- Advertisement -
ಮೂಡಲಗಿ: ಮಹರ್ಷಿ ವಾಲ್ಮೀಕಿಯವರ ಪವಿತ್ರ ಗ್ರಂಥ ರಾಮಾಯಣದ ಮೂಲಕ ಪ್ರಭು ಶ್ರೀರಾಮನ ವ್ಯಕ್ತಿತ್ವ, ಆದರ್ಶ, ಮೌಲ್ಯಗಳನ್ನು ಸಮಸ್ತ ಮಾನವಕುಲಕ್ಕೆ ಸಾರಿದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಬಸವರಾಜ ಕಡಾಡಿ ಅವರು ಹೇಳಿದರು.
ಕಲ್ಲೊಳಿ ಪಟ್ಟಣದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಭಕ್ತಿಪೂರ್ವಕ ನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಣಮಂತ ಕಲಕುಟ್ರಿ, ಸೋಮಲಿಂಗ ಹಡಗಿನಾಳ, ಸಂಸದರ ಆಪ್ತ ಕಾರ್ಯದರ್ಶಿ ಸಂತೋಷ ಬಡಿಗೇರ, ಬಿ.ಆರ್. ಪಾಟೀಲ, ಬಸವರಾಜ ಸಪಾಡ್ಲ, ಶಂಕರ ಖಾನಗೌಡ್ರ, ರಮೇಶ ಕವಟಕೊಪ್ಪ, ತುಕಾರಾಮ ಬಡಿಗೇರ ಚಂದ್ರಶೇಖರ ಲಟ್ಟಿ, ವಿನಾಯಕ ಘೋರ್ಪಡೆ, ಶಿವಾನಂದ ಗೌರಾಣಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.