spot_img
spot_img

Mallikarjun Hongal: ಕ. ರಾ. ಪ್ರಾ. ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕಿನ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹೊಂಗಲ

Must Read

- Advertisement -

ಸವದತ್ತಿ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರುಗಿತು. ಈ ಸಂದರ್ಭದಲ್ಲಿ ಸೇವಾ ಹಿರಿತನ ಗಮನಿಸಿ ಯಕ್ಕುಂಡಿ ಗ್ರಾಮದ ಹೊಂಗಲ ಮನೆತನದ ಮಲ್ಲಿಕಾರ್ಜುನ ಹೊಂಗಲ ಉಪಾಧ್ಯಕ್ಷ ರಾಗಿ ಆಯ್ಕೆ ಆದರು. ತಾಳಿದವನು ಬಾಳಿಯಾನು ಎಂಬ ಉಕ್ತಿಯನ್ನು ಹೊಂಗಲ ಅವರಿಗೆ ಹೇಳಬಹುದು. ಸದ್ಯ ಮುನವಳ್ಳಿ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹೊಂಗಲ ಅವರ ನನ್ನ ನಂಟು 1987 ರ ದಶಕದ್ದು. ಆಗ ಧಾರವಾಡ ಶಿಕ್ಷಣ ಕಾಶಿಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಶಿಕ್ಷಣ ಪಡೆಯಲು ಹೋಗುವುದು ಬಹಳ ವಿರಳ.

ನಮ್ಮ ಭಾಗದಿಂದ ಮಲ್ಲಿಕಾರ್ಜುನ ಹೊಂಗಲ ಸಿ. ಪಿ. ಈಡಿ ಮಾಡಲು ದೈಹಿಕ ಶಿಕ್ಷಣ ಕ್ಕಾಗಿ ಮಲ್ಲಸಜ್ಜನ ವ್ಯಾಯಾಮ ಶಾಲೆಗೆ ತೆರಳಿ ಅಲ್ಲಿ ವ್ಯಾಸಂಗ ಪೂರೈಸಿ ನಂತರ ಬಿ. ಎ ಪದವಿ ಕಿಟೆಲ್ ಕಾಲೇಜಿನಲ್ಲಿ ಸೇರಿದ್ದ ಸಮಯವದು. ನಾನು ಆಗ ತಾನೇ ಪಿ. ಯು. ಸಿ ಮುಗಿಸಿ ಪದವಿಯನ್ನು ಕೆ. ಎಲ್. ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಪ್ರವೇಶ ಪಡೆದಿದ್ದೆನು.

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯ ಕ್ರಮಗಳಲ್ಲಿ ನಾವು ಸೇರುತ್ತಿದ್ದೆವು. ಮೊದಲು ಮುನವಳ್ಳಿ ಯಲ್ಲಿ ಹೊಂಗಲ ಅವರ ವ್ಹಾಲಿಬಾಲ್ ಹಾಗೂ ಕಬಡ್ಡಿ ಆಟವನ್ನು ನಾನು ನೋಡುತ್ತಿದ್ದೆ. ಅದು ನನ್ನ ಪ್ರೌಢಶಾಲಾ ದಿನದಲ್ಲಿ ಅವರು ಪಿ. ಯು. ಸಿಯಲ್ಲಿ ಓದುತ್ತಿದ್ದರು. ಇವರ ಆಟದ ಶೈಲಿಯ ನನಗೆ ಹಿಡಿಸಿತ್ತು. ಪರಸ್ಪರ ಪರಿಚಯ ಇರಲಿಲ್ಲ. ಯಾವಾಗ ಧಾರವಾಡ ಪರಿಸರದಲ್ಲಿ ನಾವು ಭೇಟಿಯಾದೆವೋ ಆಗ ನಮ್ಮ ಭಾಗದವರು ಎಂಬ ಹೆಮ್ಮೆ ಪರಸ್ಪರ ಸ್ನೇಹ ಮೂಡಲು ಕಾರಣವಾಯಿತು.

