ಸಿಂದಗಿ : ರೈತರ ಸಮಸ್ಯೆಗಳಾದ ತಮ್ಮ ಹೊಲಕ್ಕೆ ಹೋಗಲು ರಸ್ತೆಗಳು, ಬೆಳೆದ ಕಬ್ಬು ಫ್ಯಾಕ್ಟರಿ ಗೆ ಸಾಗಿಸಲು ಸರಿಯಾದ ರಸ್ತೆಗಳು ಇರದೇ ಇರುವದು, ಶೌಚಾಲಯ ಸಮಸ್ಯೆಗಳನ್ನು ನಾಲ್ಕು ಹಳ್ಳಿಗಳು ಎದುರಿಸುತ್ತಿವೆ ಆದ್ದರಿಂದ ಅವುಗಳನ್ನು ಬೇಗ ಪರಿಹರಿಸಲಾಗುವದು ಹಾಗೂ ಕಳೆದ ೧೫ ದಿನಗಳಿಂದ ವಿದ್ಯುತ್ ಸಮಸ್ಯೆ ಆಗುತ್ತಿದ್ದು ಅದನ್ನು ಕೂಡ ಪರಿಹರಿಸಲಾಗುವದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.
ತಾಲ್ಲೂಕಿನ ಯರಗಲ್ಲ ಬಿಕೆ ಗ್ರಾಮದಲ್ಲಿ ಶಾಸಕರ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಖ್ಮಂಯತ್ರಿಗಳಾದ ಸಿದ್ದರಾಮಯ್ಯ ನವರ ಮಾರ್ಗದರ್ಶನದಂತೆ ನಾವು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದೇವೆ ಹಾಗೂ ತಮ್ಮ ಬಹುದಿನಗಳ ಬೇಡಿಕೆಯಂತೆ ಒಂದು ತಿಂಗಳಲ್ಲಿ ಪಶು ಆಸ್ಪತ್ರೆ ಆರಂಭಿಸಲಾಗುವದು ಎಂದು ಹೇಳಿದ ಅವರು ನಮ್ಮ ಸರ್ಕಾರ ೫ ಗ್ಯಾರಂಟಿ ಗಳನ್ನು ಕೂಡ ಅತ್ಯಂತ ಪಾರದರ್ಶಕವಾಗಿ ಕೆಲಸಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ ಅಲ್ಲದೆ ಕಾಳಮ್ಮ ದೇವಸ್ಥಾನ ಎದುರಿಗೆ ರೂ.೨೫ ಲಕ್ಷಗಳ ಸಿಸಿ ರಸ್ತೆ ನಿರ್ಮಾಣ, ಬ್ಯಾಲಿಹಾಳ ಬಂಕಲಗಿ ರಸ್ತೆ ಹಂತ ಹಂತ ವಾಗಿ ಅನುದಾನ ತಂದು ಕೆಲಸ ನಿರ್ವಹಿಸಲಾಗುವದು ಎಂದರು.
ಗ್ರಾಮಸ್ಥರು ಮಾತನಾಡಿ, ನಾಲ್ಕನೇ ವಾರ್ಡ್ ನಲ್ಲಿ ಮಳೆಗಾಲದಲ್ಲಿ ಎರಡು ಮತ್ತು ಮೂರು ವಾರ್ಡ್ ಪ್ರದೇಶದ ನೀರು ಬಂದು ನಿಲ್ಲುತ್ತೆ ಆದ್ದರಿಂದ ಅದನ್ನು ಹಳ್ಳಕ್ಕೆ ಪೈಪ್ ಮೂಲಕ ಸೇರಿಸಬೇಕು. ಯರಗಲ್ ಗ್ರಾಮದಲ್ಲಿ ಹಳೆಯ ಕಂಬಗಳು ಇವೆ ಅವುಗಳನ್ನು ಸರಿಪಡಿಸುವಂತೆ ಮನವಿ ಮಾಡಿದರು ಅದಕ್ಕೆ ಪ್ರತಿಯಾಗಿ ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ ಈಗಾಗಲೇ ಹೊಸ ಕಂಬಗಳು ತಂದಿದ್ದು ಆದ್ದರಿಂದ ಬೇಗ ಹೊಸ ಕಂಬಗಳು ಅಳವಡಿಸಲಾಗುವದು ಎಂದು ಹೇಳಿದರು.
ಗ್ರಾಮದಲ್ಲಿ ಚರಂಡಿಗಳು ನಿರ್ವಹಣೆ ಮಾಡದೇ ಇರುವದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಆದ್ದರಿಂದ ಸ್ವಚ್ಛತೆ ಮತ್ತು ಅವಶ್ಯಕತೆ ಇದ್ದಲ್ಲಿ ನೂತನ ಚರಂಡಿ ಕಾಮಗಾರಿ ಕೈಕೊಳ್ಳುವಂತೆ, ಸರಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡುವಂತೆ ಬಂಕಲಗಿ ಮತ್ತು ಬ್ಯಾಲಿಹಾಳ ಗ್ರಾಮದ ಶಾಲಾ ಮಕ್ಕಳು ೯,೧೦ ನೇ ತರಗತಿ ಗೆ ಯಂಕಂಚಿಗೆ ಹೋಗುತ್ತಿದ್ದು ಆದ್ದರಿಂದ ತಾವು ಹೈಸ್ಕೂಲ್ ಆರಂಭಿಸುವಂತೆ ಹಾಗೂ ಗ್ರಾಮದ ಆಂಜನೇಯ ದೇವಸ್ಥಾನ ಹತ್ತಿರ ಚರಂಡಿ ನಿರ್ಮಾಣ ಮಾಡುವಂತೆ ಗ್ರಾಮದಲ್ಲಿ ಸುಮಾರು ೮೦ ಜನ ವಿದ್ಯಾರ್ಥಿಗಳು ಸಿಂದಗಿ ನಗರಕ್ಕೆ ಶಾಲಾ ಕಾಲೇಜು ಗಳಿಗೆ ಹೋಗುತ್ತಿದ್ದು ಆದ್ದರಿಂದ ಸಂಜೆ ೩ ಗಂಟೆ ಯಿಂದ ೫ ಗಂಟೆ ವರೆಗೆ ಬಸ್ಸಿನ ಸೌಲಭ್ಯ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ಅದಕ್ಕೆ ಪಿಡಿಓ ಅದನ್ನು ಸರಿಪಡಿಸಲಾಗುವದು ಎಂದು ತಿಳಿಸಿದರು.
ಬಂಕಲಗಿ ಗ್ರಾಮದಲ್ಲಿ ಗ್ರಾಮ ದೇವತೆ ರಸ್ತೆ ಇರುವದಿಲ್ಲ ಆದ್ದರಿಂದ ಸಿಸಿ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಶಾಸಕರು ಒಂದು ಕೋಟಿ ರೂ ಗಳು ಸಿಸಿ ರಸ್ತೆ ಮಂಜೂರು ಆಗಿದ್ದು ಹಾಗಾಗಿ ಕಾಮಗಾರಿ ಮಾಡಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಯಡ್ರಾಮಿ, ಸೇರಿದಂತೆ ಪಂಚಾಯತ್ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು