ಚಂದನದ ಮರ ತನ್ನ ಕಡಿವ ಕೊಡಲಿಯ ಮುಖಕೆ
ಪರಿಮಳವ ಸವರುವಂತೇಸುಕ್ರಿಸ್ತ
ಶಿಲುಬೆಗೇರಿಸುವವರ ಕ್ಷಮಿಸೆಂದು ಪ್ರಾರ್ಥಿಸಿದ
ಕ್ಷಮೆಗಿಂತ ಹಿರಿದುಂಟೆ ? – ಎಮ್ಮೆತಮ್ಮ
ಶಬ್ಧಾರ್ಥ
ಚಂದನ = ಶ್ರೀಗಂಧ
ತಾತ್ಪರ್ಯ
ಶ್ರೀಗಂಧದ ಮರವನ್ನು ಕೊಡಲಿಯಿಂದ ಕಡಿದರು ಅದು
ನೊಂದುಕೊಳ್ಳುವುದಿಲ್ಲ. ಬದಲಾಗಿ ಕಡಿವ ಕೊಡಲಿಗೆ
ತನ್ನಲ್ಲಿರುವ ಸುಗಂಧವನ್ನು ಕೊಡಲಿಯ ಮುಖಕ್ಕೆ
ಸಂತೋಷದಿಂದ ಸವರುತ್ತದೆ. ಹಾಗೆ ಏಸುಕ್ರಿಸ್ತ ಮೇಲೆ
ಸುಮ್ಮಸುಮ್ಮನೆ ತಪ್ಪುಹೊರಿಸಿ ಆತನನ್ನು ಶಿಲುಬೆಯ
ಕಂಬಕ್ಕೆ ಕಟ್ಟಿ ಕಾಲು ಕೈ ಎದೆಗೆ ಮೊಳೆ ಹೊಡೆಯುತ್ತಾರೆ.
ದೇಹದಿಂದ ರಕ್ತ ಸುರಿಯುತ್ತಿದ್ದರು ನೊಂದುಕೊಳ್ಳದೆ
ಅವರಿಗೆ ಆಶೀರ್ವಾದ ಮಾಡುತ್ತಾನೆ. ದೇವರಲ್ಲಿ ಹೀಗೆ
ಪ್ರಾರ್ಥಿಸುತ್ತಾನೆ.” ತಂದೆಯೇ ಅವರಿಗೆ ಕ್ಷಮಿಸು. ತಾವು
ಏನುಮಾಡುತ್ತೇವೆಂಬುದನ್ನು ಅರಿಯರು” ಅಂದನು.
ಸಾಯುವ ಸಂದರ್ಭದಲ್ಲಿ ಕೂಡ ಏಸುಕ್ರಿಸ್ತ ತನಗೆ
ನೋವು ಮಾಡಿದವರನ್ನು ತಾನು ಕ್ಷಮಿಸುವುದರ ಜೊತೆಗೆ
ದೇವರಲ್ಲಿ ಅವರು ಮಾಡಿದ ತಪ್ಪುಗಳನ್ನು ಕ್ಷಮಿಸೆಂದು
ಬೇಡುವ ಗುಣ ಹಿರಿದು.
ಶಾಂತಿ ಖಡ್ಗ ಕರೇ ಯಸ್ಯ|
ದುರ್ಜನಂ ಕಿಂ ಕರಿಷ್ಯತಿ| ಅತೃಣೋ ಪತತೇ ವಹ್ನೀ|
ಸ್ವಯಮೇವುಪಶಾಮ್ಯತೇ| ಎಂದು ಸುಭಾಷಿತ ಹೇಳುತ್ತದೆ.
ಶಾಂತಿಯ ಕತ್ತಿ ಕೈಯಲ್ಲಿ ಇದ್ದರೆ ದುಷ್ಟರು ಏನು ಮಾಡಲು
ಸಾಧ್ಯವಿಲ್ಲ. ಹುಲ್ಲಿನ ಮೇಲೆ ಬೆಂಕಿ ಬೀಳದಿದ್ದರೆ ತನ್ನಷ್ಷಕ್ಕೆ
ತಾನೆ ಆರಿಹೋಗುತ್ತದೆ. ಕ್ಷಮೆಗಿಂತ ಹಿರಿದಾದುದು ಯಾವುದು ಇಲ್ಲ. ಶಾಂತಿ ಪರರ ವೈರಿ ಎಂಬುವ ಗಾದೆ ಮಾತು ಸತ್ಯ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990