spot_img
spot_img

ಹಿರಿಯ ಪ್ರಶಸ್ತಿಗೆ ಬಾಜನರಾದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ

Must Read

- Advertisement -

ಹುನಗುಂದದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಅವರು ಪತ್ರಿಕಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು. ಇದೇ ದಿ.೨೮-೦೭-೨೦೨೪ ರಂದು ಬಾಗಲಕೋಟೆಯಲ್ಲಿ ಜರುಗುವ ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದವರು ಕೂಡ ಮಾಡುವ ಪತ್ರಕರ್ತರ “ಹಿರಿಯ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ ಈ ಪ್ರಯುಕ್ತ ಅವರ ಸಾಧನೆ  ಕುರಿತ ಲೇಖನ

ಪತ್ರಕರ್ತರಾಗಿ ಎಲ್ಲರಿಗೂ ಸೈ ಎನಿಸುವಂತೆ ಕೆಲಸ ಮಾಡಿ ತೋರಿಸುವುದು ಸಾಮಾನ್ಯ ಮಾತಲ್ಲ. ಪತ್ರಕರ್ತ ಯಾವಾಗಲೂ ಎಚ್ಚರಿಕೆಯಿಂದ ಇದ್ದು ಜಯಶೀಲನಾಗ ಬೇಕಾಗುತ್ತದೆ. ಈ ಕಾಲ ಘಟ್ಟದಲ್ಲಿ ದೊಡ್ಡ ಧರ್ಮವಾಗಿದೆ. ಜನಸಾಮಾನ್ಯರಿಗೆ ನ್ಯಾಯ ದೇವತೆಯಂತೆ ಪತ್ರಿಕೆಗಳು ಇಂದು ಕೆಲಸ ಮಾಡುತ್ತವೆ. ಪತ್ರಿಕಾ ರಂಗದಲ್ಲಿ ಕಳೆದ ಮೂರು ದಶಕದಿಂದ ಕೆಲಸ ಮಾಡಿ ಒಳ್ಳೆಯ ದಿಟ್ಟ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಮಲ್ಲಿಕಾರ್ಜುನ ದರಗಾದ ಅವರು ಎಂದು ಹೇಳಬಹುದು.

ಅವರು ಪತ್ರಿಕಾಧರ್ಮವನ್ನು ಪಾಲಿಸುತ್ತಲೇ ಜನಸಾಮಾನ್ಯರಿಗೆ ತಮ್ಮ ಪತ್ರಿಕೆ ಮೂಲಕ ಸ್ಪಂದಿಸುತ್ತಿರುವುದು ಅವರ ಕ್ರಿಯಾಶೀಲತಗೆ ಸಾಕ್ಷಿ. ಹೀಗಾಗಿ ಅವರಿಗೆ ಬಾಗಲಕೋಟಯ ಹಿರಿಯ ಪತ್ರಕರ್ತರಾಗಿ. ಸತ್ಯಾಶ್ರಮ ಪತ್ರಿಕೆಯ ಸಂಪಾದಕರಾಗಿದ್ದ. ಲಿಂ. ಶರಣಬಸವರಾಜ ಜಿಗಜಿನ್ನಿ ಸ್ಮರಣಾರ್ಥ ಹಿರಿಯ ಪತ್ರಕರ್ತರಿಗೆ ಕೂಡ ಮಾಡುವ ಪ್ರಶಸ್ತಿಗೆ ಅವರು ಬಾಜನರಾಗಿದ್ದು ಹೆಮ್ಮೆಯ ಸಂಗತಿ.

