spot_img
spot_img

ತ್ರಿಪದಿ ಬ್ರಹ್ಮ ಸರ್ವಜ್ಞನ ಕುರಿತು ಉಪನ್ಯಾಸ

Must Read

- Advertisement -

ದಿ. ೨೫-೦೨-೨೯೨೪ ರಂದು ಬೆಳಗಾವಿಯ ಲಿಂಗಾಯತ ಸಂಘಟನೆ ವತಿಯಿಂದ, ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು. ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸಮ್ಮ ಗಂಗನಳ್ಳಿ, ಇವರು “ತ್ರಿಪದಿ ಬ್ರಹ್ಮ ಸರ್ವಜ್ಞ” ವಿಷಯ ಕುರಿತು ಉಪನ್ಯಾಸ ನೀಡಿದರು.

ಬದುಕಿನ ವೈವಿಧ್ಯಮಯ ಸನ್ನಿವೇಶಗಳಲ್ಲಿ ಮನುಷ್ಯ ಒಳಿತಿನ ಕಡೆಗೆ ಸಾಗಬೇಕೆನ್ನುವ ಸಂದೇಶಗಳು ಸರ್ವಜ್ಞನ ವಚನಗಳಲ್ಲಿ ಇವೆ. ಶರಣರ ನಂತರದಲ್ಲಿ  ಬಂದಂತಹ ಸರ್ವಜ್ಞ, ಶರಣ ತತ್ವಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು, ಅಪಾರವಾದ ಲೋಕಜ್ಞಾನದ ಹಿನ್ನೆಲೆಯಲ್ಲಿ ಜನತೆಗೆ ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ, ಮಹತ್ವದ ಸಂದೇಶಗಳನ್ನು ಬಿತ್ತರಿಸಿದ ಕವಿ. ಆತನ ಚಿಂತನೆಗಳನ್ನು ಪ್ರಸ್ತುತ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತೀ ಅಗತ್ಯವಾಗಿದೆ,ಜೊತೆಗೆ ಸರ್ವಜ್ಞ ಕವಿಯ ವಚನಗಳ ( ತ್ರಿಪದಿ)  ಅಧ್ಯಯನ, ಹಾಗೂ ಮರುಚಿಂತನೆಗಳು ನಡೆಯಬೇಕೆಂಬ ವಿಚಾರಗಳನ್ನು ಅವರು ತಮ್ಮ ಉಪನ್ಯಾಸದಲ್ಲಿ  ಹೇಳಿದರು.

ಪ್ರಾರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು ಮಹಾಂತೇಶ ಮೆಣಸಿನಕಾಯಿಯವರು ಅತಿಥಿಗಳ  ಪರಿಚಯ ಮಾಡಿಕೊಟ್ಟರು,ಜಯಶ್ರೀ ಚಾವಲಗಿ, ರೂಪಾ ಚೌಗಲಾ, ದೀಪಾ ಪಾಟೀಲ, ಆನಂದ ಕಕಿ೯, ವಿ.ಕೆ.ಪಾಟೀಲ, ಸದಾಶಿವ ದೇವರಮನಿ, ಶಂಕರ ಗುಡಸ, ಸುರೇಶ ನರಗುಂದ ವಚನಗಳನ್ನು ಹೇಳಿದರು.

- Advertisement -

ಅಧ್ಯಕ್ಷರಾದ ಈರಣ್ಣ ದೇಯನ್ನವರ ಕೆಲವು ವಿಷಯಗಳನ್ನು ಹಂಚಿಕೊಂಡರು ನೂತನ ದಂಪತಿಗಳಾದ ಪೂಜಾ, ಅರುಣ ಇವರನ್ನು ಸತ್ಕರಿಸಲಾಯಿತು, ದಾಸೋಹ ಸೇವನೆಯನ್ನು ಬಸಲಿಂಗಪ್ಪ ಮೆಣಸಿನಕಾಯಿ ನೆರವೇರಿಸಿದರು, ಶಶಿಭೂಷಣ ಪಾಟೀಲ, ಶಂಕರ ಶೆಟ್ಟಿ,ಬಸವರಾಜ ಕರಡಿಮಠ,ಅನೀಲ ರಘ ಶೆಟ್ಟಿ,ಭಾಗವಹಿಸಿದ್ದರು. ಸಂಗಮೇಶ ಅರಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group