- Advertisement -
ಬೀದರ – ಬೀದರನ ಎಸ್ ಬಿಐ ಬ್ಯಾಂಕ ಎಟಿಎಮ್ ದರೋಡೆ ಹಾಗೂ ಶೂಟ್ ಔಟ್ ಪ್ರಕರಣ ಕುರಿತಂತೆ ಸರಿಯಾಗಿ ಮಾಹಿತಿ ಪಡೆಯದೆ ತಪ್ಪು ತಪ್ಪಾಗಿ ಮಾತನಾಡಿದ ಸವಿವ ರಹೀಂ ಖಾನ್ ವಿರುದ್ಧ ಕ್ಷೇತ್ರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೊನ್ನೆಯಷ್ಟೇ ಬಿಜೆಪಿ ಬೀದರ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು, ಶಾಸಕರಿಗೆ ಕ್ಷೇತ್ರದ ಬಗ್ಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ ಎಂದು ಗೇಲಿ ಮಾಡಿದ್ದರು. ಅದಕ್ಕೆ ಪುಷ್ಠಿ ಕೊಡುವಂತೆ ಶಾಸಕ ರಹೀಂ ಖಾನ್ ಹೇಳಿಕೆ ನೀಡಿದ್ದು, ಶೂಟ್ ಔಟ್ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಸ್ಥಳಿಯರು ಮೃತಪಟ್ಟಿದ್ದಾರೆಂಬುದಾಗಿ ಹೇಳಿ ನಗೆಪಾಟಲಿಗೆ ಈಡಾಗಿದ್ದಾರೆ
ಬೀದರ ಶೂಟ್ ಔಟ್ ಪ್ರಕರಣದಲ್ಲಿ ಗಿರಿ ವೆಂಕಟೇಶ ಎನ್ನುವವರು ಸಾವನ್ನಪ್ಪಿದ್ದು ಇನ್ನೊಬ್ಬ ಶಿವಕುಮಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
- Advertisement -
ಸಚಿವರ ಈ ಹೇಳಿಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳ ಸುರಿಮಳೆಯೇ ಹರಿದುಬರುತ್ತಿದೆ.
ವರದಿ : ನಂದಕುಮಾರ ಕರಂಜೆ, ಬೀದರ