- Advertisement -

ದರಗಾದ ಅವರು ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು. ಮಲ್ಲಿಕಾರ್ಜುನ ದರಗಾದರವರು ೧೯೯೭ ರಲ್ಲಿ ಸುನಂದಾರನ್ನು ಮದುವೆಯಾದರು. ಅವರಿಗೆ ಆ ಮದುವೆ ಸುದೈವವನ್ನೆ ಕೈ ಹಿಡಿದು ತಂದಂತಾಯಿತು. ಜೊತೆಗೆ ಅವರ ಕಠಿಣ ಪರಿಶ್ರಮ ಅವರು ಸಂಪಾದಿಸಿದ ಯಶಸ್ಸು ಒಂದು ಕೌತುಕದ ಕಥೆಯಂತಿದೆ.

ಮೂಲತಃ ಹುನಗುಂದದವರಾದ ಮಲ್ಲಿಕಾರ್ಜುನ ದರಗಾದ ಈಗ ಸಂಯುಕ್ತ ಕರ್ನಾಟಕ ಗ್ರಾಮೀಣ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕಾ ಸೇವೆ ೧೯೯೧ ರಲ್ಲಿ ಬಾಗಲಕೋಟೆಯ ನಾಗರಿಕ ಪತ್ರಿಕೆಗಳಿಗೆ ವರದಿಗಾರರಾಗಿ ಸೇವೆ ಪ್ರಾರಂಭಿಸಿದ ಅವರು ನಂತರ ಕನ್ನಡಪ್ರಭ, ಉಷಾಕಿರಣ, ಸಂಯುಕ್ತ ಕರ್ನಾಟಕ ಸುರಪುರಟೈಮ್ಸ್ ಹುನಗುಂದ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವು ವರ್ಷ ಬಾಗಲಕೋಟ ಜಿಲ್ಲಾ ಉದಯವಾಣಿ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಧೈರ್ಯಶಾಲಿಯಾದವರು ಗಂಡಾ ೦ತರವನ್ನು ಎದುರಿಸಿ ಹೊಸ ಹಾದಿಯನ್ನು ತುಳಿಯುತ್ತಾರೆ ಈ ಮಾತಿನಂತೆ ಮಲ್ಲಿಕಾರ್ಜುನ ದರಗಾದ ಅವರ ಧೈರ್ಯ ಮೆಚ್ಚುವಂತಹದ್ದು ಅವರು ಕಠಿಣ ಪ್ರಸಂಗಗಳನ್ನು ಎದುರಿಸಿ ಜೀವನದ ಕಾಳಗದಲ್ಲಿ ಗೆದ್ದಿದ್ದಾರೆ.

