Homeಸುದ್ದಿಗಳು24ನೇ ಮಹಾಸಭೆಯಲ್ಲಿ ಪಾಲ್ಗೊಳ್ಳಲು ಮಂಜುಳಾ ಹಿರೇಮಠಮನವಿ

24ನೇ ಮಹಾಸಭೆಯಲ್ಲಿ ಪಾಲ್ಗೊಳ್ಳಲು ಮಂಜುಳಾ ಹಿರೇಮಠಮನವಿ

ಮೂಡಲಗಿ: ಡಿ.23 ಮತ್ತು 24 ರಂದು ದಾವಣಗೆರೆಯ ಎಂ.ಬಿ.ಎಕಾಲೇಜು ಮೈದಾನದಲ್ಲಿ  ನಡೆಯುವ 24ನೇ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೀರಶೈವ ಲಿಂಗಾಯತ ವೇದಿಕೆಯ ರಾಜ್ಯ ಕಾರ್ಯದರ್ಶಿ ಕಲ್ಲೋಳಿ ಮಂಜುಳಾ ಹಿರೇಮಠ ತಿಳಿಸಿದ್ದಾರೆ.

1904 ರಲ್ಲಿ ಹಾನಗಲ್ ಕುಮಾರಸ್ವಾಮಿಯವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಸ್ಥಾಪಿತವಾಗಿ ಕಳೆದ 119 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು 24ನೇ ಮಹಾಸಭಾದಲ್ಲಿ ಬೆಳಗಾವಿ ಜಿಲ್ಲೆಯಿಂದ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮಂಜುಳಾ ಹಿರೇಮಠ ಅವರು ಕೋರಿದಾರೆ.

RELATED ARTICLES

Most Popular

error: Content is protected !!
Join WhatsApp Group