ಕರ್ನಾಟಕ ಕಂಡ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಗಣ್ಯರು ಎಂ. ಮದನಗೋಪಾಲ್. ತಮ್ಮ ಪ್ರಾಮಾಣಿಕತೆ ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಅದಮ್ಯ ಗುಣವಿಶೇಷದ ಕಾರಣಕ್ಕಾಗಿಯೇ ತಮ್ಮ ಸೇವಾವಧಿಯುದ್ದಕ್ಕೂ ಹಲವು ರೀತಿಯ ಬೆದರಿಕೆಗಳಿಗೆ, ನಿರಂತರ ವರ್ಗಾವಣೆಗಳಿಗೆ ಅವರು ತಲೆಕೊಡಬೇಕಾಗಿ ಬಂತು. ಅವರು ಅದನ್ನೆಲ್ಲ ದಿಟ್ಟತನದಿಂದ ಎದುರಿಸಿದರೇ ವಿನಾ ತಾವು ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.
ಅಂಥ ಮದನಗೋಪಾಲ್ ಅವರ ಅಪೂರ್ವ ಕೃತಿ ಮಾವೋನಿಂದ_ಮಹರ್ಷಿವರೆಗೆ.
ಮೂಲತಃ ಆಂಧ್ರದ ನಕ್ಸಲ್ ಪ್ರದೇಶದಿಂದಲೇ ಬಂದಿದ್ದ ಅವರು ಮಾವೋವಾದಿ ಚಳವಳಿಯನ್ನು ಹತ್ತಿರದಿಂದ ಕಂಡವರು; ನೂರಾರು ಜನರನ್ನು ಹಿಂಸಾತ್ಮಕ ದಾರಿಗೆ ಎಳೆದ ಮಾವೋವಾದಿ ನಾಯಕರು ತಮ್ಮ ಕೊನೆಯ ದಿನಗಳಲ್ಲಿ ಏನಾದರು? – ಎಂಬುದನ್ನೂ ಸನಿಹದಿಂದ ಗಮನಿಸಿದವರು. ಅಲ್ಲಿ ಅವರು ಕಂಡುಂಡ ಸತ್ಯಗಳೇ ಈ ಕೃತಿಯಲ್ಲಿ ಅಕ್ಷರರೂಪ ಪಡೆದಿವೆ.
ಯಾವುದೋ ಭ್ರಮೆಗೆ ಒಳಗಾಗಿ ತಾವು ಹಿಂಸಾತ್ಮಕ ದಾರಿ ಹಿಡಿದದ್ದಲ್ಲದೆ ಮುಗ್ಧ ಯುವಕರನ್ನೂ ದಾರಿತಪ್ಪಿಸಿ, ಸಾವಿರಾರು ಜನಸಾಮಾನ್ಯರ ನೆಮ್ಮದಿಯನ್ನೂ ಬದುಕನ್ನೂ ಕಸಿದುಕೊಂಡ ನಕ್ಸಲ್ ನಾಯಕರು ತಾವು ಮಾತ್ರ ಕೊನೆಗೆ ನೆಮ್ಮದಿಗಾಗಿ ರಮಣಾಶ್ರಮದ ದಾರಿ ಹಿಡಿದದ್ದನ್ನು ಮದನಗೋಪಾಲ್ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಪ್ರತಿಯೊಬ್ಬರೂ ಓದಲೇಬೇಕಾದ, ನಮ್ಮ ಸುತ್ತಮುತ್ತಲಿನ ಹದಿಹರೆಯದವರಿಗೆ ಓದಿಸಬೇಕಾದ ಮಹತ್ತ್ವದ ಕೃತಿ ಇದು. ಬೆಲೆ ರೂ.400.00.
ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: 074836 81708