ದರಗಾದ ಸಾದಾ ಜೀವನವನ್ನು ಒಪ್ಪಿಕೊಂಡು ಬೆಳೆದರು. ಹೀಗಾಗಿ ಅವರು ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಿದ್ದರು. ಈಗ ಸಂಯುಕ್ತ ಕರ್ನಾಟಕ ಹುನಗುಂದ ತಾಲೂಕಿನ ಗ್ರಾಮೀಣ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ನೀರಾವರಿ ಹಾಗೂ ಪ್ರವಾಸೋದ್ಯಮ ಸಂಬಂಧಿಸಿದ ಹಲವು ಪರಿಣಾಮಕಾರಿ ಲೇಖನಗಳು ಹಾಗೂ ವರದಿಗಳು ಅವರ ವಿದ್ವತ್ತಿಗೆ ಸಾಕ್ಷಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಜಿಲ್ಲೆಯ ಪುನರ‍್ಪಸತಿ ಸಂದರ್ಭದಲ್ಲಿ ಸಂತ್ರಸ್ತರ ಸಮಸ್ಯೆಗಳ ಕುರಿತು. ಸರ್ಕಾರದ ಗಮನ ಸೆಳೆಯುವ ವಸ್ತುನಿಷ್ಠ ವರದಿಗಳು ಜನ ಎಚ್ಚೆತುಕೊಳ್ಳುವಂತೆ ಮಾಡಿದುದು ಈಗ ಕೇವಲ ಇತಿಹಾಸ ಪ್ರವಾಹ ಸಂದರ್ಭದ ವರದಿಗಳಿಗೆ ವಿವಿಧ ಸಂಘಟನೆಗಳು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ವಿಜಯಪುರ ಬಾದಾಮಿ, ಐಹೊಳೆ, ಪಟ್ಟದಕಲ್ಲು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ವರದಿಗಳು ಸಮಾಜಕ್ಕೆ ದಾರಿದೀಪದಂತೆ ಗೋಚರಿಸಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಪೂರ್ವದಲ್ಲಿ ಹುನಗುಂದ ತಾಲೂಕ ಪ್ರಸ್ ಕ್ಲಬ್ಬಿನ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಅವರು ಆ ಸಂದರ್ಭದಲ್ಲಿ ಮೊದಲನೆಯ ಸಲ ಅಧ್ಯಕ್ಷರಾಗಿದ್ದಾಗ, ಸಂಸದರಾಗಿದ್ದ ಲಿಂ ಸಿದ್ದು ನ್ಯಾಮಗೌಡರ ಸಂಸದರ ನಿಧಿಯಲ್ಲಿ ಪ್ರಸ್ ಕ್ಲಬ್ ಕಟ್ಟಡ, ನಿರ್ಮಿಸಿದ್ದಾರೆ ಎರಡೇ ಅವಧಿಯಲ್ಲಿ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಪತ್ರಕರ್ತರ ವಿಳಾಸ ಕೈಪಿಡಿ ಪ್ರಕಟಿಸಿದ್ದಾರೆ
ಮೂರನೇ ಅವಧಿಯಲ್ಲಿ ಸಂದರ್ಭದಲ್ಲಿ ಪ್ರೆಸ್ ಕ್ಲಬ್‌ನ ದಶಮಾನೋತ್ಸವ(೧೦ನೇ ವರ್ಷ) ಕಾರ್ಯಕ್ರಮದಲ್ಲಿ ಹೊನ್ನಬೆಳೆ ಸ್ಮರಣಿ ಸಂಚಿಕೆಯನ್ನು ಪ್ರಕಟಿಸಿ ಬಿಡುಗಡೆ ಮಾಡಿದ ಅವರು ಪತ್ರಕರ್ತರ ಶ್ರಯೋಭಿವೃದ್ಧಿಗೆ ಶ್ರಮಿಸಿದ ದಿಟ್ಟ ಪತ್ರಕರ್ತರಾಗಿದ್ದಾರೆ ಎಂದು ಹೇಳಬಹುದು.

- Advertisement -

ಸಮಾಜ ಸೇವೆ:- ಹುನಗುಂದ ಪುರಸಭೆಯ ವಾರ್ಡ೧ರ ಸದಸ್ಯರಾಗಿ ವಾರ್ಡನ ಅಭಿವೃದ್ಧಿ ಪಡಿಸಿದ್ದಾರೆ.
ಸಹಕಾರಿ ರಂಗಕ್ಕೆ ಪಾದಾರ್ಪಣೆ:- ಅವರ ಸಾರಥ್ಯದ ಮಲ್ಲಿಕಾರ್ಜುನ ಪತ್ತಿನ ಸಹಕಾರಿ ಸಂಘ.ನಿ.ಹುನಗುಂದ ಸಂಸ್ಥಾಪಕ ಅಧ್ಯಕ್ಷರಾಗಿ ಕಳೆದ ೯ ವರ್ಷದಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈಗಲೂ ಮುಂದುವರೆದಿದ್ದು ಸಹಕಾರಿ ರಂಗ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಬಹುದು.

