spot_img
spot_img

‘ಮಣ್ಣಿನ ಮಗ’ ಕೃತಿ ಸ್ವೀಕರಿಸಿದ ದೇವೇಗೌಡ

Must Read

- Advertisement -

ಯುವ ಸಮುದಾಯವು ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕು – ದೇವೇಗೌಡ

ನಮ್ಮ ಸಾಹಿತ್ಯವು ದೇಶದ ಸಾಹಿತ್ಯಕ್ಕೆ ಸರಿಸಾಟಿಯಾಗಿ ಬೆಳೆಯುತ್ತ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವಸಮುದಾಯವು ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಜೊತೆಜೊತೆಗೆ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿಕೊಂಡು ಜ್ಞಾನವರ್ಧನೆ ಮಾಡಿಕೊಳ್ಳುವತ್ತ ಸಾಗಬೇಕು. ಸಮಾಜದ ಅಭಿವೃದ್ಧಿಗೆ ಈ ಮೂಲಕವಾಗಿ ಯುವಸಮುದಾಯ ಕಾರಣವಾಗಬೇಕು, ಎಂದು ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಪ್ರಾಯ ಪಟ್ಟಿದ್ದಾರೆ.

ಸ್ನೇಹ ಬುಕ್‌ ಹೌಸ್ ನಿಂದ ಪ್ರಕಟವಾಗುತ್ತಿರುವ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿರುವ ನೇ.ಭ.ರಾಮಲಿಂಗ ಶೆಟ್ಟರು ರಚಿಸಿರುವ ದೇವೇಗೌಡರ ಕುರಿತಾದ “ಮಣ್ಣಿನ ಮಗ” ಕೃತಿಯ ಪ್ರಥಮ ಪ್ರತಿಯನ್ನು ಸ್ವೀಕರಿಸುವ ವೇಳೆ ಮಾತನಾಡಿದ ಗೌಡರು, ಈ ಕೃತಿ ರಚನೆಗೆ ಅನೇಕ ಮಂದಿಯನ್ನು ಭೇಟಿಮಾಡಿ ಲೇಖನ, ವಿಷಯ ಸಂಗ್ರಹಣೆಯನ್ನು ಮಾಡಿರುವ ರಾಮಲಿಂಗಶೆಟ್ಟರ ಪರಿಶ್ರಮವನ್ನು ಶ್ಲಾಘಿಸಿದರಲ್ಲದೇ ಫೆಬ್ರವರಿ 29ರಂದು ನಡೆಯಲಿರುವ ಪುಸ್ತಕಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಸಿದರು.

- Advertisement -

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಷಿಯವರು ಮಾತನಾಡಿ, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಜೊತೆಜೊತೆಗೆ ಈ ಕೃತಿರಚನೆ ಮಾಡುವುದಕ್ಕೆ ಶ್ರಮವಹಿಸಿದ ರಾಮಲಿಂಗಶೆಟ್ಟರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. 

ಕೃತಿಕಾರ ರಾಮಲಿಂಗ ಶೆಟ್ಟರು ಮಾತನಾಡಿ, ದೇವೇಗೌಡರ ಕುರಿತಾದ ಹತ್ತು ಹಲವು ಮಾಹಿತಿಗಳು, ಅವರು ಮಾಡಿರುವ ಜನಪರ ಕೆಲಸಗಳು, ನೀರಾವರಿ ಯೋಜನೆಗಳ ಮಾಹಿತಿ ಸಂಗ್ರಹಣೆಗೆ ಕಳೆದ ನಾಲ್ಕು ವರುಷಗಳಿಂದ ಪಟ್ಟ ಶ್ರಮ ಮತ್ತು ಅದರ ಹಿಂದಿನ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ  ಸ್ನೇಹ ಬುಕ್ ಹೌಸ್ ಮಾಲೀಕ, ಪ್ರಕಾಶಕ ಕೆ.ಬಿ.ಪರಶಿವಪ್ಪನವರು ಉಪಸ್ಥಿತರಿದ್ದು ತಮ್ಮ ಪ್ರಕಾಶನದಿಂದ “ಮಣ್ಣಿನ ಮಗ” ಕೃತಿ ಪ್ರಕಟವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತ ಇದಕ್ಕೆ ಕಾರಣಕರ್ತರಾದ  ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.

- Advertisement -

ಇದೇ ಫೆಬ್ರವರಿ 29ರಂದು ಕನ್ನಡ ಸಾಹಿತ್ಯ ಪರಿಷನ್ಮಂದಿರದಲ್ಲಿ “ಮಣ್ಣಿನಮಗ” ಪುಸ್ತಕ ‌ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯಹಸ್ತದಿಂದ ಬಿಡುಗಡೆಯಾಗಲಿದ್ದು, ಸಮಾರಂಭದಲ್ಲಿ ಮಾಜಿಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು, ಬಸವರಾಜ ಬೊಮ್ಮಾಯಿಯವರು.

ಕರವೇ ಅಧ್ಯಕ್ಷರಾದ ನಾರಾಯಣ ಗೌಡರು, ನಾಡಿನ ಹಿರಿಯ ಸಾಹಿತಿಗಳಾದ ಡಾ.ಹಂಪ ನಾಗರಾಜಯ್ಯ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪುಸ್ತಕದ ಪ್ರತಿಗಳನ್ನು ಮುಂಗಡ ಕಾಯ್ದಿರಿಸಲು ಸಾಹಿತ್ಯಾಸಕ್ತರು ‌ ಸ್ನೇಹ ಬುಕ್ ಹೌಸ್ 9845031335 ಇವರನ್ನು ಸಂಪರ್ಕಿಸಬಹುದಾಗಿದೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group