ಬೆಳ್ಳುಬ್ಬಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಭೆ

Must Read

ಸವದತ್ತಿ: ತಾವು ಅಕ್ಷರ ಕಲಿತ ವಿದ್ಯಾ ಸಂಸ್ಥೆಗೆ ಸೇವೆ ಸಲ್ಲಿಸುವ ಮೂಲಕ ತಾವು ಕಲಿತ ಶಾಲೆಗೆ ತಮ್ಮ ಕಿಂಚಿತ್ ಋಣವನ್ನು ತೀರಿಸಬೇಕೆಂಬ ಬಯಕೆ ಹೊತ್ತ ಅನೇಕ ಹಳೆಯ ಗೆಳೆಯರು ಭಾನುವಾರ ದಿನಾಂಕ 18-07-2021ರಂದು ಬೆಳಿಗ್ಗೆ 10-30ಕ್ಕೆ ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜಿನಲ್ಲಿ ಸಭೆ ಸೇರಲಿದ್ದಾರೆ.

ಅಂದು ಅವರು ಈ ಕಾಲೇಜಿನಲ್ಲಿ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ, ಬೇರೆ ಬೇರೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪ್ರಾತ್ಯಕ್ಷಿಕೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮುಂತಾದ ವಿಚಾರ ಕುರಿತು ಚರ್ಚಿಸಲಿದ್ದಾರೆ. ಹಾಗೆಯೇ ಅಂದು ಉಪಸ್ಥಿತರಿರುವವರು ಕೂಡ ತಮ್ಮ ಅಭಿಪ್ರಾಯ ಹಂಚಿಕೆ, ಮುಂದಿನ ದಿನಗಳಲ್ಲಿ ಅವರು ವಹಿಸಿಕೊಳ್ಳುವ ಜವಾಬ್ದಾರಿಗಳ ಕುರಿತು ನಿರ್ಣಯ ತೆಗೆದುಕೊಳ್ಳಬಹುದಾಗಿದೆ.

ಆದ ಕಾರಣ ಹಳೆಯ ವಿದ್ಯಾರ್ಥಿಗಳೆಲ್ಲರೂ ಅಂದಿನ ಸಭೆಗೆ ಆಗಮಿಸಬೇಕೆಂದು ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಶ್ರೀ ಬಸವರಾಜ ಎಸ್. ಪುಟ್ಟಿ, ಕಾರ್ಯದರ್ಶಿ ಪ್ರೊ. ಎಂ.ಸಿ.ಹಾದಿಮನಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಮಾರುತಿ ಎ. ದೊಂಬರ ಕೋರಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group