ಘಟಪ್ರಭಾ – ಘಟಪ್ರಭಾ ಹೊಸಮಠದ ನೂತನ ಕಟ್ಟಡಕ್ಕೆ ಸಂಸದರ ನಿಧಿಯಿಂದ ಹತ್ತು ಲಕ್ಷ ರೂ. ಗಳ ನಿಧಿಯನ್ನು ಬಿಡುಗಡೆ ಮಾಡುವುದಾಗಿ ಸಂಸದೆ ಮಂಗಲಾ ಅಂಗಡಿ ಹೇಳಿದ್ದಾರೆ.
ಹಾನಗಲ್ ಲಿಂ. ಕುಮಾರ ಮಹಾಶಿವಯೋಗಿಗಳವರ 92ನೇ ಹಾಗು ಲಿಂ ಶಿವಲಿಂಗ ಮಹಾಸ್ವಾಮಿಗಳವರ 14ನೇ ಪುಣ್ಯ ಸ್ಮರಣೆ ಮತ್ತು ಹೊಸಮಠದ ಜಾತ್ರೆಯ ನಿಮಿತ್ತ ಜರುಗಿದ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಿಹಿಸಿ ಹಾಗೂ ಮಠದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗುಬ್ಬಲಗುಡ್ಡಮಠದ ಶ್ರೀ ಮ.ನಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ಮಾಡುತ್ತ, ಭಕ್ತರ ಭಕ್ತಿಯೆ ಹೊಸಮಠಕ್ಕೆ ಶಕ್ತಿ ಎಂದು ಹೇಳಿದರು ಹೊಸಮಠದ ಉತ್ತರಾಧಿಕಾರಿ ಪೂಜ್ಯಶ್ರೀ ವಿರುಪಾಕ್ಷ ದೇವರು ಮಾತನಾಡಿ, ಹೊಸಮಠದ ಅಭಿವೃದ್ದಿಗಾಗಿ ನೀವು ಸಹಾಯ ನೀಡಿ ನಾನು ಸಮಾಜಕ್ಕಾಗಿ ನಾನು ನಿರಂತರವಾಗಿ ಸೇವೆ ಮಾಡುವೆ ಎಂದು ಹೇಳಿದರು.
ಗೋಕಾಕ ಜ್ಞಾನಮಂದಿರದ ಧರ್ಮದರ್ಶಿ ಶರಣೆ ಸುವರ್ಣಾ ಹೊಸಮಠ ಹಾಗು ಬಸವರಾಜ ಸ್ವಾಮಿಗಳು ಕಪರಟ್ಟಿ, ರಾಮಣ್ಣಾ ಹುಕ್ಕೇರಿ ಮಾತನಾಡಿದರು.
ಪ್ರಾಸ್ಥಾವಿಕ ಮಾತನಾಡಿದ ಜಿ.ಎಸ್.ಕರ್ಪೂರಮಠರು ಹೊಸಮಠದಬಗ್ಗೆ ಹೇಳಿದರು ಮೃತ್ಯುಂಜಯ ಸ್ವಾಮಿಗಳು ಬ್ರಹ್ಮಾನಂದ ಶ್ರೀಗಳು ದೇವಪ್ಪ ದಳವಾಯಿ ಮಡಿವಾಳಪ್ಪ ಮುಚಳಂಬಿ ಪ್ರವೀಣ ಮಟಗಾರ ಮುಂತಾದವರು ಉಪಸ್ಥಿತರಿದ್ದರು ಸುರೇಶ ಪಾಟೀಲರು ಸ್ವಾಗತಿಸಿದರು.
ಕುಮಾರ ಪೂಜಾರಿ ಸೃಜನ ಕಡಪಟ್ಟಿ ವಚನಗಾಯನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಾವಿರಾರು ಭಕ್ತಾದಿಗಳು ಪ್ರಸಾದ ಸ್ವಿಕರಿಸಿದರು.