- Advertisement -

ಮುನವಳ್ಳಿ ಭಾಗದ ಯಾರೇ ಧಾರವಾಡ ಶಿಕ್ಷಣಕ್ಕೆ ಬರಲಿ ಪ್ರತಿ ಭಾನುವಾರ ನಮ್ಮ ಭೇಟಿಗೆ ಧಾರವಾಡ ಕಲಾಭವನದ ಆವರಣ ಹಾಗೂ ಆಝಾದ್ ಪಾರ್ಕ್ ನಲ್ಲಿ. ನಮಗಿಂತ ವಯಸ್ಸಿನಲ್ಲಿ ಹೊಂಗಲ ಹಿರಿಯರಾದರೂ ಕೂಡ ಓರ್ವ ಸಹೋದರ ನ ರೀತಿಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದ್ದರು. 

ನಮ್ಮ ಭಾಗದ ಕಿರಿಯ ವಿದ್ಯಾರ್ಥಿಗಳು ಕೂಡ ಅಲ್ಲಿ ಸೇರಿ ನಮ್ಮ ನಮ್ಮ ಕಾಲೇಜು ವ್ಯಾಸಂಗ ಮನೆತನದ ವಿಚಾರ ಹೀಗೆ ಪರಸ್ಪರ ಮಾತುಕತೆ ಅಲ್ಲಿ ಜರಗುತ್ತಿತ್ತು. ನಂತರ ಯಥಾರ್ಥವಾಗಿ ನಮ್ಮ ಶಿಕ್ಷಣ. ಯಾರಿಗಾದರೂ ಏನಾದರೂ ತೊಂದರೆ ಕಷ್ಟ ಕಂಡುಬಂದಾಗ ಹೊಂಗಲ ಅವರ ಸಹಾನುಭೂತಿ ಹಾಗೂ ಸಹಕಾರ ತಂಡದ ರೂಪದಲ್ಲಿ ಜರಗುತ್ತಿತ್ತು. ಕಾಲೇಜಿನ ಲ್ಲಿಯೂ ಕೂಡ ಇವರೊಬ್ಬ ಉತ್ತಮ ಕ್ರೀಡಾಪಟು. ಯೂನಿವರ್ಸಿಟಿ ಹಂತದಲ್ಲಿ ಇವರು ತಂಡಗಳಲ್ಲಿ ಭಾಗವಹಿಸಿ ಆಡುತ್ತಿದ್ದುದನ್ನು ನಾನು ಹತ್ತಿರದಿಂದ ಕಂಡ ನೆನಪು. 

- Advertisement -

ಯಾಕೆ ಇಷ್ಟು ಹೇಳಬೇಕಾಯಿತು ಎಂದರೆ ಮುಂದೆ ನನ್ನ ಜೊತೆ ಇವರು ಸೇವೆ ಸಲ್ಲಿಸಬಹುದು ಎಂದು ಕನಸಿನಲ್ಲಿ ಕೂಡ ಕಂಡಿರದ ವ್ಯಕ್ತಿ ನಮ್ಮ ನಮ್ಮ ಶಿಕ್ಷಣ ಸಾಗಿ ನಾನು ತೆಗ್ಗಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಸೇವೆ ಪ್ರಾರಂಭಿಸಿ ದಾಗ ನನ್ನ ಶಾಲೆಗೆ ವರ್ಗಾವಣೆ ರೂಪದಲ್ಲಿ ಹೊಂಗಲ ಗುರುಗಳು ಆಗಮಿಸಿದರು. 

ನಾನು ಪ್ರಭಾರೀ ಮುಖ್ಯೋಪಾಧ್ಯಾಯ ಚಾರ್ಜ ವಹಿಸಿಕೊಂಡು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಮಕ್ಕಳಿಗೆ ಎಲ್ಲಾ ಕ್ರೀಡೆಗಳಲ್ಲಿ ತರಬೇತಿ ಹೊಂಗಲ ಗುರುಗಳು ನೀಡುತ್ತಿದ್ದರು. ನಮ್ಮ ಶಾಲೆ ಆಗ 5 ನೇ ತರಗತಿ ವರೆಗೆ ಇತ್ತು. ಪ್ರತಿ ವರ್ಷ ಕಬಡ್ಡಿ. ಖೋಖೋ.ವ್ಹಾಲಿಬಾಲ್ ಪಂದ್ಯದಲ್ಲಿ ನಾವು ತಾಲೂಕು ಮಟ್ಟದಲ್ಲಿ ಹೋಗಿ ಬರುತ್ತಿದ್ದೆವು ಕಾರಣ ಹೊಂಗಲ ಗುರುಗಳ ಪರಿಶ್ರಮ. 

