ಶಿಕ್ಷಣ ಕ್ಷೇತ್ರಕ್ಕೆ ಮನಗೂಳಿ ಮನೆತನದ ಕೊಡುಗೆ ಅಪಾರವಾಗಿದೆ – ಶಾಸಕ ಅಶೋಕ ಮನಗೂಳಿ

Must Read

ಸಿಂದಗಿ; ಮನಗೂಳಿ ಮನೆತನ ಶಿಕ್ಷಣ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆ ನೀಡಿದೆ. ಸಿಂದಗಿ ತಾಲೂಕಿನ ಬಮ್ಮನಳ್ಳಿ ಗ್ರಾಮದಲ್ಲಿ ಪ್ರೌಢ ಶಾಲೆ ನಿರ್ಮಾಣವಾಗಲು ಜಾಗೆಯ ಖರೀದಿಗೆ ೫ ಲಕ್ಷ ಕೊಡಲು ವಾಗ್ದಾನ ಮಾಡಿದ್ದೆ ನಾನು ಕೊಟ್ಟ ಮಾತಿನಂತೆ ಜಾಗೆಯ ಖರೀದಿಗೆ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ೫ ಲಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ೫ ಲಕ್ಷ ನೀಡಿದ್ದಾರೆ ಒಟ್ಟು ೧೦ ಲಕ್ಷ ರೂ.ಗಳ ಚೆಕ್ಕನ್ನು ಗ್ರಾಮಸ್ಥರ ಪರವಾಗಿ ಶ್ರೀಮಠದ ಪೂಜ್ಯರಾದ ಶ್ರೀ ನರಸಿಂಹ ಮಹಾರಾಜರಿಗೆ ನೀಡಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಬಮ್ಮನಳ್ಳಿ ಗ್ರಾಮದ ಸದ್ಗುರು ಭೀಮಾಶಂಕರ ಮಹಾರಾಜರ ೭೧ ನೇ ಜಾತ್ರಾ ಮಹೋತ್ಸವದ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೇವಲ ಭರವಸೆ ನೀಡಿ ಹೋಗುವ ಮನೆತನ ಮನಗೂಳಿ ಮನೆತನವಲ್ಲ. ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರು ೨ ಬಾರಿ ಶಾಸಕರಾಗಿ ಸಚಿವರಾಗಿದ್ದವರು ಅವರು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸದಾ ದುಡಿದವರು. ಅವರಿಗೆ ಶಿಕ್ಷಣ ಮೇಲೆ ಅಪಾರ ಕಾಳಜಿ ನಮ್ಮ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಬಡ ಮಕ್ಕಳು ವಿದ್ಯಾವಂತರಾಗಬೇಕು ಜೊತೆಗೆ ಸ್ವಾವಲಂಬಿಗಳಾಗಬೇಕು ಎನ್ನುವ ಕನಸು ಅವರದ್ದು ಅವರ ಹಾದಿಯಲ್ಲಿಯೆ ನಾನು ದುಡಿಯುತ್ತಿದ್ದೇನೆ. ನನ್ನ ಮೊದಲ ಆದ್ಯತೆ ಶಿಕ್ಷಣ ನಾನು ಹಿಂದೆ ಪ್ರೌಢ ಶಾಲಾ ಈ ಗ್ರಾಮದಲ್ಲಿ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ ಆದರೆ ಜಾಗೆಯ ಕೊರತೆ ಇತ್ತು ಅದನ್ನು ಮನಗೊಂಡು ತಂದೆ ಅವರ ಹೆಸರಿನ ಮೇಲಿನ ಪ್ರತಿಷ್ಠಾನದಿಂದ ೫ ಲಕ್ಷ ಮತ್ತು ಸಚಿವ ಎಂ.ಬಿ.ಪಾಟೀಲರು ಸಹ ಶಿಕ್ಷಣದ ಮೇಲಿನ ಕಾಳಜಿಗೆ ೫ ಲಕ್ಷ ನೀಡಿದ್ದಾರೆ ಗ್ರಾಮಸ್ಥರ ಪರವಾಗಿ ಸಚಿವರಿಗೆ ಅಭಿನಂದನೆಗಳು ಎಂದ ಅವರು ಈ ಗ್ರಾಮದಲ್ಲಿ ಸರ್ಕಾರ ಪ್ರೌಢ ಶಾಲೆ ಮಂಜೂರು ಮಾಡಿದೆ ಇನ್ನು ಕೇಲವೆ ದಿನಗಳಲ್ಲಿ ಜಾಗೆಯನ್ನು ಖರೀದಿ ಮಾಡಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ವೇಳೆ ಶ್ರೀಮಠದ ಪೂಜ್ಯರಾದ ಶ್ರೀ ನರಸಿಂಹ ಮಹಾರಾಜರು, ಪ್ರತಿಷ್ಠಾನದ ಸದಸ್ಯ ಚನ್ನು ಪಟ್ಟಣಶೆಟ್ಟಿ , ಮುಖಂಡರಾದ ಬಸವರಾಜಗೌಡ ಪಾಟೀಲ, ಬಿ ಎಚ್ ಬಿರಾದಾರ, ಸಂಗನಗೌಡ ಬಿರಾದಾರ ಸೇರಿದಂತೆ ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group