ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

Must Read

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದ್ದು ಈ ಪಂದ್ಯಾವಳಿಯಲ್ಲಿ ೯೦೦ ವಿದ್ಯಾರ್ಥಿಗಳು ಬಾಗವಹಿಸಲಿದ್ದಾರೆ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳ ಬಗ್ಗೆ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ. ಅಲ್ಲದೆ ಎಲ್ಲ ಕ್ರೀಡೆಗಳು ಒಂದೆಡೆ ನಡೆಸಲು ಅನೂಕೂಲವಾಗಲೆಂದು ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಮಂಜೂರಾತಿ ಹಂತದಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯಿಂದ ಮೂರು ದಿನಗಳ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಅ. ೨೩ ರಂದು ನೊಂದಣಿ, ೨೪ ರಂದು ಕ್ರೀಡಾಕೂಟ ಉದ್ಘಾಟನೆ ನೇರವೇರುವುದು. ೨೫ ರಂದು ಸಾಯಂಕಾಲ ಸಮಾರೋಪಗೊಳ್ಳಲಿದೆ. ಸಂಜೆ ೭ ರಿಂದ ರಾತ್ರಿ ೧೦ ಗಂಟೆಯವರೆಗೆ ಕುಸ್ತಿ ಪಂಧ್ಯಾವಳಿಗಳು ನಡೆಯುವವು.

ಈ ಸಂದರ್ಭದಲ್ಲಿ ಏಷಿಯನ್ ಫೆಡರಷನ್ ಸ್ಕೂಲ್ ಗೇಮ್ ನಲ್ಲಿ ಭಾಗವಹಿಸಲಿದ್ದ ರವಿ ರೆಬಿನಾಳ ಹಾಗೂ ತಾಲೂಕಿನ ಮಾಜಿ ಕುಸ್ತಿ ಪೈಲ್ವಾನರಿಗೆ ಗೌರವ ಸನ್ಮಾನಿಸಲಾಗುವುದು, ೨೨ ನಿರ್ಣಾಯಕರು( ಗದಗ, ಬೆಂಗಳೂರ, ಬೆಳಗಾವಿ) ಇವರಿಗೆ ರಾಯಲ್ ಲಾಡ್ಜನಲ್ಲಿ ವಸತಿ ಕಲ್ಪಿಸಲಾಗಿದೆ, ಜಿಲ್ಲೆಯ ೩೦ ನಿರ್ಣಾಯಕರಿಗೆ ಮನಗೂಳಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಾಲಕಿಯರಿಗಾಗಿ ಆರ್.ಡಿ.ಪಾಟೀಲ, ಪದ್ಮರಾಜ ಮಹಿಳಾ ಕಾಲೇಜಿನ ವಸತಿ ನಿಲಯದಲ್ಲಿ ೩೦ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ರಾತ್ರಿ ಇಬ್ಬರು ಮಹಿಳಾ ಪೊಲೀಸ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಬಾಲಕರಿಗಾಗಿ ಬೆಳಗಾವಿ ವಿಬಾಗ; ಮೂರಾರ್ಜಿ ಪಪೂ ಕಾಲೇಜು, ಕಲಬುರ್ಗಿ ವಿಬಾಗ ಸರಕಾರಿ ಪಪೂ ಕಾಲೇಜು, ಬೆಂಗಳೂರು ವಿಬಾಗ ಗುರುಕುಲ ಪಪೂ ಕಾಲೇಜು, ಮೈಸೂರು ವಿಬಾಗ; ಎಲೈಟ್ ಪಪೂ ಕಾಲೇಜು, ಪ್ರತಿ ವಿಬಾಗಕ್ಕೆ ೨ ಬಸ್ಸುಗಳ ವ್ಯವಸ್ಥೆ ಹಗೂ ದೈಹಿಕ ಉಪನ್ಯಸಕರ ನೇಮಕ ಮತ್ತು ಸೂಕ್ತ ಪೊಲೀಸ ಬಂದೋಬಸ್ತ ವ್ಯವಸ್ಥೆ, ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ವೈಧ್ಯರು ಹಾಗೂ ಅಂಬುಲೆನ್ಸ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ವಿವಿಧ ಕಾಲೇಜುಗಳ ಪ್ರಾಚಾರ್ಯರು ಮತ್ತು ದೈಹಿಕ ಉಪನ್ಯಾಸಕರುಗಳಿಗೆ ಈಗಾಗಲೇ ತಮಗೆ ಅನೇಕ ಜವಾಬ್ದಾರಿಗಳನ್ನ ನೀಡಲಾಗಿದೆ. ಅವುಗಳನ್ನ ಕಡ್ಡಾಯವಾಗಿ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ವಸತಿಗೆ ಈಗಾಗಲೇ ಸಿಂದಗಿ ಪಟ್ಟಣದ ವಿವಿಧ ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳನ್ನು ನೇಮಕ ಮಾಡಲಾಗಿದೆ. ಉಪನ್ಯಾಸಕರು ಆಸಕ್ತಿಯಿಂದ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ, ದೈಹಿಕ ಶಿಕ್ಷಣ ಉಪನ್ಯಾಸಕ ಶಾಂತೇಶ ದುರ್ಗಿ,  ಕೆ. ಎಚ್. ಸೋಮಾಪೂರ, ಸತೀಶ ಬಸರಕೋಡ, ಶಿಕ್ಷಕ ಸಂಗನಬಸು ಬಿರಾದಾರ, ಉಪನ್ಯಾಸಕ ಸಿದ್ದಲಿಂಗ ಕಿಣಗಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here

Latest News

ಬಿಡಿಸಿಸಿ ಬ್ಯಾಂಕ ನೂತನ ನಿರ್ದೇಶಕ ಅಪ್ಪಾಸಾಬ ಕೂಲಿಗುಡೆಗೆ ಮಾಲಗಾರ ಸಮಾಜದ ಅಭಿನಂದನೆ

ಬೆಳಗಾವಿ : ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ ಬೆಳಗಾವಿ ರವಿವಾರದಂದು ನಡೆದ ಚುನಾವಣೆಯಲ್ಲಿ ರಾಯಬಾಗ ತಾಲುಕು ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ...

More Articles Like This

error: Content is protected !!
Join WhatsApp Group