ವಿಜ್ಞಾನ ಗಣಿತ ವಿಷಯದಲ್ಲಿ ಆರ್. ವೈ. ಅಡಿಭಟ್ಟಿ. ಅಶೋಕ ಕಬ್ಬಿಣ.(ಸ್ಕೌಟ್ಸ್ ಮತ್ತು ಗೈಡ್ಸ್) ಮಂಜುನಾಥ ಡೊಂಬರ್(ಸದ್ಯ ಉಪವಿಭಾಗಾಧಿಕಾರಿ ಹುದ್ದೆಯಲ್ಲಿ ಇದ್ದಾರೆ) ಶ್ರೀ ಮತಿ ವೀಣಾ ಅಂಬಿಗೇರ ನಲಿಕಲಿ ತರಗತಿ ನಿರ್ವಹಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ (ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರಿನಲ್ಲಿ ಸೇವೆ) ದಿವಂಗತ ಕೆ ಕೆ. ಕಾಮ್ಕರ್ ಹೀಗೆ ನಮ್ಮ ಶಿಕ್ಷಕ ಬಳಗ ತಮ್ಮದೇ ಛಾಪು ಮೂಡಿಸಿರುವ ಶಿಕ್ಷಕರನ್ನು ಹೊಂದಿದ ಶಾಲೆ ನನ್ನದಾಗಿತ್ತು.

ಕ್ರಮೇಣ 7 ನೇ ತರಗತಿ ಮೇಲ್ದರ್ಜೆಯ ಶಾಲೆ ನನ್ನದಾಗಲು ಈ ನನ್ನ ಶಿಕ್ಷಕ ಬಳಗ ಕಾರಣ. ಈ ಸಂದರ್ಭದಲ್ಲಿ ಶ್ರೀ ಹೊಂಗಲ ಸಂಘಟನಾ ಶಕ್ತಿ ಕಂಡು ಅವರನ್ನು ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಅಭ್ಯರ್ಥಿ ಆಗುವಂತೆ ನಾವೆಲ್ಲರೂ ಒತ್ತಾಯ ಮಾಡಿ ನಿಲ್ಲಿಸಿ ದ್ದೆವು ಹಲವು ಶಿಕ್ಷಕರು ಸ್ಪರ್ಧೆಯಲ್ಲಿ ಇದ್ದ ಚುನಾವಣೆಯಲ್ಲಿ ಹೊಂಗಲ ಗುರುಗಳು ಆಯ್ಕೆ ಆಗಿದ್ದು ಆಗ ಇತಿಹಾಸ ಸೃಷ್ಟಿ ಆಗುವಂತಾಗಿತ್ತು. ನಮ್ಮ ಶಾಲೆಯಲ್ಲಿ ನಮ್ಮ ಕೇವಲ ಮೂರು ಮತಗಳ ನ್ನು ಕಂಡು ಎದುರಾಳಿಯ ವರು ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾಗ ಎಲ್ಲಾ ಮತಗಳ ಕ್ರೋಢೀಕರಣ ನಾವು ಮೂರೇ ಜನ ಮಾಡಿ ಅಭ್ಯರ್ಥಿ ಗೆಲ್ಲಲು ಕಾರಣವಾದಾಗ ಎಲ್ಲರಿಗೂ ನಮ್ಮ ಕಾರ್ಯ ವೈಖರಿ ಕಂಡು ಅಚ್ಚರಿ ಆಗಿತ್ತು. 

