ಸಿಂದಗಿ; ೨೦೧೮ರಲ್ಲಿ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಮಿನಿವಿಧಾನ ಸೌಧದ ಮೊದಲ ಹಂತದ ಕಾಮಗಾರಿಗೆ ರೂ.೯.೭೫ಕೋಟಿ ಮಂಜೂರು ಮಾಡಿಸಿದ್ದರು ಅದು ಅರ್ಧಕ್ಕೆ ನಿಂತುಹೋಗಿತ್ತು ಅದನ್ನು ಪೂರ‍್ಣಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರು ರೂ ೫ ಕೋಟಿ ಅನುದಾನ ಮಂಜೂರು ನೀಡಿದ್ದು ಅಲ್ಲದೆ ಕಂಪೌಂಡ ನಿರ‍್ಮಾಣಕ್ಕೆ ಪೌರಾಡಳಿತ ಸಚಿವ ರಹಿಮಖಾನ ಅವರು ರೂ ೧ ಕೋಟಿ ನೀಡಿದ್ದು ಅವರಿಗೆ ಸಿಂದಗಿ ಮತಕ್ಷೇತ್ರದ ಪರವಾಗಿ ಶಾಸಕ ಅಶೋಕ ಮನಗೂಳಿ ಅಭಿನಂದನೆ ಸಲ್ಲಿಸಿದರು.
ಪಟ್ಟಣದಲ್ಲಿ ನಿರ‍್ಮಾಣಗೊಳ್ಳುತ್ತಿರುವ ಮಿನಿ ವಿಧಾನ ಸೌಧ ೨ನೇ ಹಂತದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ‍್ಶಿಕೆ ೨೦೨೫-೨೬ನೇ ಸಾಲಿನ ೪೦೫೯-೮೦-೦೫೧-೦-೩೦-೩೮೬ರಡಿ ಮಂಜೂರಾದ ರೂ. ೫ ಕೋಟಿ ಹಾಗೂ ಪುರಸಭೆ ಸನ್ ೨೦೨೪-೨೫ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಪೌರಾಡಳಿತ ಇಲಾಖೆಯಿಂದ ಮಂಜೂರಾದ ರೂ ೧ ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಮತಕ್ಷೇತ್ರ ಅಭಿವೃದ್ಧಿಗೆ ರೂ ೪೦ ಕೋಟಿ ಅನುದಾನ ನೀಡಿದ್ದು ಅದು ರೂ ೨೮ ಕೋಟಿ ಪಟ್ಟಣದ ಅಭಿವೃದ್ಧಿಗೆ ನೀಡಲಾಗಿದೆ. ಗಾಂಧಿಜಿ ವೃತ್ತದಿಂದ ಡಾಲಫನ್ ದಾಬಾವರೆಗೆ ದ್ಚೀಪಥ ರಸ್ತೆ ಕಾಮಗಾರಿಗೆ ರೂ ೫ ಕೋಟಿ, ಮೇಘಾ ಮಾರ‍್ಕೇಟ ನಿರ‍್ಮಾಣಕ್ಕೆ ರೂ ೨೮ ಕೋಟಿ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ತಹಶೀಲ್ದಾರ ಕಛೇರಿಯು ಅತೀ ಬೇಗ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸಿದರೆ ಪುರಸಭೆ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಠರಾವು ಮಾಡಲಾಗಿದ್ದು ಇದರಿಂದ ಪಟ್ಟಣದ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಈ ಮತ ಕ್ಷೇತ್ರದ ಜನತೆ ಹಾಕಿದ ಮತ ಹಾಳಾಗದೇ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಒಂದೇ ಸೂರಿನಡಿ ಎಲ್ಲ ಇಲಾಖೆಗಳನ್ನು ಒಂದುಗೂಡಿಸುವ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಶಾಂಸಕರ ಸಂಪರ‍್ಕ ಕಛೇರಿ ಸ್ಥಾಪಿಸುವುದರಿಂದ ಸಾರ‍್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಸಾಯಬಣ್ಣ ಪುರದಾಳ ಒತ್ತಾಯಿಸಿದರು.
ಈ ಸಂದರ‍್ಭದಲ್ಲಿ ತಹಶೀಲ್ದಾರ ಕರೆಪ್ಪ ಬೆಳ್ಳಿ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಬ್ಲಾಕ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ, ಸದಸ್ಯರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ಬಿಸನಾಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ವೇದಿಕೆ ಮೇಲಿದ್ದರು.
ಈ ಸಂದರ‍್ಭದಲ್ಲಿ ಬಿ.ಜಿ.ನೆಲ್ಲಗಿ ವಕೀಲರು, ರಜತ ತಾಂಬೆ, ಶರಣಪ್ಪ ಸುಲ್ಪಿ, ಸಿದ್ದು ಮಲ್ಲೇದ, ಸಿ.ಎಂ.ದೇವರಡ್ಡಿ, ಜಯಶ್ರೀ ಹದನೂರ, ಶಶಿಕಲಾ ಅಂಗಡಿ, ಅಂಬರೀಶ ಚೌಗಲೆ ಸೇರಿದಂತೆ ಅನೇಕರಿದ್ದರು.