spot_img
spot_img

ಹಿಂದೂ ಸಾಮ್ರಾಜ್ಯಕ್ಕಾಗಿ ಶಿವಾಜಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದರು – ಇಂದಿರಾಬಾಯಿ ಬಳಗಾನೂರ

Must Read

spot_img
- Advertisement -

ಸಿಂದಗಿ; ಭಾರತ ಭೂಮಿ ಅನಾದಿ ಕಾಲದಿಂದಲೂ ಅನೇಕ ಬಲಿಷ್ಠ, ದೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಹಾನಾಯಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಅದರಂತೆ ಹಿಂದೂ ಸಾಮ್ರಾಜ್ಯವನ್ನು ಉಳಿಸುವ ಸಲುವಾಗಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಜೀವವನ್ನು ಲೆಕ್ಕಿಸದೇ ಹಿಂದೂಗಳ ರಕ್ಷಣೆ ಮಾಡಿದ್ದು ಇತಿಹಾಸವಿದೆ ಕಾರಣ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದು ಗ್ರೆಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ೩೯೮ನೇ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಪನ್ಯಾಸಕ ಧಶರಥ ಚವ್ಹಾಣ ಮಾತನಾಡಿ, ಮಹಾನ್ ದೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡಾ ಒಬ್ಬರು .ಸ್ವರಾಜ್ಯ ಸುಶಾಸನದ ಪರಂಪರೆ ನೀಡಿದ ಮಹಾನ್ ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವನ್ನು ಪ್ರತಿವರ್ಷ ಸರಕಾರ ಫೆ. ೧೯ ರಂದು ಆಚರಿಸುವ ಕಾರ್ಯ ಶ್ಲಾಘನೀಯ ಎಂದರು.

- Advertisement -

ಈ ಸಂದರ್ಭದಲ್ಲಿ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಸಿ.ಬಿ.ಬಾಬಾನಗರ, ಪುರಸಭೆ ಸಿನೆಟರಿ ಅಧಿಕಾರಿ ಇಂದುಮತಿ ಮಣ್ಣುರ, ಚಂದ್ರಶೇಖರ ದೇವರಡ್ಡಿ, ತಾಲೂಕಾ ಮರಾಠಾ ಸಮಾಜ ಅಧ್ಯಕ್ಷ ಶಾಮರಾವ ಚವ್ಹಾಣ, ಸುನೀಲ ಜಾಧವ, ರಾವಜಿ ಚವ್ಹಾಣ, ಭೂನ್ಯಾಯ ಮಂಡಳಿ ಸದಸ್ಯ ವಿಠ್ಠಲ ಖೇಡಗಿ, ರಾಮು ದಬಕೆ , ಆರ್. ಪಿ .ಜ್ಯೋಶಿ, ಆಸ್ಪಾಕ್ ಕೊಲಾರ,ಸೇರಿದಂತೆ ಅನೇಕರಿದ್ದರು.
ಜಗದೀಶ ಶಹಾಪುರ ಸ್ವಾಗತಿಸಿ ನಿರೂಪಿಸಿದರು. ಗಂಗಾಧರ ಸೊಮನಾಯಕ ವಂದಿಸಿದರು.

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group