ಟೀಂ ವರ್ಕ ಅಂದರೆ ತೆಗ್ಗಿಹಾಳ ಶಾಲೆಯದು ಎಂಬ ಮಾತುಗಳು ಆಗ ಕೇಳಿ ಬರತೊಡಗಿದವು. ಸುತ್ತ ಮುತ್ತ ಲಿನ ಶಾಲೆಗಳಿಗೆ ಕೇವಲ 5 ಜನ ಶಿಕ್ಷಕರ ಶಾಲೆ ಎಲ್ಲರೊಂದಿಗೆ ಬೆರೆತು ತಾಲೂಕಿನ ಲ್ಲಿಯೂ ಹೆಸರಾಗುವಂತೆ ಮಾಡಲು ಕಾರಣ ಸಂಘಟನೆ. 

ನಂತರ ತಾಲೂಕಿನ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಮ್ಮ ಹಿರಿಯ ಶಿಕ್ಷಕರಾದ ಆರ್. ವೈ. ಅಡಿಭಟ್ಟಿ ಚುನಾವಣೆಯಲ್ಲಿ ಆಯ್ಕೆ ಆಗಿದ್ದು. ಅಡಿಭಟ್ಟಿ ಗುರುಗಳು ಗಣಿತ ವಿಜ್ಞಾನ ವಿಷಯದಲ್ಲಿ ಅಷ್ಟೇ ಅಲ್ಲ ಅವರು ನಮ್ಮನ್ನೆಲ್ಲ ಪ್ರವಾಸಕ್ಕೆ ಕರೆದೊಯ್ಯುವ ರೀತಿ ಮರೆಯಲಾಗದು. ನಾವು ಪ್ರತಿ ವರ್ಷ ಕನಿಷ್ಠ ನಾಲ್ಕು ದಿನಗಳ ಕಾಲ ಪ್ರವಾಸ ಮಾಡುವುದು.

ಶನಿವಾರ ಭಾನುವಾರ ರಜೆ ನೋಡಿ ಅದರ ಹಿಂದೆ ಅಥವಾ ಮುಂದೆ ಸರಕಾರಿ ರಜಾ ದಿನಗಳನ್ನು ನೋಡಿ ಪ್ರವಾಸ ಅನುಮತಿ ತಗೆದುಕೊಂಡು ಮರಳಿ ಬರುವಾಗ ಕನಿಷ್ಠ ನಾಲ್ಕು ದಿನ ಆಗುವಂತೆ ನೋಡಿಕೊಂಡು ಪ್ರವಾಸ ಹೊರಡುತ್ತಿದ್ದೆವು. ಪ್ರವಾಸ ದ ಅಡುಗೆ ಜವಾಬ್ದಾರಿ ಅಡಿಭಟ್ಟಿ ಗುರುಗಳದು.ಜೊತೆಗೆ ಅಡುಗೆ ಪರಿಕರಗಳನ್ನು ತಗೆದುಕೊಂಡು ಹೋಗೋದು. ಅವರು ನಮ್ಮೊಳಗೆ ನಳಮಹರಾಜ ಇದ್ದ ಹಾಗೆ.

ಆ ದಿನಗಳನ್ನು ನೆನಪಿಗೆ ತಂದರೆ ಸಾಕು ಮತ್ತೆ ಪ್ರವಾಸ ಮಾಡಿದರೆ ಅಡಿಭಟ್ಟಿ ಗುರುಗಳ ನೇತೃತ್ವದಲ್ಲಿ ಮಾಡಬೇಕು ಎನ್ನುವಂತೆ ನಮ್ಮ ಪ್ರವಾಸ ವೈಖರಿ ಇರುತ್ತಿತ್ತು.ಹೀಗೆ ನಾವು ಐದು ಜನ ಒಂದು ಕುಟುಂಬದ ಸದಸ್ಯರ ಹಾಗೆ ಇದ್ದು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ದಿನಗಳನ್ನು ಈಗ ನೆನೆಯುವೆನು.ನಾನು ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಗೌರವಕ್ಕೆ ಪಾತ್ರರಾಗಲು ಕಾರಣ ಹೊಂಗಲ ಗುರುಗಳು. ನನಗೆ ಪ್ರಸ್ತಾವನೆ ಸಲ್ಲಿಸಲು ಸಹಾಯ ಸಹಕಾರ ನೀಡಿದ್ದು ಮರೆಯಲಾಗದ ಸಂದರ್ಭ. ಹೀಗೆ ನನ್ನ ಶಾಲೆ ನನ್ನ ಹೆಮ್ಮೆ. 

