಿರುತ್ತದೆ ಆಂಧ್ರದ ಕರ್ನೂಲ ವರೆಗೂ ವಿವಿಧ ಮಾರ್ಗಗಳಿಂದ ಬರುವ ಪಾದಯಾತ್ರೆಗಳು ಕರ್ನೂಲ್ ಯಿಂದ ಮಾತ್ರ ಎಲ್ಲರೂ ಒಂದೇ ಮಾರ್ಗದಲ್ಲಿ ನಂದಿಕೊಟ್ಟುರ ಆತ್ಮಕೂರ ಮಾರ್ಗವಾಗಿ ತೆರಳುತ್ತಾ ಮಲ್ಲಯ್ಯನಗಿರಿಗೆ ನಡೆಯುತ್ತಾರೆ ಮಲ್ಲಯ್ಯ ವಾಸವಾಗಿರುವ ಪರ್ವತಗಿರಿಯ ನೋಡಲೇಬೇಕು ದರ್ಶನ ಪಡೆಯಲೇಬೇಕೆಂಬ ದೃಢ ನಿರ್ಧಾರ ಮಲ್ಲಯ್ಯನ ಭಕ್ತರಲ್ಲಿ ಹಂಬಲಿಸುತ್ತಿರುತ್ತದೆ ಆತ್ಮಕೂರದ ವೆಂಕಟಪುರದಿಂದ ಪ್ರಾರಂಭವಾಗುವ ನಲ್ಲಮಲ್ಲ ಅರಣ್ಯ ದಲ್ಲಿ ನಡೆಯುವ ಭಕ್ತರ ಸಂಖ್ಯೆ ದುಪ್ಪಟ್ಟ ಆಗುವದು ಸುಮಾರು 600 ಕಿಲೋಮೀಟರ್ ನಡೆಯುವುದು ಒಂದೇ ಈ 80 ಕಿಲೋಮೀಟರ್ ಗುಡ್ಡದಲ್ಲಿ ನಡೆಯುವುದು ಒಂದೇ ಎಂಬ ಭಾವನೆ ಭಕ್ತರಲ್ಲಿ ಇರುವುದರಿಂದ ಸಾಕಷ್ಟು ಭಕ್ತರು ವೆಂಕಟಾಪುರದಿಂದ ಪಾದಯಾತ್ರೆ ಪ್ರಾರಂಭಿಸಿ ಮಲ್ಲಯ್ಯನ ಶಿಖರವನ್ನು ತಲುಪುತ್ತಾರೆ

ನಲ್ಲಮಲ್ಲ ಅರಣ್ಯ ಪ್ರದೇಶ ಪ್ರವೇಶಿಸುವಾಗ ಗಣೇಶನ ಮತ್ತು ದರ್ಗಾದ ದರ್ಶನ ಪಡೆದು ಕಾಯಿ ಹೊಡೆದುಕೊಂಡು ತೆರಳುವ ಪ್ರತಿಯೊಬ್ಬ ಭಕ್ತರು ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದು ಪಾದಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ.
ಕಡೆಬಾಗಿಲ ಈರಣ್ಣ ದೇವಸ್ಥಾನದಿಂದ ಮಲ್ಲಯ್ಯ ಮಲ್ಲಯ್ಯ ಎಲ್ಲಿದಿಯೋ ಮಲ್ಲಯ್ಯ ಎಂದು ಕೂಗುತ್ತಾ ಭಕ್ತರು ಗುಡ್ಡ ಏರುವುದು ಮತ್ತು ಭಕ್ತರು ಮಲ್ಲಯ್ಯ ಮಲ್ಲಯ್ಯ ಎಂದು ಕೂಗುವುದು ಶ್ರೀಶೈಲ ಮಲ್ಲಯ್ಯನ ಗಿರಿವರೆಗೂ ಕೇಳುವ ಹಾಗೆ ಎಲ್ಲರೂ ಏಕಕಾಲದಲ್ಲಿ ಮಲ್ಲಯ್ಯನನ್ನು ಕೂಗುತ್ತಾ ಶಿಖರ ಎರುವುದು ನೋಡುವುದೇ ಭಾಗ್ಯ ಎನ್ನುತ್ತಾ ಭಕ್ತರು ಗುಡ್ಡ ಏರಲು ಹೆಜ್ಜೆ ಹಾಕುತ್ತಾರೆ.

