ಸಿಂದಗಿ: ವಿಧಾನಸಭೆಯ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ವಿಧಾನಸಭೆಯ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿದರು.
ನಂತರ ಸಭೆಯನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜನತೆ ನೀಡಿದ ತೀರ್ಪುಗೆ ತಲೆಬಾಗುತ್ತೇನೆ ನಾನು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾನೆ ಕ್ಷೇತ್ರ ಜನತೆ ನನ್ನ ಮೇಲಿಟ್ಟ ವಿಶ್ವಾಸಕ್ಕೆ ಅವರಿಗೆ ಕೃತಜ್ಞನಾಗಿರುತ್ತೇನೆ ನಿರಂತರ ಕ್ಷೇತ್ರದ ಜನತೆಯ ಸಂಪರ್ಕದಲ್ಲಿದ್ದು ಸದಾ ಕ್ಷೇತ್ರದ ಜನತೆಯ ಸೇವಕನಾಗಿ ಕೆಲಸ ಮಾಡುತ್ತೇನೆ ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವುರ, ಮಲ್ಲಿಕಾರ್ಜುನ ಜೋಗುರ, ಗುರು ತಳವಾರ ಶ್ರೀಶೈಲ ಪರಗೊಂಡ, ಶ್ರೀಮಂತ ನಾಗೂರ, ಶಂಕರ ಬಗಲಿ, ಬಿ ಆರ್ ಎಂಟಮನ, ಅನೀಲ ನಾಯಕ, ರಾಜು ಪೂಜಾರಿ, ಸಿದ್ದು ಬುಳ್ಳಾ, ಯಶವಂತರಾಗೌಡ ರೂಗಿ, ಈರಘಂಟಿ ಮಾಗಣಗೇರಿ, ಸುರೇಶ ಕಿರಣಗಿ, ಬಿ ಎಚ್ ಬಿರಾದಾರ, ಅರವಿಂದ ಕನ್ನೂರ ವಕೀಲರು, ಮಲ್ಲು ಪಡಶೆಟೆ ವಕೀಲರು, ಮಹಾನಂದಾ ಸಾಲಕ್ಕಿ, ನೀಲಮ್ಮ ಯಡ್ರಾಮಿ ಸೇರಿದಂತೆ ಮತಕ್ಷೇತ್ರದ ವಿವಿಧ ಹಳ್ಳಿಯ ಪಕ್ಷದ ಮುಖಂಡರು, ಗಣ್ಯರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು, ಪದಾಧಿಕಾರಿಗಳು, ಯುವಕರು, ಉಪಸ್ಥಿತರಿದ್ದರು.
ಶಿವಕುಮಾರ ಬಿರಾದಾರ