ಹೊಂಗಲ ಗುರುಗಳು ತಾವೊಬ್ಬರೇ ಧಾರವಾಡ ವ್ಯಾಸಾಂಗ ಮಾಡದೇ ತಮ್ಮ ಕುಟುಂಬಗಳ ಸಹೋದರ ರನ್ನು ಕೂಡ ಧಾರವಾಡ ವ್ಯಾಸಾಂಗ ಮಾಡಿಸಿದರು ಈಗ ಹೊಂಗಲ ಮನೆತನದ ಬಹುತೇಕ ಸಹೋದರರು ಶಿಕ್ಷಕ ವೃತ್ತಿ ಯಲ್ಲಿ ಇರುವ ಜೊತೆಗೆ ಯಕ್ಕುಂಡಿ ಗ್ರಾಮದ ಅನೇಕ ರನ್ನು ಧಾರವಾಡ ಶಿಕ್ಷಣ ಪೂರೈಸಲು ಕಾರಣಕರ್ತರು ಹೊಂಗಲ ಗುರುಗಳು. ಅಂದ ಹಾಗೆ ಹೊಂಗಲ ಮನೆತನ ಯಕ್ಕುಂಡಿ ಗ್ರಾಮದಲ್ಲಿ ರಾಜಕಾರಣದ ಮನೆತನವಾಗಲು ಕಾರಣ ಬಸವರಾಜ ಹೊಂಗಲ.

ಬಹಳ ಸಾತ್ವಿಕ ವ್ಯಕ್ತಿ. ಸದಾ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಾಮಾಣಿಕವಾಗಿ ರಾಜಕಾರಣದ ಚಟುವಟಿಕೆಗಳನ್ನು ಇಂದಿಗೂ ಮಾಡುತ್ತಿರುವ ಹಿರಿಯರು. ನನಗಂತೂ ಇವರ ಸಂಪರ್ಕ ಹೊಂಗಲ ಗುರುಗಳು ಮಾಡಿಸಿದಾಗ ಅವರೊಂದಿಗೆ ತೋಟಕ್ಕೆ ಹೋಗಿ ರಾಜಕಾರಣದ ಹಲವು ಸಂಗತಿಗಳನ್ನು ಚರ್ಚಿಸುವಾಗ ಅವರ ಸಾತ್ವಿಕ ಗುಣ ಬಹಳ ಮೆಚ್ಚುಗೆ ಆಗುತ್ತಿತ್ತು.

ಅವರು ಒಂದು ಕಾಲದಲ್ಲಿ ಸವದತ್ತಿ ಸ್ಪಿನ್ನಿಂಗ್ ಮಿಲ್ ನಿರ್ದೇಶಕರಾಗಿ.ಎ.ಪಿ.ಎಂ.ಸಿ ನಿರ್ದೇಶಕ ರಾಗಿ ಅದಿಕಾರ ಹೊಂದಿದವರು. ನನ್ನ ಸಾಹಿತ್ಯದ ಒಲವು ಕಂಡು ತಮ್ಮ ತಾತ ಗುರುಪಾದಪ್ಪ ಹೊಂಗಲ ಅವರ ಸಾಹಿತ್ಯ ಕುರಿತು ಹೇಳುತ್ತಿದ್ದರು.

ಯಕ್ಕುಂಡಿ ಗ್ರಾಮದಲ್ಲಿ ಗುರುಪಾದಪ್ಪ ಹೊಂಗಲ ಎಂಬ ಅಧ್ಯಾತ್ಮ ವಿಷಯದಲ್ಲಿ ಸಾಹಿತಿ ತತ್ವ ಪದಗಳನ್ನು ರಚಿಸಿ ಹಾಡಿದ್ದು ಅವರ ಕುರಿತು ಅಧ್ಯಯನ ಆಗಬೇಕು ಅಂತಹ ಸಾಹಿತಿಯನ್ನು ಹೊಂದಿರುವ ಮನೆತನ ಹೊಂಗಲ ಮನೆತನ.ಈ ಮನೆತನದಲ್ಲಿ ಪತ್ರೆಪ್ಪ ಹೊಂಗಲ ಎಂಬ ಹಿರಿಯರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಗಿ ಆಗಿ ಹೋಗಿರುವರು. ಅವರು ನೇರ ನಿಷ್ಠುರವಾಗಿದ್ದರು. ನಮ್ಮ ಆಫೀಸಿನಲ್ಲಿ ಕಂಪ್ಯೂಟರ್ ಪ್ರೋಗ್ರಾಂ ರ್ ಆಗಿ ಸೇವೆ ಸಲ್ಲಿಸುತ್ತಿರುವ ಮೂರನೇ ಪೀಳಿಗೆಯ ವಿನೋದ ಹೊಂಗಲ್ ಕೂಡ ಈ ಮನೆತನದ ಕುಡಿ. ಬಹಳ ಒಳ್ಳೆಯ ಕೆಲಸಗಾರರ ವಿನೋದ. 

ಪ್ರತಿ ವರ್ಷ ಯಕ್ಕುಂಡಿ ಗ್ರಾಮದ ಲ್ಲಿ ಜರಗುವ  ಉರುಸ್  ಗೆ ಕವ್ವಾಲಿ ನೋಡಲು ನಮ್ಮ ಶಾಲಾ ಶಿಕ್ಷಕರೆಲ್ಲರೂ ಹೋಗಿ ವಾಸ್ತವ್ಯ ಹೊಂಗಲ ಗುರುಗಳ ಮನೆಯಲ್ಲಿ ಮಾಡಿ ಬರುತ್ತಿದ್ದ ನೆನಪುಗಳು ಈಗ ಕಣ್ಮುಂದೆ ಬರುತ್ತಿವೆ. ಕಾರಣ ಹಿರಿಯ ಸನ್ಮಿತ್ರ ಈಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ತಾಲೂಕು ಮಟ್ಟದ ಹುದ್ದೆಗೆ ಪಾತ್ರರಾಗಿರುವುದು. 

ಕ್ರಿಯಾಶೀಲ ವ್ಯಕ್ತಿ. ತಾನೂ ಬೆಳೆಯಬೇಕು ತನ್ನೊಂದಿಗೆ ಇತರರು ಬೆಳೆಯಬೇಕು ಎಂಬ ಧನಾತ್ಮಕ ಆಲೋಚನೆ ಹೊಂದಿರುವ ಹಿರಿಯ ಸ್ನೇಹಿತ ಈ ಹುದ್ದೆಗೆ ಆಯ್ಕೆ ಆದಾಗ ನಾನೇ ಆಯ್ಕೆ ಆಗಿರುವೆನೇನೋ ಎಂಬ ಖುಷಿ. ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಸದಾ ಬೆಂಬಲ ಇಂದಿಗೂ ನೀಡುತ್ತಿರುವರು. ನನ್ನ ಬರಹಗಳನ್ನು ನಾಡಿನಾದ್ಯಂತ ತಾವು ಇರುವ ವ್ಯಾಟ್ಸಪ್ ಗ್ರುಪ್ ನಲ್ಲಿ ಹಾಕುವ ಮೂಲಕ ನಮ್ಮ ಸ್ನೇಹ ಅನವರತ ಎಂದು ಸಾರುತ್ತಿರುವವರು. 

