ಕನಕದಾಸರ ೫೩೭ ನೇ ಜಯಂತಿಗೆ ಶುಭ ಕೋರಿದ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Must Read

ಗೋಕಾಕ- ನಾಡಿನಾದ್ಯಂತ ನಡೆಯುತ್ತಿರುವ ಸಂತ ಶ್ರೇಷ್ಠ ಕನಕದಾಸರ ಜಯಂತಿಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.

ಕನಕದಾಸರು ಸರ್ವ ಶ್ರೇಷ್ಠ ದಾಸರು. ಇತರ ದಾಸರಿಗಿಂತ ಭಿನ್ನರಾದವರು. ಸಾಮಾನ್ಯನ ಬದುಕು ಹಸನಾಗಬೇಕು ಎಂಬ ಹಂಬಲ ಅವರದ್ದಾಗಿತ್ತು. ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿಯಾಗಿದ್ದರು ಕನಕದಾಸರು. ಕೇಡುಗಳಿಲ್ಲದ ವರ್ಗ, ಜಾತಿ, ಅಸಮಾನತೆಗಳಿಲ್ಲದ ನಮ್ಮ ಭಾರತೀಯ ಸಮ ಸಮಾಜದ ಕನಸು ಬಿತ್ತುವವರಾಗಿ ಕಾಣಿಸುತ್ತಾರೆ. ಮನುಷ್ಯನಾಗಲಿ, ದೇವನಾಗಲೀ ಎಲ್ಲದರಲ್ಲಿ ಬದ್ಧತೆ ಇರಬೇಕು ಎಂಬ ನಂಬಿಕೆಗಳನ್ನು ಇಟ್ಟುಕೊಂಡಿದ್ದರು. ದೇವಸ್ಥಾನಗಳು ಭಕ್ತರ ಕಾಮಧೇನುವಾಗಬೇಕು. ಕೇವಲ ಅಡಂಬರಕ್ಕೆ ನಮ್ಮ ಭಕ್ತಿ ಸಿಮೀತವಾಗಬಾರದು. ದೇವರು- ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಯಾವುದೇ ಕೇಡು ಆಗಬಾರದು. ಮುಕ್ತವಾದ ಮಾನವ ಸಮಾಜವು ನಿರ್ಮಾಣವಾಗಬೇಕು ಎಂಬುದನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ಒತ್ತಿ ಹೇಳಿದ್ದಾರೆ. ಶ್ರೇಷ್ಠ ದಾರ್ಶನಿಕರಾಗಿರುವ ಕನಕದಾಸರು ಸಾರಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಸಂದೇಶದಲ್ಲಿ ಹೇಳಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group