‘ನಮ್ಮ ಕರ್ನಾಟಕ ಸೇನೆ’ ಸಿಂದಗಿ ಪದಾಧಿಕಾರಿಗಳ ಆಯ್ಕೆ

Must Read

ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ “ನಮ್ಮ ಕರ್ನಾಟಕ ಸೇನೆ ಸಿಂದಗಿ” ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷರಾದ ಮಹೇಶ ನಾಯಕ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ ಮಾತನಾಡಿ ನಮ್ಮ ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯಾಗಿದೆ ಇಂತಹ ನಮ್ಮ ಭಾಷೆಗೆ ಧಕ್ಕೆ ತರುವಂತ ಕೆಲಸ ಯಾರೇ ಮಾಡಿದರು ಅದನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳಾದ ತಾವು ಖಂಡಿಸಿ ಕನ್ನಡ ನಾಡು, ನುಡಿ, ಜಲ ಕ್ಕಾಗಿ ಹಾಗೂ ಹಿಂದುಳಿದವರ, ದೀನ ದಲಿತರ ಪರವಾಗಿ ದ್ವನಿ ಎತ್ತುವ ಕೆಲಸ ಮಾಡಬೇಕೆಂದು ಹೇಳಿದರು.

ಅಧ್ಯಕ್ಷರಾಗಿ ಪುಂಡಲೀಕ ಬಿರಾದಾರ, ಉಪಾಧ್ಯಕ್ಷರಾಗಿ ಮನ್ಸೂರ ಪತ್ತೇಪುರ, ತಾಲೂಕ ಯುವ ಘಟಕ ಅಧ್ಯಕ್ಷರಾಗಿ ಸಿದ್ದು ಬಡಿಗೇರ, ಗೌರವ ಅಧ್ಯಕ್ಷರಾಗಿ ಸಂಗಪ್ಪ ಚೌರ, ಪ್ರಧಾನ ಕಾರ್ಯದರ್ಶಿಯಾಗಿ ಸಾಗರ ಜೇರಟಗಿ, ಸಹ ಕಾರ್ಯದರ್ಶಿಯಾಗಿ ಆಕಾಶ ಪೂಜಾರಿ, ರೈತ ಘಟಕ ಅಧ್ಯಕ್ಷರಾಗಿ ರಜಾಕಸಾಬ ಚಾಂದಕವಟಗಿ, ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಉಮೇಶ ಮಯೂರಮಠ, ಅವಿನಾಶ ಯಂಕಂಚಿ, ಸಾಗರ ಜೇರಟಗಿ, ಇನ್ನು ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group