ಹೊಂಗಲ ಗುರುಗಳು ದೈಹಿಕ ಶಿಕ್ಷಕರಾಗಿ ಆಯ್ಕೆ ಆಗ ಬೇಕಿತ್ತು. ಟಿ. ಸಿ ಎಚ್ ಸಮಾನ ಇಂಟರ್ ಶಿಪ್ ಶಿಕ್ಷಣ ಮುನವಳ್ಳಿ ಯಲ್ಲಿ ಪೂರೈಸಿದ ಕಾರಣ ಹಾಗೂ ಆಗಿನ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಹುದ್ದೆಗೆ ಆಯ್ಕೆ ಅಪರೂಪವಾದ ಕಾರಣ ಸಾಮಾನ್ಯ ಶಿಕ್ಷಕರಾಗಿ ಶಿಕ್ಷಕ ವೃತ್ತಿ ಹೊಂದಿದ್ದರೂ ಕೂಡ ಮಕ್ಕಳ ದೈಹಿಕ ಶಿಕ್ಷಣ ಕ್ಕಾಗಿ ಶ್ರಮವಹಿಸಿ ಕ್ರೀಡೆಗಳನ್ನು ಬೋಧಿಸುವ ಶಿಕ್ಷಕರಾಗಿ ಕೂಡ ಸೇವೆ ಗೈಯುತ್ತಿರುವರು.ಬಿ.ಎ.ಬಿ.ಪಿ.ಈಡಿ ಹಾಗೂ ಡಿಪ್ಲೊಮಾ ಇನ್ ಯೋಗಾ ಅಂದಿನ ಸಂದರ್ಭದಲ್ಲಿ ವ್ಯಾಸಾಂಗ ಪೂರೈಸಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಯುನಿವರ್ಸಿಟಿ ಬ್ಲ್ಯೂ ಆದ ನಮ್ಮ ಭಾಗದ ಹೆಮ್ಮೆಯ ಶಿಕ್ಷಕ ಹೊಂಗಲ ಗುರುಗಳು. ಅವರ ಸೇವೆ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ರಾಗಿ ಇನ್ನೂ ಹೆಚ್ಚು ಹೆಚ್ಚು ತಾಲೂಕಿನ ಶಿಕ್ಷಕ ಸಮುದಾಯಕ್ಕೆ ದೊರೆಯಲಿ ಎಂದು ಆಶಿಸುವೆನು. ತಾಳಿದವನು ಬಾಳಿಯಾನು ಎಂಬುದಕ್ಕೆ ನಿದರ್ಶನ ಹೊಂಗಲ ಗುರುಗಳು.  ಇವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಗದ್ದಿಗೌಡರ ಕೂಡ ಸದ್ಯ ಯಕ್ಕುಂಡಿ ಗ್ರಾಮದ ಹಿಡಿದು ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವರು. ಇವರು ಕೂಡ ಸ್ನಾತಕೋತ್ತರ ಪದವೀಧರೆ. ಹವ್ಯಾಸಿ ಬರಹಗಾರ್ತಿ. ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ ಎಂಬಂತೆ ಇಬ್ಬರು ಮಕ್ಕಳು.ಒಳ್ಳೆಯ ಶಿಕ್ಷಣ ಕೂಡ ಅವರು ಹೊಂದುತ್ತಿರುವರು.ಹೊಂಗಲ ಗುರುಗಳು ಬೆಳೆದು ಬಂದ ಹಾದಿಯನ್ನು ಹತ್ತಿರದಿಂದ ಕಂಡು ಅವರೊಂದಿಗೆ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ನೆನಪುಗಳನ್ನು ಈ ಪುಟ್ಟ ಬರಹದಲ್ಲಿ ಮೂಡಿಸಿರುವೆ. ಹೊಂಗಲ ಗುರುಗಳಿಗೆ ಅಭಿಮಾನದ ಅಭಿನಂದನೆಗಳನ್ನು ನನ್ನ ಅಕ್ಷರ ನಮನದ ಮೂಲಕ ಸಲ್ಲಿಸುವೆ

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಕಹಿ ನೆನಪು ಸಾಕೊಂದು ಮಾತಲೀ ಬದುಕು

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ.

ಕಾಡುತಿದೆ ಮನವಾ…

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ನನ್ನ ನೆನಪಿನ ಪುಟಗಳು ಹೊಂಗಲ ಗುರುಗಳ ಒಡನಾಟದ ಮೂಲಕ ಹೊರಗೆಡವಿರುವೆನು. ಹೊಂಗಲ ಗುರುಗಳನ್ನು ಅಭಿನಂದಿಸಲು ಅವರ ಸಂಪರ್ಕ ಸಂಖ್ಯೆ ಗೆ ಕರೆ ಮಾಡಿ.  94497 97115


ವೈ. ಬಿ. ಕಡಕೋಳ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group