spot_img
spot_img

ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ

Must Read

spot_img
- Advertisement -

ಸಿಂದಗಿ–  ನಾವೆಲ್ಲ ಉತ್ತಮ ಆರೋಗ್ಯವಂತರಿದ್ದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯದ ಕಡೆಗೆ ಸದಾ ನಾವು ಜಾಗೃತಿ ವಹಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ರವಿವಾರ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ  3 ನೇ ಪುಣ್ಯ ಸ್ಮರಣೆಯ ನಿಮಿತ್ತ ಆಯೋಜಿಸಿರುವ  ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ವೈಜ್ಞಾನಿಕ ಬದುಕಿನಲ್ಲಿ ನಾವೆಲ್ಲ ಹೆಚ್ಚು ಒತ್ತಡದಲ್ಲಿದ್ದೇವೆ. ನಿರಂತರವಾಗಿ ಎಷ್ಟೇ ಕಾರ್ಯಗಳು ಮಾಡಿದರೂ ಮೊದಲು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿಕೊಳ್ಳಬೇಕು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗಳಿಗೆ, ರೋಗ ನಿವಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ನಮ್ಮ ತಂದೆ ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಮನಗೂಳಿ ಆಸ್ಪತ್ರೆಯಲ್ಲಿ  ನಮ್ಮ ಕುಟುಂಬದವರು  ಸೇರಿ ಅನೇಕರಿಗೆ ಪ್ರಯೋಜನವಾಗಲಿ ಎಂದು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.

- Advertisement -

ಈ ವೇಳೆ ಮನಗೂಳಿ ಆಸ್ಪತ್ರೆಯ ಡಾ. ಶಾಂತವೀರ ಮನಗೂಳಿ ಮಾತನಾಡಿ, ಅನೇಕ ವೈದ್ಯರ ಸಹಕಾರದಿಂದ ಈ ಭಾಗದ ಜನತೆಗೆ ಅನುಕೂಲವಾಗಲೆಂದು ಈ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ. ಬಡವರ, ಸಾಮಾನ್ಯರ ಪಾಲಿಗೆ ಶಿಬಿರಗಳು ಹೆಚ್ಚು ಪ್ರಯೋಜನಕಾರಿಯಾಗಲಿವೆ ಎಂದರು.

ಈ ವೇಳೆ ಶಿಬಿರದಲ್ಲಿವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತ ತಪಾಸಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯದಲ್ಲಿ ಸುಮಾರು 380 ಕ್ಕೂ ಹೆಚ್ಚು ಜನ ರೋಗಿಗಳು ಶಿಬಿರದ ಲಾಭಗಳನ್ನು ಪಡೆದುಕೊಂಡರು.

ಶಿಬಿರದಲ್ಲಿ ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮೀ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ, ಡಾ.ಕಿರಣಕುಮಾರಿ ಶ್ರೀಗಿರಿ ರೋಗಿಗಳಿಗೆ ತಪಾಸಣೆ ಮಾಡಿದರು.

- Advertisement -

ಕಾರ್ಯಕ್ರಮದಲ್ಲಿ ಸಿದ್ದಮ್ಮಗೌಡತಿ ಮನಗೂಳಿ, ನಾಗರತ್ನಾ ಮನಗೂಳಿ, ಡಾ.ಸಂಜು ಅವಟಿ, ಡಾ.ಆರತಿ ಚಿಕ್ಕೋಡಿ, ಡಾ.ಪ್ರತಿಭಾ ಬಿರಾದಾರ, ಡಾ.ಅಶ್ವಿನಿ ಆಲೂರ, ರವಿ ಗೋಲಾ, ಸಂಗನಬಸು ಬಿರಾದಾರ, ಶ್ರೀಶೈಲ ಬಿರಗೊಂಡ, ಎಲ್.ಎಸ್.ಪೂಜಾರಿ, ಕುಮಾರ ಬಗಲಿ, ವಿನೋದ ಕಲಬುರ್ಗಿ, ಸಿದ್ದು ಮಲ್ಲೇದ, ಆನಂದ ಮುರಗಾನೂರ, ಪ್ರವೀಣ ಯಾಳವಾರ, ಸಾವಿತ್ರಿ ಗಾಣಿಗೇರ, ಮೀನಾಕ್ಷಿ ನಾಯ್ಕೋಡಿ, ಪವಿತ್ರಾ ರಾಠೋಡ, ಶಂಭು ಕಕ್ಕಳಮೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group