ಪಾಲಣ್ಣನ ಹೊಟೇಲಿನಲ್ಲಿ ತಿಂಡಿ ಸವಿದ ಶಿಕ್ಷಣ ಮಂತ್ರಿ

Must Read

ತಿಪಟೂರು: ತಿಪಟೂರಿನಿಂದ ಕೇವಲ 9 ಕಿಲೋಮೀಟರ್ ದೂರವಿರುವ ಪಾಲಣ್ಣನ ಹೋಟೆಲಿನಲ್ಲಿ ಇತ್ತೀಚೆಗೆ ಸರಳ ಸಜ್ಜನಿಕೆಯ ವಿದ್ಯಾಮಂತ್ರಿ ಬಿಸಿ ನಾಗೇಶ್ ರವರು ತಿಂಡಿ ಸವಿದರು.

ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿರುವುದರಿಂದ ಹಳ್ಳಿಯ ರೀತಿಯಲ್ಲಿ ತೆಂಗಿನ ಮಟ್ಟೆ ಕಾಯಿಯನ್ನು ಉಪಯೋಗಿಸಿ ಹಳೆಯ ಪದ್ಧತಿಯಂತೆ ರುಚಿಕರವಾದ ತಟ್ಟೆ ಇಡ್ಲಿ ತಯಾರಿಸುತ್ತಾರೆ. ಹೋಟೆಲ್ ನ ಸಮಯ ಬೆಳಗ್ಗೆ 8 ರಿಂದ10 ರವರೆಗೆ ಮಾತ್ರ ಇದ್ದು ಇಲ್ಲಿನ ತಟ್ಟೆ ಇಡ್ಲಿ ಪ್ರಸಿದ್ಧ ವಾಗಿದೆ

ಹೋಟೆಲ್ ನ ವಿಶೇಷ ತಟ್ಟೆ ಇಡ್ಲಿಯ ಜೊತೆ ಖಾರದ ಚಟ್ನಿ, ವಡೆ, ಎಳ್ಳಿಕಾಯಿ ಚಿತ್ರಾನ್ನ, ಗಂಡ-ಹೆಂಡತಿ ಇಬ್ಬರೇ (ಮಾಲೀಕರು ಹಾಗೂ ತಯಾರಕರು) ಈ ಹೋಟೆಲ್ ನಡೆಸುತ್ತಾರೆ. ಇಂಥ ಹೋಟೆಲ್ನಲ್ಲಿ ವಿದ್ಯಾಮಂತ್ರಿ ಸರಳವಾಗಿ ಒಬ್ಬರೇ ಹೋಗಿ ರಸ್ತೆ ಬದಿಯ ಬೆಂಚ್ ಕಲ್ ನಲ್ಲಿ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ತಿಂಡಿ ಸವೆ ದಿರುವುದು ವಿಶೇಷ. ಈ ಹೋಟೆಲ್ ದುಬಾರಿ ಅಲ್ಲ. ರಸ್ತೆಬದಿಯಲ್ಲಿ ಇರುವ ಹೋಟೆಲ್ ಗೆ ಎಲ್ಲ ಸಾರ್ವಜನಿಕರು ನಿಗದಿಯಾದ ವೇಳೆಯಲ್ಲಿ ಹೋಗಿ ತಿಂಡಿ ತಿಂದು ಬರುತ್ತಾರೆ.

ದುಬಾರಿ ಹಣ ಖರ್ಚುಮಾಡಿ ಊಟ ತಿಂಡಿ ಮಾಡುವ ಮಂತ್ರಿ ಗಳಿದ್ದು ಇಂತಹ ಕಾಲದಲ್ಲಿ ನಾಗೇಶ್ ಅವರು ಸಾಮಾನ್ಯ ಜನರಂತೆ ಸರಳವಾಗಿ ತಿಂಡಿ ಸವಿದಿದ್ದು ಇತರ ಮಂತ್ರಿಗಳಿಗೆ ಮಾದರಿ ಎನ್ನಬಹುದು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group