ರಸ್ತೆ ಕಾಮಗಾರಿಗೆ ಶಾಸಕ ಬಳ್ಳಾರಿ ಚಾಲನೆ

Must Read

ಇಂದು ಬೆಳಿಗ್ಗೆ ದೇವರಗುಡ್ಡ ಗ್ರಾಮದಲ್ಲಿ ರೂ.50.00 ಲಕ್ಷಗಳ ಅನುದಾನದಲ್ಲಿ ದೇವರಗುಡ್ಡ-ಬುಡಪನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ರು ಬಳ್ಳಾರಿ ಚಾಲನೆ ನೀಡಿದರು.

ಸದರಿ ರಸ್ತೆ ಅಭಿವೃದ್ಧಿ ಮಾಡುವ ಕುರಿತು ಬುಡಪನಹಳ್ಳಿ ಮತ್ತು ದೇವರಗುಡ್ಡ ಗ್ರಾಮಗಳ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇದ್ದು. ಇಂದು ಕಾಮಗಾರಿ ಶಂಕು ಸ್ಥಾಪನೆಗೊಳ್ಳುತ್ತಿರುವುದು ರೈತ ಬಾಂಧವರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಲತೇಶ ನಾಯರ, ಉಪಾಧ್ಯಕ್ಷರಾದ ಮಾಲಕ್ಕ ಗುಬ್ಬಿ, ಸದಸ್ಯರಾದ ಕರಿಯಪ್ಪ ಉರ್ಮಿ, ಕರಿಯಪ್ಪ ಪಾರಿ, ದೊಡ್ಡಬಿರೇಶ ಗುಡುಗುರ, ಚಂದ್ರು ಉರ್ಮಿ, ಚಂದ್ರು ಜಾಡರ, ತೀರಕಣ್ಣ ಬುಡಪನಹಳ್ಳಿ, ಬುಡಪನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಡಾ. ಹನಮಂತ ಸುಂಕಾಪುರ, ದಿಲ್ಲೆಪ್ಪ ಐಗಳ, ನಾಗಪ್ಪ ಹುಲ್ಲಾಳ, ದುರಗಪ್ಪ ಸಪೂರಿ, ಶಂಭು ಮಾಲದಾರ, ಡಿಳ್ಳೆಪ್ಪ ಸುಂಕಾಪುರ, ಶಿವಣ್ಣ ಹರಮಗಟ್ಟಿ, ರಮೇಶ ಅರಬಗೊಂಡ ಹಾಗೂ AEE ಕಲ್ಲೋಳಿಕರ ಗುತ್ತಿಗೆದಾರರಾದ ನಾಗರಾಜ ಆನ್ವೇರಿ ರವರು ಜೊತೆಗಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group