ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ, ಜಿಆರ್‍ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ನೀರು ಹರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

Must Read

ಗೋಕಾಕ: ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ, ಜಿಆರ್‍ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕೂಡಲೇ ನೀರನ್ನು ಬಿಡುಗಡೆ ಮಾಡುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಹಿಡಕಲ್ ಜಲಾಶಯದಲ್ಲಿ 5.93 ಟಿಎಂಸಿ ನೀರು ಸಂಗ್ರಹವಿರುವದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಂಬಂಧ ಬರುವ ಸೋಮವಾರದಿಂದ 7 ದಿನಗಳವರೆಗೆ ನೀರನ್ನು ಬಿಡುವಂತೆ ಅವರು ಆಗ್ರಹಿಸಿದ್ದಾರೆ.

ಬೇಸಿಗೆಯ ಬಿಸಿಲಿನಿಂದ ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ ಕಾಲುವೆಗೆ 2000 ಕ್ಯೂಸೆಕ್ಸ್, ಜಿಆರ್‍ಬಿಸಿ ಕಾಲುವೆಗೆ 2000 ಕ್ಯೂಸೆಕ್ಸ್ ಮತ್ತು ಸಿಬಿಸಿ ಕಾಲುವೆಗೆ 500 ಕ್ಯೂಸೆಕ್ಸ್‍ನಂತೆ ಪ್ರತಿದಿನ ನೀರನ್ನು ಹರಿಸುವಂತೆ ತಿಳಿಸಿದ್ದಾರೆ.

ಈ ಕಾಲುವೆಗಳ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿ ತೆರೆದ ಬಾವಿ ಮತ್ತು ಕೊಳವೆ ಬಾವಿಗಳು ರಿಚಾರ್ಜ ಆಗುತ್ತವೆ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಹ ಕಡಿಮೆಯಾಗುತ್ತದೆ. ಆದ್ದರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ಒಟ್ಟು 2.93 ಟಿಎಂಸಿ ನೀರನ್ನು ತುರ್ತಾಗಿ ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

- Advertisement -
- Advertisement -

Latest News

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ – ಎಸ್ ಆರ್ ಪಿ

ಬಾಗಲಕೋಟೆ- ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು...
- Advertisement -

More Articles Like This

- Advertisement -
close
error: Content is protected !!
Join WhatsApp Group