ಮಾಡಿರಿ ಮಲ್ಲಯ್ಯನ ಧ್ಯಾನ ಆಗುವುದು ಜನ್ಮ ಪಾವನ ದಟ್ಟಾದ ಕಾಡಿನಲ್ಲಿ ಯಾರ ಭಯ ಹಂಗಿಲ್ಲದೆ ನಮ್ಮನ್ನು ಮಲ್ಲಯ್ಯ ಕಾಯುವನು ಎಂಬ ನಂಬಿಕೆಯಿಂದ ಹಗಲು ರಾತ್ರಿ ಬಿಸಿಲು ಎನ್ನದೆ ಭಕ್ತರ ಹೆಜ್ಜೆ ಹಾಕುತ್ತಾ ಸಾಗುವ ಸಂಭ್ರಮ ಮುಗಿಲು ಮುಟ್ಟಿರುತ್ತದೆ.
ಬೆಟ್ಟದ ಅಭಯಾರಣ್ಯದಲ್ಲಿ ಮಲ್ಲಯ್ಯನ ಭಕ್ತರು 15 ದಿನದ ಮಟ್ಟಿಗೆ ಬೆಟ್ಟವನ್ನೇ ಊರನ್ನಾಗಿ ಮಾರ್ಪಡಾಗಿದೆ ಎನ್ನುವಷ್ಟರ ಮಟ್ಟಿಗೆ ಭಕ್ತರ ದಂಡು ಮಲ್ಲಯ್ಯನ ಪಾದಯಾತ್ರೆಯ ಮೂಲಕ ಸಾಗುತ್ತಿರುತ್ತಿರುವುದು ಸಂಭ್ರಮೋ ಸಂಭ್ರಮ ಕಡೆಬಾಗ್ಲಿ ಈರಣ್ಣನಿಂದ ದರ್ಶನ ಪಡೆದು ಪಾದಯಾತ್ರೆ ಪ್ರಾರಂಭಿಸುವ ಭಕ್ತರರೆಲ್ಲರೂ ಕೈಯಲ್ಲಿ ಬೆತ್ತ ಹಿಡಿದು ಶಿಖರ ಹತ್ತುವದು ಅಂಬ್ಲಿ ಹಳ್ಳದಲ್ಲಿ ಅಂಬಲಿ ಕುಡಿಯಬೇಕೆನ್ನುವ ಹಂಬಲದೊಂದಿಗೆ ಹಂಬಲಿಸುತ್ತ ಪಾದಯಾತ್ರೆಯಲ್ಲಿ ಸಾಗುವವರು ಗಂಗನಪಳಿಯಲ್ಲಿ ಸಿಗುವ ಮಹಾಪ್ರಸಾದ ಸ್ವೀಕರಿಸಿ ನಡೆಯುವ ಭಕ್ತರರೆಲ್ಲರೂ ಭೀಮನ ಕೊಳ್ಳ ಇಳಿದು ಕೈಲಾಸ ಬಾಗಿಲು ಹತ್ತಿದರೆ ಮಲ್ಲಯ್ಯನ ದರ್ಶನ ವಾದಂತೆ ಎಂಬ ನಂಬಿಕೆಯೊಂದಿಗೆ ಮಲ್ಲಯ್ಯ ಮಲ್ಲಯ್ಯ ಎಂದು ಕೂಗುತ್ತಾ ಗಿರಿ ಕಡೆಗೆ ಮುನ್ನಡೆಯುವರು ಮನುಷ್ಯನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಶ್ರೀಶೈಲಗಿರಿ ನೋಡಬೇಕು ಮಲ್ಲಯ್ಯನ ದರ್ಶನ ಪಡೆಯಲೇಬೇಕು ಎನ್ನುವ ಹಂಬಲ ಉತ್ತರ ಕರ್ನಾಟಕದ ಪ್ರತಿಯೊಬ್ಬ ಭಕ್ತರಲ್ಲಿ ಇರುವುದರಿಂದ ಪ್ರತಿ ವರ್ಷದ ಪಾದಯಾತ್ರೆಗೆ ವಿಶೇಷ ಕಳೆ ಬರುತ್ತದೆ ಪಾದಯಾತ್ರೆ ಯುದ್ಧಕ್ಕೂ ಪಾದಯಾತ್ರೆ ಮಾಡುವರ ಸಂಖ್ಯೆಗೂ ಕಡಿಮೆ ಇಲ್ಲ ಪಾದಯಾತ್ರೆ ಮಾಡುವವರ ಸೇವೆ ಮಾಡುವವರ ಸಂಖ್ಯೆಯು ಲೆಕ್ಕವಿಲ್ಲ ಮಲ್ಲಯ್ಯ ನಮಗೆ ಹೀಗೆ ಹೇಗೆ ಕೊಡುತ್ತಾನೊ ಹಾಗೆ ನಡೆಸುತ್ತಾನೆ ಎನ್ನುವ ನಂಬಿಕೆಯಿಂದ ಪ್ರತಿಯೊಬ್ಬ ಭಕ್ತರು ಮಲ್ಲಯ್ಯನ ಮೇಲೆ ಭಾರ ಹಾಕಿ ಪ್ರಸಾದ ವ್ಯವಸ್ಥೆ ಮಾಡಿ ನಾವು ಪುನೀತರಾಗುತ್ತೇವೆ ಎನ್ನುವ ಭಾವನೆಯನ್ನು ಹೊಂದಿದ್ದಾರೆ

