ಸಿಂದಗಿ : ಮಕ್ಕಳಿಗೆ ವರ್ತಮಾನದಲ್ಲಿ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ. ಶಾಲೆಗಳಲ್ಲಿ ಮಕ್ಕಳು ತಮ್ಮನ್ನು ತಾವು ಅರಿತು ಕೊಳ್ಳುವ ಶಕ್ತಿ ತುಂಬುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕು ಎಂದು ಶಿಕ್ಷಕ ಸಾಹಿತಿ ಬಸವರಾಜ ಅಗಸರ ಹೇಳಿದರು.
ಪಟ್ಟಣದ ಬಂದಾಳ ರಸ್ತೆಗೆ ಹೊಂದಿ ಕೊಂಡಿರುವ ಸುಣಗಾರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶ್ರೀ ಬಸವೇಶ್ವರ ಭಂಡಾರಿ ಮಠ ಬೇಸಿಗೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಬೇಸಿಗೆ ಸಂಭ್ರಮ ಕಾರ್ಯಕ್ರಮ ಅವರು ಭಾಗವಹಿಸಿ ಮಾತನಾಡಿ, ಪವಿತ್ರ ಭೂಮಿಯ ಮೇಲೆ ನಾವು ನೆಲೆಸಿರುವದರಿಂದ ನಮ್ಮಗೆ ಜ್ಞಾನ ತಿಳಿವಳಿಕೆ ಅವಶ್ಯ ಇದೆ ಆ ಜ್ಞಾನವು ಶಿಕ್ಷಕರು ತಿಳಿಸಿದಾಗ ಆಗ ಮಾತ್ರ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ. ಇಂದಿನ ದಿನಗಳಲ್ಲಿ ಮಕ್ಕಳನ್ನು ಜಾಗತಿಕವಾಗಿ ವಿಶ್ವಮಾನವನನ್ನಾಗಿ ಬೆಳೆಸುವ ಅಗತ್ಯವಿದ್ದು ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು ಮತ್ತು ಶಿಕ್ಷಣದ ಪಾತ್ರ ಅವಶ್ಯ ಇದೆ ಎಂದರು.
ವಿಜಯಪುರದ ಖಾಸಗಿ ಸ್ವರ್ಧಾ ಕೇಂದ್ರದ ಉಪನ್ಯಾಸಕ ಸಾಹಿತಿ ಬಿ ಎಸ್ ಪೂಜಾರ ಮಾತನಾಡಿ, ಮಕ್ಕಳಿಗೆ ಸಂವಹನ, ಸಹಕಾರ ಮತ್ತು ಸಂಘರ್ಷ ಪರಿಹಾರದಂತಹ ನಿರ್ಣಾಯಕ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಬೇಕಲ್ಲದೆ ಮಕ್ಕಳು ತಮ್ಮ ಗೆಳೆಯರೊಂದಿಗೆ ಸಂವಹನ ನಡೆಸಲು ಶಿಕ್ಷಕರು ಪ್ರೇರಣೆ ನೀಡಬೇಕು. ಶಿಕ್ಷಣವು ಮಕ್ಕಳನ್ನು ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ಸಾಂಸ್ಕೃತಿಕ ಮೂಲಕ ಸಹಾನುಭೂತಿಯನ್ನು ಬೆಳೆಸಲು ಶಿಕ್ಷಕರು ನಿರಂತರ ಸಹಾಯ ಮಾಡಬೇಕು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಉತ್ತಮ ಶಿಕ್ಷಣದ ಅವಶ್ಯ ಇದೆ ಉತ್ತಮ ಶಿಕ್ಷಣವು ಮಗುವಿನ ವ್ಯಕ್ತಿತ್ವವನ್ನು ರೂಪಿಸಲು ಶಾಲಾ ಪಠ್ಯಕ್ರಮ ಮತ್ತು ಶಾಲಾ ಆವರಣದಲ್ಲಿ ಸುಧಾರಿತ ಸಂಪನ್ಮೂಲಗಳನ್ನು ನೀಡುವುದರಿಂದ ಶಾಲಾ ಆವರಣದಲ್ಲಿ ಮತ್ತು ಹೊರಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನಿರಂತರವಾಗಿ ತಲುಪಿಸಲು ಅನುಕೂಲವಾಗುವಂತೆ ಅನುಭವಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಸ್ಕರಿಸಿದ ನಡವಳಿಕೆ ಮತ್ತು ಕೌಶಲ್ಯಗಳ ವರ್ಧನೆಯನ್ನು ಉತ್ತೇಜಿಸಲು .ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಅತ್ಯುತ್ತಮ ಆವೃತ್ತಿಯಾಗಲು ಪ್ರೋತ್ಸಾಹಿಸಬೇಕು. ಶಾಲೆಯು ಮಕ್ಕಳಿಗೆ ಜ್ಞಾನದ ಜೊತೆಗೆ ಉತ್ತಮ ಶಿಕ್ಷಣ ನೀಡುವದರಿಂದ ಅವರ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಶಿಕ್ಷಕ ಸಾಹಿತಿ ಮಲ್ಲಿಕಾರ್ಜುನ ಧರಿ ಮಾತನಾಡಿ ಮಕ್ಕಳಿಗೆ ವಿಮರ್ಶಾತ್ಮಕ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಬೆಳೆಸುವ ಮೂಲಕ ಮಕ್ಕಳು ವಿವಿಧ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಪರಿಕಲ್ಪನೆಗಳ ಮೇಲೆ ಸ್ಪಷ್ಟತೆಯನ್ನು ಜೀವನದಲ್ಲಿ ಹೊಂದುತ್ತಾರೆ ಎಂದು ತಿಳಿಸಿದರು..
ಬೇಸಿಗೆ ಶಿಬಿರದ ಸಂಚಾಲಕ ಶಿವಲಿಂಗಯ್ಯ ಭಂಡಾರಿಮಠ. ಶಿಕ್ಷಕ ಮೌನೇಶ ಬಡಿಗೇರ. ಸರಿತಾ ರಾಠೋಡ, ಶಿವುಕುಮಾರ ಸರ್.ಜನಾರ್ಧನ ಸರ್ ಇದ್ದರು.
ಲಕ್ಷ್ಮೀ ಶಿವಲಿಂಗಯ್ಯ ಭಂಡಾರಿಮಠ ಸ್ವಾಗತಿಸಿದರು. ಶಿಕ್ಷಕ ಕವಿ ಮಂಜುನಾಥ ತಳವಾರ ನಿರೂಪಿಸಿದರು, ಪ್ರಕಾಶ ಪೂಜಾರಿ ವಂದಿಸಿದರು.