ಸಿಂದಗಿ: ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು. ಗ್ರಾಮೀಣ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅವರಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಚತೆಯನ್ನು ವಹಿಸಿ ಮಾತನಾಡಿದ ಅವರು, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನ ಮಾಡುವ ಮೂಲಕ ಕ್ಷೇತ್ರ ಅಭಿವೃದ್ಧಿ ಪಡೆಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
ವಿದ್ಯುತ್ ಸರಬರಾಜು: ಗಂಗಾ ಕಲ್ಯಾಣ ಕಾಮಗಾರಿ ಪ್ರಗತಿ ಹಿಂದುಳಿದ ವರ್ಗಗಳ ಅಡಿಯಲ್ಲಿ ೧೯ ನೋಂದಣಿಯಾಗಿದ್ದು, ಇದರಲ್ಲಿ ಈಗಾಗಲೇ ೧೦ ಪೂರ್ಣಗೊಂಡಿವೆ. ೯ ಕಾಮಗಾರಿ ಬಾಕಿ ಇದ್ದು, ಈ ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ್ ತಿಳಿಸಿದರು.
೨೦೨೩-೨೪ ನೆಯ ಸಾಲಿನಲ್ಲಿ ಅಕ್ರಮ ಸಕ್ರಮ ಯೋಜನೆ ಪ್ರಗತಿ : ಒಟ್ಟು ನೋಂದಣಿಯಾದ ಪಲಾನುಭವಿಗಳ ಸಂಖ್ಯೆ ೧೭೮೨ ಇವುಗಳಲ್ಲಿ ೭೨೦ ಅನುಮೋದನೆಯಾಗಿದ್ದು, ೫೪೦ ಕಾಮಗಾರಿ ಪೂರ್ಣಗೊಂಡಿವೆ, ೧೮೦ ಕಾಮಗಾರಿ ಪ್ರಗತಿ ಹಂತದಲ್ಲಿವೆ, ೧೦೬೨ ಕಾಮಗಾರಿ ಬಾಕಿ ಇವೆ ಇವುಗಳು ಅನುಮತಿ ತೆಗೆದುಕೊಂಡು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಪಿಆರ್‌ಇಡಿ ಇಲಾಖೆ: ೨೦೨೨-೨೩ ನೇ ಸಾಲಿನ ವಿವೇಕ ಶಾಲಾ ಕೊಠಡಿಗಳ ಒಟ್ಟು ಕಾಮಗಾರಿ ಸಂಖ್ಯೆ ೩೧, ಪ್ರಾರಂಭಿಕ ಹಂತದಲ್ಲಿ ೨, ಪ್ರಗತಿ ಹಂತದಲ್ಲಿ ೧೩, ಪೂರ್ಣಗೊಂಡಿರುವ ಕಾಮಗಾರಿ ೧೬, ಮತ್ತು ಸ್ಥಳ ಸಮಸ್ಯೆ ೨ ಇರುತ್ತವೆ ಎಂದು ತಿಳಿಸಿದರು.
೨೦೨೩-೨೪ರ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳು: ಅರೋಗ್ಯ ಇಲಾಖೆ ಕಟ್ಟಡ ನಿರ್ವಹಣೆ ಪೂರ್ಣಗೊಂಡಿರುತ್ತದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ವಹಣೆ ಸಿಂದಗಿ ೨, ಆಲಮೇಲ ೧, ಅಂಗನವಾಡಿ ಕಟ್ಟಡ ನಿರ್ವಹಣೆ ಸಿಂದಗಿ ೪, ಆಲಮೇಲ ೧, ಕೃಷಿ ಇಲಾಖೆ ಕಟ್ಟಡ ನಿರ್ವಹಣೆ ಸಿಂದಗಿ ೨, ತೋಟಗಾರಿಕೆ ಕಟ್ಟಡ ನಿರ್ವಹಣೆ ಸಿಂದಗಿ ೧ ಮತ್ತು ಪಶು ಸಂಗೋಪನೆ ಕಟ್ಟಡ ನಿರ್ವಹಣೆ ಸಿಂದಗಿ ೨ ಪೂರ್ಣಗೊಂಡಿವೆ ಎಂದು ಪಿಆರ್‌ಇಡಿ ಎಇಇ ಜಿ.ವಾಯ್.ಮುರಾಳ ತಮ್ಮ ಇಲಾಖೆ ಪ್ರಗತಿ ಮಂದಿಸಿದರು.
ಆರ್‌ಡಬ್ಲೂಎಸ್ ಇಲಾಖೆ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯ ಜೆಜೆಎಮ್ ಕಾಮಗಾರಿ ಒಟ್ಟು೮೬ ಇದ್ದು, ಇದರಲ್ಲಿ ಎಡಿಎಂಯಿಂದ ಅನುಮೋದನೆಯಾಗಿದೆ. ೩೮ ಪ್ರಗತಿ ಹಂತದಲ್ಲಿ ಇದ್ದು, ೧೦ ಪೂರ್ಣಗೊಂಡಿವೆ, ೧೦ ಟೆಂಡರ್ ಕರೆಯಲಾಗಿದೆ. ೫ ವರ್ಕ್ಆರ್ಡರ್ ಸಮಸ್ಯೆಯಾಗಿರುತ್ತವೆ ಎಂದು ಆರ್‌ಡಬ್ಲೂಎಸ್ ಎಇಇ ತಾರಾನಾಥ್ ರಾಠೋಡ ತಮ್ಮ ಇಲಾಖೆಯ ಪ್ರಗತಿ ಮಂದಿಸಿದರು. ಇದಕ್ಕೆ ಶಾಸಕರು ಬೇಗ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ಸಮರ್ಪಕವಾಗಿ ನೀರು ಬರುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಇಲಾಖೆ: ಶಿಕ್ಷಣ ಇಲಾಖೆಯ ವರದಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿಬ್ಬಂದಿ ಕೊರತೆ ಇದೆ ಅದನ್ನು ಪೂರೈಸಲು ಪ್ರಸ್ತಾವನೆ ಕಳುಹಿಸಿದ್ದೇನೆ. ಇನ್ನು ಕೆಲವು ಶಾಲೆಗಳಲ್ಲಿ ಶೌಚಾಲಯ, ತರಬೇತಿ ಕೋಣೆಯ ಅವಶ್ಯಕವಿದ್ದು, ಅದನ್ನು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ನೀಡುತ್ತೇನೆ. ಹಲವು ಕೊಠಡಿಯ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯ್ ಅಜೂರ, ಸಿಂದಗಿ ತಾಪಂ ಇಒ ರಾಮು ಅಗ್ನಿ, ಆಲಮೇಲ ತಾಪಂ ಇಒ ಪರಿದಾ ಪಠಾಣ, ನಬಿಲಾಲ್ ಗಬಸವಳಗಿ, ಸಹಾಯಕ ಯೋಜನಾಧಿಕಾರಿ ಅರುಣ ಕುಮಾರ ದಳವಾಯಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಎ.ಎ.ದುರ್ಗದ, ಸಿದ್ದು ಅಂಕಲಗಿ, ಜಿ.ವಾಯ್.ಮುರಾಳ, ರಾಜಶೇಖರ್ ಜೊತಗೊಂಡ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.