spot_img
spot_img

ಆಲಮಟ್ಟಿಯಿಂದ 900 ಕ್ಯೂಸೆಕ್ಸ ನೀರು ಬಿಡಲು ಶಾಸಕ ಮನಗೂಳಿ ಆಗ್ರಹ

Must Read

- Advertisement -

ಸಿಂದಗಿ: ವಿಜಯಪುರ ಜಿಲ್ಲೆಗೆ ಬರಗಾಲದ ಛಾಯೆ ಆವರಿಸಿದ ಪರಿಣಾಮ ದೇವರ ಹಿಪ್ಪರಗಿ, ಸಿಂದಗಿ, ನಾಗಠಾಣ ಕ್ಷೇತ್ರಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಗಳಿದ್ದು ಕಾರಣ ಕೊರವಾರ, ನಾಗಠಾಣ ಮುಖ್ಯ ಕಾಲುವೆಗಳಿಗೆ ಆಲಮಟ್ಟಿ ಜಲಾಶಯದಿಂದ ಕೆ.ಬಿ.ಎಲ್ ಎನ್‍ಬಿಎಲ್ ಮುಖಾಂತರ 300 ಕ್ಯೂಸೆಕ್ಸ ನೀರುವ ಬಿಡುವ ವಾಗ್ದಾನ ಮಾಡಿದ್ದು ಈ ಮೂರು ಕ್ಷೇತ್ರದ 21 ಕೆರೆ ತುಂಬುವುದು ಅಸಾಧ್ಯದ ಮಾತು ಕಾರಣ 900 ಕ್ಯೂಸೆಕ್ಸ ಬಿಡುವಂತೆ ಠರಾವು ಬರೆದು ಜಿಲ್ಲಾಧಿಕಾರಿ ಮುಖಾಂತರ ಕಮಿಷನರ್‍ಗಳಿಗೆ ರವಾನಿಸಿ ನೇರವಾಗಿ ಇಲಾಖೆಗೆ ಸಂಪರ್ಕ ಮಾಡೋಣ ಪಿಡಿಓ, ಪೊಲೀಸ, ಕಂದಾಯ, ಕೆಬಿಜೆಎನ್‍ಎಲ್ ಸಹಯೋಗದಲ್ಲಿ ಕಾರ್ಯ ನಿಬಾಯಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ಸಿಂದಗಿ ಹಾಗೂ ದೇವರ ಹಿಪ್ಪರಗಿ ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆದ ತುರ್ತು ಸಭೆಯಲ್ಲಿ ಮಾತನಾಡಿ, ಕ್ಷೇತ್ರಗಳ ಗ್ರಾಮಗಳಲ್ಲಿ ಎಲ್ಲ ಅಧಿಕಾರಿಗಳು ಸ್ಥಾನಿಕವಾಗಿದ್ದು ಮುಂಜಾಗೃತಾ ಕ್ರಮವಾಗಿ ಆಯಾ ಗ್ರಾಮಗಳಲ್ಲಿ ಸರಕಾರದಿಂದ ಕೊರೆದ ಬಾವಿ, ಮತ್ತು ಬೋರವೆಲ್ ಗಳಲ್ಲಿ ನೀರಿನ ಪ್ರಮಾಣವನ್ನು ಅವಲೋಕನ ಮಾಡಿ ಗ್ರಾಮೀಣ ಸೇರಿದಂತೆ ಸಿಂದಗಿ ಪಟ್ಟಣದಲ್ಲಿ ನೀರಿನ ಅಭಾವವನ್ನು ನೀಗಿಸಲು ಮೇಲಧಿಕಾರಿಗಳ ಜೊತೆಗೆ ಸಂಪರ್ಕಿಸಿ ಕ್ರಮಕ್ಕೆ ಮುಂದಾಗಿ ಎಂದು ನೀರು ಸರಬರಾಜು ಇಲಾಖೆಗೆ ತಾಕೀತು ಮಾಡಿದರು.

ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಕೊರವಾರ ಹಾಗೂ ನಾಗಠಾಣ ಬ್ಯಾಂಚ್ ಕಾಲುವೆಗಳಲ್ಲಿ ಹೂಳು ತುಂಬಿದ್ದು ಅದರಿಂದ ಕೊನೆಯವರೆಗೂ ನೀರು ಹೋಗಿ ಮುಟ್ಟುತ್ತಿಲ್ಲ ಅದರ ಬಗ್ಗೆ ಮುಂಚೆ ಕ್ರಮ ಜರುಗಿಸಬೇಕಿತ್ತು. ಅಲ್ಲದೆ ಕುಡಿಯುವ ನೀರಿನ ಬಗ್ಗೆ ಆಲಮಟ್ಟಿ ಜಲಾಶಯದಲ್ಲಿ 32 ಟಿಎಂಸಿ ಹಾಗೂ ನಾರಾಯಣಪುರ ಜಲಾಶಯದಲ್ಲಿ 4.5 ಟಿಎಂಸಿ ನೀರು ಸಂಗ್ರಹವಿದ್ದ ಬಗ್ಗೆ ಆಲಮಟ್ಟಿಯಲ್ಲಿ ನಡೆದ ಸಭೆಯಲ್ಲಿ ಮೇಲಾಧಿಕಾರಿಗಳು ತಿಳಿಸಿದ್ದು ಈ ಮೂರು ಕ್ಷೇತ್ರಗಳಿಗೆ ಕುಡಿಯುವ ನೀರು ಸಮಪರ್ಕವಾಗಿ ಪೂರೈಸಲು ಆಗದು ಈ ಸಭೆಯಲ್ಲಿ ಮಾಡಿದ ಠರಾವು ಪ್ರತಿ ಹಾಗೂ ಶಾಸಕರ ಸಿಫಾರಸ್ಸು ಪತ್ರದೊಂದಿಗೆ ಬಾಂದಾರ, ಹಳ್ಳಗಳಿಗೆ ನೀರು ಬಿಡುವಂತೆ ಕಮಿಷನರ್‍ಗಳಿಗೆ ರವಾನೆ ಮಾಡಿ ಎಲ್ಲ ಅಧಿಕಾರಿಗಳು ನಮ್ಮೊಂದಿಗೆ ಸಹಕಾರ ನೀಡಿ ಎಂದರು.

- Advertisement -

ಮಾರ್ಚ, ಎಪ್ರಿಲ್, ಮೇ ವರೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸರಕಾರ ಮುಂದಾಗಿದೆ ಆದರು ಕೂಡಾ ಬರಗಾಲ ಸಮಯದಲ್ಲಿ ನೀರಿನ ಸಮಸ್ಯೆ ಇದ್ದಾಗ್ಯೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದರೆ ಜನರ ಪಾಪ ಸುತ್ತಿಕೊಳ್ಳುತ್ತದೆ ಇದ್ದ ವ್ಯವಸ್ಥೆಯಲ್ಲೆ ಕ್ರಮಕ್ಕೆ ಮುಂದಾಗಿ.

ಶಾಸಕ ಅಶೋಕ ಮನಗೂಳಿ 

ಕೆಬಿಜೆಎನ್‍ಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಮಾತನಾಡಿ, ಫೆ. 19ರಿಂದ ಕಾಲುವೆಗೆ ನೀರು ಬಿಡುವುದಾಗಿ ಸರಕಾರದ ಆದೇಶವಿದೆ ಆದರೆ ಇನ್ನೂವರೆಗೂ ಕಾಲುವೆಗಳಲ್ಲಿ ನೀರು ಹರಿದು ಬಂದಿಲ್ಲ. ಸಿಂದಗಿ ಕ್ಷೇತ್ರದ ಖಾನಾಪುರ ವಸತಿ, ಬಂಕಲಗಿ, ಬ್ಯಾಲ್ಯಾಳ, ಸಾಸಾಬಾಳ, ಗಣಿಹಾರ, ಬೆನಕೊಟಗಿ, ನಂದಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಶಾಸಕರಿಗೆ ಜನರು ಮನವಿ ಮಾಡಿದ್ದು ಎಲ್ಲ ಅಧಿಕಾರಿಗಳು ಈ ಎರಡು ಮೂರು ತಿಂಗಳು ಶ್ರಮ ವಹಿಸಿ ಈ ಸಮಸ್ಯೆಗೆ ಸ್ಪಂದಿಸಿದ್ದಾದರೆ ಯಶಸ್ಸು ಕಾಣಲು ಸಾಧ್ಯ ಎಲ್ಲರು ಸಹಕಾರ ನೀಡಿ ಎಂದು ಮನವಿ ಮಾಡಿದರು.

- Advertisement -

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ದೇವರ ಹಿಪ್ಪರಗಿ ತಹಶೀಲ್ದಾರ ಪ್ರಕಾಶ ಸಿಂದಗಿ, ರಾಂಪೂರ 2 ಕಾರ್ಯನಿರ್ವಾಹಕ ಅಭಿಯಂತರ ರವಿಂದ್ರ ಕುಲಕರ್ಣಿ, ತಾಪಂ ಇಓ ರಾಮು ಅಗ್ನಿ ವೇದಿಕೆ ಮೇಲಿದ್ದರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group