spot_img
spot_img

ಹೆಳವನ ಮಗಳು ಶೈಕ್ಷಣಿಕ ಕಳಕಳಿಯ ಚಲನಚಿತ್ರದ ಚಿತ್ರೀಕರಣ ಆರಂಭ

Must Read

- Advertisement -

ಧಾರವಾಡದ ‌ಮಹಾಂತೇಶ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ, ಶೈಕ್ಷಣಿಕ ಕಳಕಳಿಯ ಕಿರು ಚಲನಚಿತ್ರಕ್ಕೆ ಚಾಲನೆ ನೀಡಲಾಯಿತು.

ಧಾರವಾಡ ನಗರ ಬಿಇಒ ಉಮೇಶ ಬಮ್ಮಕ್ಕನವರ ಕ್ಯಾಮರಾ ಚಾಲನೆ ಮಾಡಿ, ದೃಶ್ಯ ಮಾದ್ಯಮ ಇಂದು ಅತ್ಯಂತ ಪರಿಣಾಮಕಾರಿ ಮಾದ್ಯಮವಾಗಿದೆ, ನಮ್ಮ ಸಮಾಜದಲ್ಲಿ ಕೆಲವೊಂದು ಜನಾಂಗದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ, ಉದಾಹರಣೆಗೆ ಹೆಳವರ ಮಕ್ಕಳು ಬಹುತೇಕ ಮಕ್ಕಳು ಶಾಲೆಗೆ ದಾಖಲ ಆಗುವುದಿಲ್ಲ, ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಅತೀ ಅವಶ್ಯವಾಗಿದೆ, ಇನ್ನೂ ಆ ಜನಾಂಗದ ಮಕ್ಕಳು ಮಾಡಿದ ಸಾಧನೆಯನ್ನು ಸಮಾಜಕ್ಕೆ ತೋರಿಸಿ, ಉಳಿದ ಮಕ್ಕಳಿಗೆ ಪ್ರೇರಣೆ ಆಗಲು ಇಂತಹ ಚಲನಚಿತ್ರಗಳ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ನಮ್ಮ ಧಾರವಾಡ ಜಿಲ್ಲೆಯಲ್ಲಿ  ಸಾಧನೆ ಮಾಡಿದ ಮಕ್ಕಳ ಕುರಿತು ಕಿರುಚಿತ್ರಗಳನ್ನು  ನಿರ್ಮಾಣ ಮಾಡಿ ಮಕ್ಕಳಿಗೆ ತೋರಿಸುವ ಆಲೋಚನೆ ಇದೆ ಎಂದರು.

- Advertisement -

ಈ ಸಿನಿಮಾ ಸಮಾಜಕ್ಕೆ ಒಂದು ಹೊಸ ಮೆಸೇಜ್ ಕೊಡುವುದು ಎಂದರು ಮುಖ್ಯ ಅತಿಥಿಯಾಗಿದ್ದ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ, ಈ ಸಿನಿಮಾ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆಯ ಕುರಿತು ಜಾಗೃತಿ ಮೂಡಿಸಿ, ಶಿಕ್ಷಣದ ಮಹತ್ವವನ್ನು ಸಾರುವುದು ಈ ಚಿತ್ರ ಯಶಸ್ವಿಯಾಗಿ ಚಿತ್ರೀಕರಣ ಆಗಲಿ ಎಂದು ಶುಭಹಾರೈಸಿದರು.     

ಶಾಲೆಯ ಚೇರ್ಮನ್ ರವಿ ಎಫ್ ಜಂಬೂಟೇಕರ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ. ಹೆಳವನ ಪಾತ್ರದಲ್ಲಿ ಟಿಕ್ ಟಾಕ್ ಕಾಕಾ ಹೆಬ್ಬಳ್ಳಿಯ ಸಿದ್ದಪ್ಪ  ಮುಖ್ಯ ಶಿಕ್ಷಕ ಎಂ ಬಿ ಹನವಾಳ ಸಹ ಶಿಕ್ಷಕರಾದ ಬಿ ಜಿ ಲೋಬೋಗೋಳ, ಬಿ ಬಿ ಬೆಳಗಲಿ ಎಂ ಎಚ್ ಮದರ ಎಲ್ ಐ ಲಕ್ಕಮ್ಮನವರ ಬಸವರಾಜ ಗೊರವರ ಕಲಾವಿದರಾದ ತಾಯಿಯ ಪಾತ್ರದಲ್ಲಿ ಗಿರಿಜಾ ಪಲ್ಲೆದ ಶಿಕ್ಷಕಿ ರೇಖಾ ಮೊರಬ ವೀಣಾ ಹೊಸಮನಿ ಶಿಕ್ಷಕ ಪಾತ್ರವನ್ನು ವೈ. ಬಿ. ಕಡಕೋಳ ಸೇರಿದಂತೆ ವಿವಿಧ ಪಾತ್ರದಲ್ಲಿ ನುಗ್ಗಿಕೇರಿ ಶಾಲೆಯ ಮುಖ್ಯ ಶಿಕ್ಷಕಿ ಬಸಣ್ಣವರ ರುದ್ರೇಶ ಕುರ್ಲಿ ವಾಸುದೇವ ಸೂರಕೋಡ ಶಾಹೀನ ಎನ್ ಕಿತ್ತೂರ ಮುಸ್ಕಾನ ಎನ್ ಕಿತ್ತೂರ ರಿಯಾ ಹನ್ನಿಕೇರಿ ಸ್ನೇಹಾ ರಾಠೋಡ ವೈಭವ ಕೊಳ್ಳಿ ಜ್ಯೋತಿ ಗೌಲಿ ನಿರ್ದೇಶಕ ಸಂತೋಷ, ಛಾಯಾಗ್ರಹಕ ಬಸವರಾಜ ಗೋಕಾವಿ, ಕುಮಾರಿ ಫಲ್ಲವಿ ದೇ ಚಾಕಲಬ್ಬಿ ಸುಪ್ರಿಯ ದೊಡವಾಡ ಇತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!
Join WhatsApp Group