ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

 

ಬಟ್ಟೆತೊಳೆಯುವವನಗಸ ಮನೆಕಟ್ಟುವನೊಡ್ಡ
ಒಡವೆಗಳ ಮಾಡುವವನಕ್ಕಸಾಲಿ
ಮಣ್ಣಿಂದ ಮಡಕೆಗಳ ಮಾಡುವವ ಕುಂಬಾರ
ಕಸುಬಿಂದ ಕುಲವಾಯ್ತು – ಎಮ್ಮೆತಮ್ಮ

ಶಬ್ಧಾರ್ಥ
ಮಡಕೆ = ಗಡಿಗೆ. ಕಸುಬು = ಕೆಲಸ

ತಾತ್ಪರ್ಯ
ಪ್ರತಿಯೊಂದು‌ ಊರಿನಲ್ಲಿ‌ ಹಲವಾರು‌‌ ಕೆಲಸಗಳನ್ನು‌ ಮಾಡುವ ಜನರಿರುತ್ತಾರೆ. ಬೇಸಾಯ ಮಾಡುವವನು ಒಕ್ಕಲಿಗ, ಮನೆಯ ಕಟ್ಟುವವನು ಒಡ್ಡ, ಬಟ್ಟೆ ತೊಳೆಯುವವನು‌ ಅಗಸ, ಒಡವೆ
ಮಾಡುವವನು‌ ಅಕ್ಕಸಾಲಿ, ಕಟ್ಟಿಗೆ ಕೆಲಸ‌ ಮಾಡುವವನು‌ ಕಮ್ಮಾರ, ಮಣ್ಣಿನಿಂದ‌ ಗಡಿಗೆ ಮಾಡುವವನು‌ ಕುಂಬಾರ
ಹೀಗೆ ಉಪ್ಪಾರ, ಬೇಡ, ಗಾಣಿಗ, ಸಿಂಪಿಗ, ಚಿಪ್ಪಿಗ, ಮಾದಾರ, ಮ್ಯಾದಾರ, ಪಿಂಜಾರ, ಹಡಪದ, ಗೊಲ್ಲ ಕುರುಬ, ಪೂಜಾರ, ಬಜಂತ್ರಿ, ಅಂಬಿಗ, ನೇಕಾರ, ಚಿತ್ರಗಾರ ಮುಂತಾದ‌ ನೂರಾರು
ಕಸಬುದಾರರು‌ ಇರುತ್ತಾರೆ.ಆ ಕೆಲಸಗಳನ್ನು‌ ಅವರ‌ ವಂಶದವರು ಮುಂದುವರಿಸಿಕೊಂಡು‌ ಹೋಗಿ‌‌ ನೈಪುಣ್ಯ
ಗಳಿಸಿದರು. ಹೀಗಾಗಿ ಅವರಿಗೆ ಆ ಕಸುಬಿನ‌ ಹೆಸರಿನಿಂದ
ಕರೆಯತೊಡಗಿದರು. ಮುಂದೆ ಬರುಬರುತ್ತ‌ ‌ಆ ಕಸುಬಿನಿಂದ
ಕುಲಗಳಾಗಿ ಮಾರ್ಪಟ್ಟವು. ಅವರು ತಮ್ಮ‌ ತಮ್ಮ ಕುಲಕಸಬು‌ ಮಾಡುವವರಲ್ಲಿ ಮದುವೆ ಸಂಬಂಧ ಬೆಳೆಸತೊಡಗಿದರು.

ಇದರಿಂದ ಕುಲಗಳು ಹುಟ್ಟಿಕೊಂಡವು.ಕುಲವು‌ ಹುಟ್ಟಿನಿಂದ ಬರುವುದಿಲ್ಲ‌. ಮಾಡುವ ಕೆಲಸದಿಂದ‌ ಕುಲಗಳುಂಟಾದವು.
ನಿಜವಾಗಿ ವಿಚಾರಿಸಿ ನೋಡಿದರೆ ಅವು ಕುಲಗಳಲ್ಲ. ಈಗಿನ
ಮಾಸ್ತರ, ಇಂಜಿನಿಯರ, ತಹಸಿಲ್ದಾರ, ಪೋಲೀಸ, ಸೋಲ್ಜರ,
ಹೀಗೆ ನೌಕರಿ‌ ಮಾಡುವವರ ಕುಲಗಳಿಲ್ಲ. ಆದಕಾರಣ ಕುಲವ
ಎಣಿಸದೆ ಅವರನ್ನು ಮಾನುಷ್ಯತ್ವದಿಂದ ಗೌರವಿಸಬೇಕು.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 944903099

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group