spot_img
spot_img

ಪತ್ನಿಯೊಂದಿಗೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮತದಾನ

Must Read

- Advertisement -

ಸಿಂದಗಿ: 5 ವರ್ಷಗಳ ಕಾಲ ರಾಷ್ಟ್ರವನ್ನಾಳುವ ಸರ್ಕಾರವನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವ ಪೂರ್ಣವಾದ ಜವಾಬ್ದಾರಿ ಮತದಾರರ ಮೇಲಿದ್ದು, ಮತ ಎಂಬುವುದು ಒಂದು ಬ್ರಹ್ಮಾಸ್ತ್ರವಿದಂತೆ ಅದನ್ನು ಬಳಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡಲು ಕಾರಣೀಭೂತರಾಗಬೇಕೆಂದು ಶಾಸಕರು ಅಶೋಕ ಮನಗೂಳಿ ಅವರು ಮತದಾರರಿಗೆ ವಿನಂತಿಸಿದರು.

ವಿಜಯಪುರ -04 ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆ ಅಂಗವಾಗಿ ಸಿಂದಗಿ ಮತಕ್ಷೇತ್ರದ ಶಾಸಕರು ಅಶೋಕ ಮನಗೂಳಿ ಹಾಗೂ ಅವರ ಧರ್ಮಪತ್ನಿ ನಾಗರತ್ನ ಅಶೋಕ ಮನಗೂಳಿ ಯವರು ಮಲಘಾಣ ಗ್ರಾಮದ ಭೂತ್ ಸಂಖ್ಯೆ 106 ರಲ್ಲಿ ಕೇಂದ್ರದಲ್ಲಿ ಮತ ಚಲಾಯಿಸಿ ಅವರು ಮಾತನಾಡಿ, ಜಗತ್ತಿನ ಬೇರೆ ಬೇರೆ ದೇಶಗಳ ಸುಮಾರು 20 ರಾಜಕೀಯ ಪಕ್ಷಗಳು ಈ ಚುನಾವಣೆಯ ಅಧ್ಯಯನ ಮಾಡಲಿಕ್ಕೆ ಭಾರತಕ್ಕೆ ಬಂದಿದ್ದಾರೆ ಇದು ಅತ್ಯಂತ ಗಮನಾರ್ಹ ಅಂಶ. ಕಳೆದ ಒಂದು ತಿಂಗಳುಗಳ ಕಾಲ ನಮ್ಮೆಲ್ಲ ಕಾರ್ಯಕರ್ತರ ಪರಿಶ್ರಮದ ಫಲವಾಗಿ ವಿಜಯಪುರ ಮತ್ತು ಬಾಗಲಕೋಟ ಈ ಎರಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯುವ ಮೂಲಕ ನೀರಿಕ್ಷಿತ ಗೆಲುವನ್ನು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಳುತ್ತಿರುವ ಸರಕಾರ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮಂಕು ಭೂದಿ ಎರಚಿ ಸರಕಾರ ನಡೆಸಿದೆ ಇದನ್ನೆಲ್ಲ ಅರಿತ ಮತದಾರರ ಪ್ರಭುಗಳು ಬದಲಾವಣೆಯ ಭವಿಷ್ಯ ಬರೆಯಬೇಕು ಎಂದು ಮನವಿ ಮಾಡಿಕೊಂಡರು.

- Advertisement -

ಶಾಸಕರ ಧರ್ಮಪತ್ನಿ ನಾಗರತ್ನ ಅಶೋಕ ಮನಗೂಳಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದೆ ಅದರಂತೆ ಕೇಂದ್ರ ಸರಕಾರ ರಚನೆಗೆ ಸಹಕಾರ ನೀಡಿದರೆ 5 ಗ್ಯಾರಂಟಿಗಳ ಜೊತೆಗೆ ಇನ್ನೂ 25 ಗ್ಯಾರಂಟಿಗಳನ್ನು ಪಡೆಯಬಹುದು ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮೇಲೇಳಲು ಸಾಧ್ಯವಾಗುತ್ತದೆ ಕಾರಣ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವ ಸರಕಾರ ರಚನೆಗೆ ತಮ್ಮೆಲ್ಲರ ಆಶೀರ್ವಾದವಿರಲಿ ಎಂದರು.

 

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group