ಶ್ರೀಶೈಲದ ಜಾತ್ರೆಗೆ ಬರುವ ಭಕ್ತರಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಮಲ್ಲಯ್ಯನ ಕಂಬಿಯ ಭಕ್ತರಲ್ಲಿ ಯಾವುದೇ ಜಾತಿ ಭೇದ ಭಾವಗಳಿಲ್ಲದೆ ಸಕಲ ಧರ್ಮದ ಎಲ್ಲಾ ಜಾತಿಯ ಜನಾಂಗಗಳ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಊರಿನವರೆಲ್ಲರೂ ಕೂಡಿಕೊಂಡು ಪಾದಯಾತ್ರೆ ಮಾಡುವುದು ಮತ್ತು ಪಾದಯಾತ್ರೆ ಜೊತೆಗೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಬೇರೆ ಊರಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸಬೇಕೆನ್ನುವ ಹಂಬಲದೊಂದಿಗೆ ತಾವು ಮಾಡಿರುವ ಟೆಂಟ್ ನಲ್ಲಿ ಪ್ರಸಾದ ಸ್ವೀಕರಿಸಿ ಬೇರೆ ಊರಿನ ಭಕ್ತರಿಗೂ ಪ್ರಸಾದ ಉಣಬಡಿಸುವ ಪ್ರತಿತಿಯನ್ನು ಬೆಳೆಸಿಕೊಂಡು ಬಂದಿರುತ್ತಾರೆ

ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸುವ ಉದ್ದೇಶಕ್ಕಾಗಿ ಪಾದಯಾತ್ರೆ ಹಾಗೂ ವಾಹನಗಳಲ್ಲಿ ತೆರಳುವ ಮಲ್ಲಯ್ಯನ ಭಕ್ತರು ತಮಗೆ ಬೇಡಿಕೊಂಡು ಇಷ್ಟಾರ್ಥಗಳು ಈಡೇರಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುವ ಬಯಕೆ ಹೊಂದಿದ ಸಾಕಷ್ಟು ಜನರ ಹಸಿದ ಹೊಟ್ಟೆಗೆ ಪ್ರಸಾದವನ್ನು ಒದಗಿಸುವ ಅದೆಷ್ಟೋ ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳು ಸುಮಾರು ಒಂದು ವಾರಗಳ ಕಾಲ ಇರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡುತ್ತಿರುವ ಪರಿಣಾಮವಾಗಿ ಮಲ್ಲಯ್ಯನ ಜಾತ್ರೆ ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಮತ್ತು ಸುರಕ್ಷಿತವಾಗಿ ನಡೆಯಲು ಸಹಕಾರಿಯಾಗುತ್ತಿದೆ
ಮಲ್ಲಯ್ಯನ ದರ್ಶನ ಪಡೆದರೆ ಸ್ವರ್ಗ ಪಡೆದಂತೆ ಎನ್ನುವ ನಂಬಿಕೆ ಇರುವ ಭಕ್ತರು ಜಾತ್ರೆಗೆ ತೆರಳಿರುವ ಸುಮಾರು ಹತ್ತರಿಂದ ಹನ್ನೆರಡು ಲಕ್ಷ ಭಕ್ತರರೆಲ್ಲರೂ ಮಲ್ಲಯ್ಯನ ದರ್ಶನ ಪಡೆದು ಪುನೀತರಾಗುತ್ತಾರೆ ಸಂಪೂರ್ಣ ಯುಗಾದಿ ಪಾಡ್ಯ ಕ್ಕೆ ನಡೆಯುವ ಜಾತ್ರೆಯನ್ನು ಉತ್ತರ ಕರ್ನಾಟಕದ ಮಲ್ಲಯ್ಯನ ಜಾತ್ರೆ ಎಂಬಂತೆ ಬಿಂಬಿತವಾಗಿರುತ್ತದೆ ಮಲ್ಲಯ್ಯ ಆಂಧ್ರಪ್ರದೇಶದಲ್ಲಿ ನೆಲೆಸಿದರು ಜಾತ್ರೆಯ ಒಂದು ವಾರ ಮುಂಚಿತವಾಗಿ ಗುಡಿಯ ಸಂಪೂರ್ಣ ಜವಾಬ್ದಾರಿಯನ್ನೆಲ್ಲ ಉತ್ತರ ಕರ್ನಾಟಕದವರೇ ನಿರ್ವಹಿಸುವುದು ಇನ್ನೊಂದು ವಿಶೇಷವಾಗಿದೆ ಶ್ರೀಶೈಲ ಪೀಠದ ಜಗದ್ಗುರುಗಳು ಉತ್ತರ ಕರ್ನಾಟಕದಿಂದ ಪಾದಯಾತ್ರೆ ಪ್ರತಿಯೊಬ್ಬ ಭಕ್ತರನ್ನು ಕರೆದು ಮಾತನಾಡಿಸಿ ಭಕ್ತರನ್ನು ಸಂತೈಸುತ್ತಾರೆ ಹೀಗೆ ಒಂದಕ್ಕೊಂದು ಅವಿನಾಭಾವ ಸಂಬಂಧದೊಂದಿಗೆ ಶ್ರೀಶೈಲ ಮಲ್ಲಯ್ಯನ ಜಾತ್ರೆ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಸಿದ್ದರಾಮಯ್ಯ ಭಕ್ತರೆಲ್ಲರೂ ಮಲ್ಲಯ್ಯನ ಸನ್ನಿಧಿಗೆ ಸೇರಿದ ನಂತರವೇ ಮಲ್ಲಯ್ಯನ ಯುಗಾದಿ ಜಾತ್ರೆಯ ಎಲ್ಲಾ ಪೂಜ್ಯ ಕೈಂಕರ್ಯ ನಡೆಯುವುದು ಮತ್ತೊಂದು ವಿಶೇಷವಾಗಿದೆ. ಮಲ್ಲಯ್ಯನ ಶಿಖರದಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಟೆಂಟಗಳಲ್ಲಿ ಭಕ್ತರು ಸುಮಾರು ಒಂದು ವಾರಗಳ ಕಾಲ ಶ್ರೀಶೈಲದಲ್ಲಿದ್ದು ಅದ್ದೂರಿಯಾಗಿ ಜಾತ್ರೆ ನಡೆಸಿ ಮಲ್ಲಯ್ಯನ ಭಕ್ತಿಗೆ ಶರಣಾಗುತ್ತಾರೆ.

  • ಜಗದೀಶ.ಎಸ್.ಗಿರಡ್ಡಿ.
    ಲೇಖಕರು.
    ಸಾ//ಗೊರಬಾಳ
    9902470856
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬಸವಣ್ಣ ನಮಗೇಕೆ ಬೇಕು ?

ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ. ಪ್ರಾಯಶ ಎಲ್ಲಾ ಹಂತದಲ್ಲೂ...
- Advertisement -

More Articles Like This

- Advertisement -
close
error: Content is protected !!
Join WhatsApp Group