- Advertisement -
ಮೂಡಲಗಿ – ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕದ ಗೌಳಿ ಗಲ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೩ (ಮತಗಟ್ಟೆ ನಂ. ೧೩೩) ರಲ್ಲಿ ಮತ ಚಲಾಯಿಸಿದರು.
ಕೌಜಲಗಿಯಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಮ್ಮ ಮತ ಚಲಾಯಿಸಿದರು.
ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಡೆ ಉತ್ಸಾಹದ ಮತದಾನ ಆರಂಭವಾಯುತಾದರೂ ಕೊನೆಯ ಘಳಿಗೆಯಲ್ಲಿ ನಿರುತ್ಸಾಹಗೊಂಡು ಕೇವಲ ಶೇ.೫೪.೮೫ ರಷ್ಟು ಮತದಾನವಾಗಿದೆಯೆಂಬುದಾಗಿ ವರದಿಯಾಗಿದೆ.
- Advertisement -
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಶೇ.೬೭ ರಷ್ಟು ಮತದಾನವಾದರೆ ಒಟ್ಟಾರೆ ೧೪ ಕ್ಷೇತ್ರಗಳ ಮತದಾನ ಪ್ರಮಾಣ ಶೇ. ೬೬.೦೫ ಆಗಿದೆಯೆಂದು ವರದಿಯಾಗಿದೆ.