- Advertisement -
ಮೂಡಲಗಿ – ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ತಾಲೂಕಿನ ಫುಲಗಡ್ಡಿ ಗ್ರಾಮದ ಅಣ್ಣಪ್ಪ ನಂದಿ ಹಾಗೂ ಯಲ್ಲವ್ವ ನಂದಿ ಈ ಘಟನೆಗೆ ಬಲಿಯಾದ ದುರ್ದೈವಿಗಳು.
ಸಾರಾಯಿ ಕುಡಿತದ ದಾಸನಾಗಿದ್ದ ಅಣ್ಣಪ್ಪ ಮನೆಯಲ್ಲಿಯ ಎಮ್ಮೆಯನ್ನು ಮಾರಿ ಕಂಠಪೂರ್ತಿ ಕುಡಿದು ಬಂದಿದ್ದ ಅದಕ್ಕೆ ತಕರಾರು ಮಾಡಿದ ಪತ್ನಿ ಯಲ್ಲವ್ವ ಎಮ್ಮೆ ಮಾರಿದ ಹಣ ಕೇಳಿದ್ದಾಳೆ
ಪರಸ್ಪರ ಮಾತಿಗೆ ಮಾತು ಬೆಳೆದು ಕುಪಿತಗೊಂಡ ಅಣ್ಣಪ್ಪ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ. ನಂತರ ಭಯಭೀತಗೊಂಡ ಆತ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