ಹೊಸದಿಲ್ಲಿ – ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ ನೂರನೇ ಸಂಚಿಕೆ ರವಿವಾರ ದಿ. ೩೦ ರಂದು ೧೧ ಗಂಟೆಗೆ ಪ್ರಸಾರವಾಗಲಿದೆ.
ದೇಶದ ತುಂಬ ಸುಮಾರು ನಾಲ್ಕು ಲಕ್ಷ ಕೇಂದ್ರಗಳಲ್ಲಿ ಮೋದಿಯವರ ಮಹತ್ವಾಕಾಂಕ್ಷೆಯ ರೇಡಿಯೊ ಕಾರ್ಯಕ್ರಮ ಪ್ರಸಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಹಾಗೆಯೇ ಅವರ ಅಸಂಖ್ಯ ಕೇಳುಗರು ನೂರನೇ ಸಂಚಿಕೆಯನ್ನು ಕೇಳಲು ಉತ್ಸುಕರಾಗಿದ್ದಾರೆ.
೧೮ ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ೮೪ ಜಿಲ್ಲೆಗಳಲ್ಲಿ ೯೧ ಎಫ್ ಎಂ ಕೇಂದ್ರದ ಟ್ರಾನ್ಸಮೀಟರಗಳನ್ನು ಅಳವಡಿಸಲಾಗಿದೆ ಎಂದು ಪ್ರಸಾರ ಭಾರತಿಯ ಕಾರ್ಯ ನಿರ್ವಾಹಕ ಅಧಿಕಾರಿ ಗೌರವ ದ್ವಿವೇದಿ ತಿಳಿಸಿದ್ದಾರೆ.
ಮೋದಿಯವರ ಮನ್ ಕಿ ಬಾತ್ ಸಂಚಿಕೆಗಳನ್ನು ಭಾರತದ ೨೨ ಭಾಷೆಗಳಲ್ಲಿ ಅನುವಾದಿಸಲಾಗಿದೆ. ಅಲ್ಲದೆ ಇಂಗ್ಲೀಷ ಭಾಷೆಯೊಡನೆ ಫ್ರೆಂಚ್, ಟಿಬೇಟಿಯನ್, ಬರ್ಮಾ, ಇಂಡೋನೇಷ್ಯಾ, ಚೀನಿ, ಬಲೂಚಿ, ಪಶ್ತೂನಿಕ್, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಭಾಷೆಗಳಿಗೆ ಅನುವಾದಿಸಿ ಪ್ರಸಾರ ಮಾಡಲಾಗುತ್ತಿದೆ.