ಕೃಷಿಕ ಮನೆತನದಿಂದ, ಬಂದ ಮಲ್ಲಿಕಾರ್ಜುನ ದರಗಾದರವರು ಕೃಷಿಕರಂತೆ ಗಟ್ಟಿಗರು, ಎಂತಹ ಕಠಿಣ ಪ್ರಸಂಗ ಎದುರಾದರೂ ಧೈರ್ಯದಿಂದ ಎದುರಿಸುವ ಎದೆಗಾರಿಕೆ ಅವರದು, ಹುನಗುಂದದಲ್ಲಿ ದಿನಾಂಕ ೨೨-೦೭-೧೯೭೦ರಂದು ಮಲ್ಲಪ್ಪ ಹಾಗೂ ಗುರುಬಾಯಿ ದಂಪತಿಗಳ ಉದರದಲ್ಲಿ ಜನಿಸಿದ ದರಗಾದರವರಿಗೆ ಈಗ ೫೪ ವರ್ಷ ವಯಸ್ಸು. 24ರ ಹುರುಪು ಹುಮ್ಮಸ್ಸನ್ನು ಅವರಲ್ಲಿ ಈಗಲೂ ಕಾಣಬಹುದಾಗಿದೆ.

ಪ್ರಶಸ್ತಿಗಳು: ಮಲ್ಲಿಕಾರ್ಜುನ , ದರಗಾದವರು ಪ್ರಶಸ್ತಿಯ ಹಿಂದೆ ಬೆನ್ನು ಬಿದ್ದವರಲ್ಲ. ಅವರ ನಿರಂತರ ಸೇವೆಗೆ ಸಾಕಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ ಅದರಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ತಾಲೂಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಇವರ ಮುಡಿಗೇರಿವೆ ಸದ್ಯ ಇವರ ಬರವಣಿಗೆಗೆ ಮತ್ತೊಂದು ಗರಿ ಬಂದಿದೆ ಅದುವೇ ಜಿಲ್ಲಾ ಮಟ್ಟದ ಹಿರಿಯ ಪತ್ರಕರ್ತರ ಪ್ರಶಸ್ತಿಗೆ ಭಾಜನರಾಗಿದ್ದು ಜುಲೈ 28 ರಂದು ಬಾಗಲಕೋಟ ನವನಗರದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯುವ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ನಮ್ಮಂಥ ಪತ್ರಕರ್ತರಿಗೆ ಮಾರ್ಗದರ್ಶಕರಾದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದರಗಾದ, ಅವರಿಗೆ ಹೃದಯಪೂರ್ವಕ ಅಭಿನಂದನೆಗಳ ಜೊತೆಗೆ ಇನ್ನು ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಆಶಿಸುತ್ತೇನೆ
ಪತ್ರಿಕಾರಂಗದ ಅವರ ಮೂರು ದಶಕದ ಅನುಭವ ಅವರನ್ನು ಗಟ್ಟಿಗೊಳಿಸಿದೆ ಕೆಲಸ ಮಾಡುತ್ತ ಕಲಿತಿದ್ದಾರೆ. ಕಲಿಯುತ್ತಾ ಕೆಲಸ ಮಾಡಿದ್ದಾರೆ. ಕೃಷಿಕರ ಗಟ್ಟಿತನವನ್ನು ಪತ್ರಿಕಾ ಸೇವೆಯಲ್ಲಿ ಉಳಿಸಿಕೊಂಡು ಬಂದುದು, ಹೆಮ್ಮೆಯ ಸಂಗತಿ. ಹೀಗಾಗಿ ಜಿಲ್ಲೆಯ ಹೆಮ್ಮೆಯ ಪತ್ರಕರ್ತರಲ್ಲಿ ಅವರೂ ಒಬ್ಬರು. ಅವರು ತಮ್ಮ ವೃತ್ತಿಯಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲಿ ಎಂಬುದೆ. ಅವರ ಅಭಿಮಾನಿಗಳೆಲ್ಲರ ಹಾರೈಕೆ.

ಜಗದೀಶ.ಮ.ಹದ್ಲಿ
ಸಾ|| ತಿಮ್ಮಾಪುರ ತಾಲೂಕು ಹುನಗುಂದ ಜಿಲ್ಲಾ ಬಾಗಲಕೋಟ 9611761979

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿ ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ...
- Advertisement -

More Articles Like This

- Advertisement -
close
error: Content is protected !!
Join WhatsApp Group