ಮೂಡಲಗಿ – ಸನ್ 2022-23 ನೇ ಸಾಲಿನ 1 ರಿಂದ 10 ನೇ ತರಗತಿಯಲ್ಲಿರುವ ಮೂಡಲಗಿ ವಲಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸನಾ ಶಿಬಿರವನ್ನು ನ.29 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5-30 ರ ವರೆಗೆ ನಾಗನೂರ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅರ್ಹ ದೈಹಿಕ ನ್ಯೂನತೆಯುಳ್ಳ, ಶ್ರವಣ ದೋಷ, ದೃಷ್ಟಿ ದೋಷ, ಬುದ್ಧಿ ನ್ಯೂನತೆ ಹಾಗೂ ಬಹು ಅಂಗಾಂಗ ವಿಕಲತೆ ಇತ್ಯಾದಿ ನ್ಯೂನತೆಯುಳ್ಳ ಮಕ್ಕಳು ವೈದ್ಯಕೀಯ ಮೌಲ್ಯಾಂಕನ ಶಿಬಿರಕ್ಕೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.